WPL 2025 RCB VS GG: ತವರಿನಲ್ಲೇ ಬೆಂಗಳೂರು ತಂಡಕ್ಕೆ ಮತ್ತೆ ಮುಖಭಂಗ! RCBಗೆ ಹ್ಯಾಟ್ರಿಕ್ ಸೋಲು

ಫೆಬ್ರವರಿ 28, 2025 - 10:58
 0  8
WPL 2025 RCB VS GG: ತವರಿನಲ್ಲೇ ಬೆಂಗಳೂರು ತಂಡಕ್ಕೆ ಮತ್ತೆ ಮುಖಭಂಗ! RCBಗೆ ಹ್ಯಾಟ್ರಿಕ್ ಸೋಲು

ಆರ್‌ಸಿಬಿ ತಂಡವು ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ ಮೂರನೇ ಪಂದ್ಯದಲ್ಲಿ ಸೋತಿದೆ. ಜಿಜಿ ತಂಡ ಸತತ ಎರಡನೇ ಗೆಲುವು ಸಾಧಿಸಿದೆ. ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಮಂಧನಾ ಪಡೆಗೆ 6 ವಿಕೆಟ್‌ಗಳ ಹೀನಾಯ ಸೋಲು ಎದುರಾಯಿತು.

ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 20 ಓವರಲ್ಲಿ 7 ವಿಕೆಟ್‌ಗೆ 125 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಗುಜರಾತ್‌ ಇನ್ನೂ 3.3 ಓವರ್‌ ಬಾಕಿ ಇರುವಂತೆಯೇ ಗುರಿ ತಲುಪಿತು. ಅಗ್ರ ಕ್ರಮಾಂಕ ಫ್ಲಾಪ್‌: ಆರ್‌ಸಿಬಿಗೆ ಅಗ್ರ ಕ್ರಮಾಂಕ ಕೈಕೊಟ್ಟಿತು. ಡ್ಯಾನಿಯಲ್‌ ವ್ಯಾಟ್‌ 4, ಎಲ್ಲೀಸ್‌ ಪೆರ್ರಿ 0, ಸ್ಮೃತಿ ಮಂಧನಾ 10 ರನ್‌ಗೆ ಔಟಾದರು. ಮೊದಲ 6 ಓವರಲ್ಲಿ ಆರ್‌ಸಿಬಿ 3 ವಿಕೆಟ್‌ಗೆ ಕೇವಲ 26 ರನ್‌ ಗಳಿಸಿತು. ರಾಘವಿ ಬಿಸ್ತ್‌ (22), ಕನಿಕಾ ಅಹುಜಾ (33), ಜಾರ್ಜಿಯಾ ವೇರ್‌ಹ್ಯಾಮ್‌ (20*), ಕಿಮ್‌ ಗಾರ್ಥ್‌ (14) ಹೋರಾಟ ನಡೆಸಿ ತಂಡದ ಮೊತ್ತ 100 ರನ್‌ ದಾಟಲು ನೆರವಾದರು.

ಸುಲಭ ಗುರಿ ಬೆನ್ನತ್ತಿದ ಗುಜರಾತ್‌ಗೆ ನಾಯಕಿ ಆಶ್ಲೆ ಗಾರ್ಡ್ನರ್‌ರ ಅರ್ಧಶತಕ ನೆರವಾಯಿತು. ಕೇವಲ 31 ಎಸೆತದಲ್ಲಿ 6 ಬೌಂಡರಿ, 3 ಸಿಕ್ಸರ್‌ನೊಂದಿಗೆ 58 ರನ್‌ ಸಿಡಿಸಿ, ಈ ಆವೃತ್ತಿಯಲ್ಲಿ 3ನೇ ಅರ್ಧಶತಕ ದಾಖಲಿಸಿದರು. ಫೋಬ್‌ ಲಿಚ್‌ಫೀಲ್ಡ್‌ ಔಟಾಗದೆ 30 ರನ್‌ ಕೊಡುಗೆ ನೀಡಿದರು.

ಆರ್‌ಸಿಬಿಗೆ ಲೀಗ್‌ ಹಂತದಲ್ಲಿ ಇನ್ನು 3 ಪಂದ್ಯ ಬಾಕಿ ಇದ್ದು, ಅಂಕಪಟ್ಟಿಯಲ್ಲಿ ಅಗ್ರ-3ರೊಳಗೆ ಸ್ಥಾನ ಉಳಿಸಿಕೊಂಡು ಪ್ಲೇ-ಆಫ್‌ ಪ್ರವೇಶಿಸಬೇಕಿದ್ದರೆ ಬಾಕಿ ಇರುವ ಮೂರೂ ಪಂದ್ಯಗಳನ್ನು ಗೆಲ್ಲಬೇಕಿದೆ. ಸ್ಕೋರ್‌: ಆರ್‌ಸಿಬಿ 20 ಓವರಲ್ಲಿ 125/7 (ಕನಿಕಾ 33, ರಾಘವಿ 22, ತನುಜಾ 2-16, ಡಾಟಿನ್‌ 2-31), ಗುಜರಾತ್‌ 16.3 ಓವರಲ್ಲಿ 126/4 (ಗಾರ್ಡ್ನರ್‌ 58, ಲಿಚ್‌ಫೀಲ್ಡ್‌ 30*, ರೇಣುಕಾ 2-24)

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow