Zaheer Khan: ತಂದೆಯಾದ ಖುಷಿಯಲ್ಲಿ ಟೀಮ್ ಇಂಡಿಯಾದ ಮಾಜಿ ವೇಗಿ..! 8 ವರ್ಷಗಳ ಬಳಿಕ ಪುಟ್ಟ ಮಗುವಿನ ಆಗಮನ

ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಮತ್ತು ಭಾರತದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಪೋಷಕರಾಗಿದ್ದಾರೆ. ಹೌದು ಮನೆಗೆ ಒಬ್ಬ ಪುಟ್ಟ ಅತಿಥಿ ಬಂದಿದ್ದಾನೆ. 8 ವರ್ಷಗಳ ಬಳಿಕ ಸ್ಟಾರ್ ದಂಪತಿ ಮನೆಗೆ ಪುಟ್ಟ ಮಗುವಿನ ಆಗಮನವಾಗಿರುವುದು ಮನೆಯಲ್ಲಿ ಸಂಭ್ರಮ ಹೆಚ್ಚು ಮಾಡಿದೆ. ಝಹೀರ್ ಖಾನ್ ಹಾಗೂ ಸಾಗರಿಕಾ ಘಾಟ್ಗೆ 2017 ರಲ್ಲಿ ವಿವಾಹವಾಗಿದ್ದರು. ಇದೀಗ ಈ ದಂಪತಿಯ ಪ್ರೀತಿಯ ಸಂಕೇತವಾಗಿ ಪುಟ್ಟ ಪುಟಾಣಿಯ ಆಗಮನವಾಗಿದೆ.
ಝಹೀರ್ ಖಾನ್ ತಂದೆಯಾಗಿರುವ ಖುಷಿ ಸುದ್ದಿಯನ್ನು ಏಪ್ರಿಲ್ 16 ರ ಬೆಳಿಗ್ಗೆ ಅವರ ಪತ್ನಿ ಸಾಗರಿಕಾ ಘಾಟ್ಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಬಹಿರಂಗಪಡಿಸಿದ್ದರು. ಅಲ್ಲದೆ ತಮ್ಮ ಮನೆಯ ಹೊಸ ಸದಸ್ಯನಿಗೆ ಫತೇಹ್ ಸಿನ್ಹ್ ಖಾನ್ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.
ಫತೇಹ್ ಎಂದರೆ ವಿಜಯಶಾಲಿ ಎಂಬ ಅರ್ಥವಿದೆ. ಹಾಗೆಯೇ ಸಾಗರಿಕಾ ಘಾಟ್ಗೆ ರಜಪೂತ ವಂಶಸ್ಥರಾಗಿದ್ದು, ಹೀಗಾಗಿ ಮಗುವಿನ ಹೆಸರಿನ ಹಿಂದೆ ಸಿನ್ಹ್ ಸೇರಿಸಲಾಗಿದೆ. ಹಾಗೆಯೇ ಝಹೀರ್ ಖಾನ್ ಅವರ ಸರ್ನೇಮ್ ಖಾನ್ ಅನ್ನು ಸಹ ಮಗುವಿನ ಹೆಸರಿನೊಂದಿಗೆ ಮುಂದುವರೆಸಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಝಹೀರ್ ಖಾನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹುದ್ದೆಯೊಂದಿಗೆ ಬೌಲಿಂಗ್ ಕೋಚ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಬ್ಯುಸಿಯಾಗಿದ್ದ ಝಹೀರ್ ಖಾನ್, ಸಣ್ಣ ಬ್ರೇಕ್ನೊಂದಿಗೆ ಕೆಲ ದಿನಗಳ ಕಾಲ ಪತ್ನಿ ಹಾಗೂ ಮಗುವಿನೊಂದಿಗೆ ಕಾಲ ಕಳೆಯಲಿದ್ದಾರೆ ಎಂದು ವರದಿಯಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






