Zakir Hussain: ತಬಲಾ ಮಾಂತ್ರಿಕ ಝಾಕೀರ್ ಹುಸೇನ್ ನಿಧನ: ಹೇಗಿತ್ತು ಜೀವನ?

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಇಹಲೋಕ ತ್ಯಜಿಸಿದ್ದಾರೆ. ಜಾಕಿರ್ ಹುಸೇನ್ ಅವರು 73 ವಯಸ್ಸಾಗಿದ್ದು ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ ನಿಂದ ನಿಧನರಾದರು. ಹುಸೇನ್ ಅವರು ಪತ್ನಿ ಅಂಟೋನಿಯಾ ಮಿನ್ನೆಕೋಲಾ, ಪುತ್ರಿಯರಾದ ಅನಿಸಾ ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ, ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಝಾಕೀರ್ ಹುಸೇನ್ರನ್ನ ವಿಶ್ವದ ಶ್ರೇಷ್ಠ ತಬಲಾವಾದಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದ್ದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಹುಸೇನ್ ಮನೆತನದಲ್ಲಿ ಸಂಗೀತವು ಕೇವಲ ಒಂದು ಕಲಾ ಪ್ರಕಾರವಾಗಿರಲಿಲ್ಲ. ಅದು ಅವರು ಉಸಿರಾಡುವ ಗಾಳಿಯಾಗಿತ್ತು. ಚಿಕ್ಕ ವಯಸ್ಸಿನಿಂದಲೂ, ಝಾಕೀರ್ ತಬಲಾ ಬಡಿತಗಳ ಸಂಕೀರ್ಣದ ಜಗತ್ತಿನಲ್ಲಿ ಮುಳುಗಿ, ತನ್ನ ತಂದೆಯ ಸಂಗೀತ ಬೋಧನೆಗಳನ್ನು ಹೀರಿಕೊಳ್ಳುತ್ತಾ ವಾದ್ಯದ ಬಗ್ಗೆ ಸಹಜ ತಿಳುವಳಿಕೆಯನ್ನು ಬೆಳೆಸಿಕೊಂಡರು. ಮುಂದೆ ಉಸ್ತಾದ್ ಜಾಕೀರ್ ಹುಸೇನ್ ಅವರು ತಮ್ಮ ಏಳನೇ ವಯಸ್ಸಿನಲ್ಲಿ ಸಂಗೀತ ಕಚೇರಿಗಳಲ್ಲಿ ತಬಲಾ ನುಡಿಸಲು ಪ್ರಾರಂಭಿಸಿದರು. ತಮ್ಮ ಕೌಶಲ್ಯ ಮತ್ತು ನಾವೀನ್ಯತೆಯಿಂದ ಅಭೂತಪೂರ್ವ ಜಾಗತಿಕ ಮನ್ನಣೆಗೆ ಪಾತ್ರರಾದರು.
ನಿಮ್ಮ ಪ್ರತಿಕ್ರಿಯೆ ಏನು?






