Zoya Khan: ಕೊನೆಗೂ ಪೊಲೀಸರ ಕೈ ಸಿಕ್ಕಿಬಿದ್ದ ಲೇಡಿ ಡಾನ್..! ಯಾರು ಈ ಜೋಯಾ ಖಾನ್? ಇಲ್ಲಿದೆ ಮಾಹಿತಿ

'ದಿಲ್ಲಿಯ ಲೇಡಿ ಡಾನ್' ಎಂದೇ ಕುಖ್ಯಾತಿ ಪಡೆದಿರುವ ಜೋಯಾ ಖಾನ್ ಅವರನ್ನು ಪೊಲೀಸರು ಪ್ರಮುಖ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ದರೋಡೆಕೋರ ಹಾಶಿಂ ಬಾಬಾ ಅವರ 33 ವರ್ಷದ ಪತ್ನಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 1 ಕೋಟಿ ರೂ. ಮೌಲ್ಯದ 270 ಗ್ರಾಂ ಹೆರಾಯಿನ್ನೊಂದಿಗೆ ಬಂಧಿಸಲಾಗಿದೆ. ಈಶಾನ್ಯ ದೆಹಲಿಯ ವೆಲ್ಕಮ್ ಪ್ರದೇಶದಿಂದ ಜೋಯಾ ಅವರನ್ನು ಬಂಧಿಸಲಾಗಿದೆ.
ಲೇಡಿ ಡಾನ್ ಎಂದೇ ಗುರುತಿಸಿಕೊಂಡಿದ್ದ ಜೋಯಾ ತನ್ನ ಪತಿಯ ಅಕ್ರಮ ಚಟುವಟಿಕೆಗಳನ್ನು ಮುಂದೆ ನಿಂತು ನಡೆಸುತ್ತಿದ್ದಳು. ಆದ್ರೆ ಯಾವುದೇ ಪುರಾವೆಗಳಿಲ್ಲದ ಕಾರಣ ಆಕೆಯನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ದರೋಡೆಕೋರ ಹಾಶಿಮ್ ಬಾಬಾ, ಕೊಲೆ, ಸುಲಿಗೆ ಹಾಗೂ ಶಸ್ತ್ರಾಸ್ತ್ರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಬಂಧಿತನಾಗಿದ್ದು ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಜೋಯಾಳಿಗೆ ಹಾಶಿಮ್ 2ನೇ ಪತಿ, ಹಾಶಿಮ್ಗೆ ಜೋಯಾ 3ನೇ ಹೆಂಡತಿಯಾಗಿದ್ದಳು. 2017ರಲ್ಲಿ ಮೊದಲ ಪತಿಗೆ ವಿಚ್ಛೇದನ ನೀಡಿದ ಬಳಿಕ ಜೋಯಾ ಹಾಶಿಮ್ನನ್ನ ವಿವಾಹವಾಗಿದ್ದಳು ಎನ್ನಲಾಗಿದೆ.
ಜೋಯಾ ಬ್ಯಾಗ್ರೌಂಡ್ ಕಂಡು ಪೊಲೀಸರೇ ಶಾಕ್:
ಐಷಾರಾಮಿ ಜೀವನ ನಡೆಸುತ್ತಿದ್ದ ಜೋಯಾ ಪತಿ ಜೈಲು ಸೇರಿದ ನಂತರ ಖುದ್ದು ತಾನೇ ಅಂಡರ್ವರ್ಲ್ಡ್ಗೆ ಇಳಿದಿದ್ದಳು. ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪರ್ಕರ್ನಂತೆ ಗ್ಯಾಂಗ್ ಚಟುವಟಿಕೆ ನಡೆಸುತ್ತಿದ್ದಳು. ಡ್ರಗ್ಸ್, ಸುಲಿಗೆ ಸೇರಿದಂತೆ ಇನ್ನಿತರ ಪ್ರಕರಣಗಳಿಗೆ ಸಹಾಯ ನೀಡುತ್ತಿದ್ದಳು. ಆಗಾಗ್ಗೆ ಬ್ರ್ಯಾಂಡೆಡ್ ಬಟ್ಟೆ ಧರಿಸಿ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು, ಆದ್ರೆ ಈ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವೂ ಇರಲಿಲ್ಲ. ಇದರೊಂದಿಗೆ ಜೈಲಿನಲ್ಲಿ ಪತಿ ನೋಡಲು ಬಂದಾಗ ಹಾಶಿಮ್ ಬಾಬಾ ಜೊತೆಗೆ ಗ್ಯಾಂಗ್ನ ಚಟುವಟಿಕೆಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದಳು.
ಜೋಯಾ ತಾನೇ ಮುಂದೆ ನಿಂತು ಈ ಕುಕೃತ್ಯಗಳನ್ನು ನಡೆಸುತ್ತಿರುವುದು ಗೊತ್ತಾದ ಬಳಿಕ ಆಕೆಯನ್ನ ಬಂಧಿಸಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಲೇ ಇದ್ದರು. ಅಷ್ಟೇ ಚಾಣಾಕ್ಷತೆಯಿಂದ ಜೋಯಾ ಎಸ್ಕೇಪ್ ಆಗುತ್ತಿದ್ದಳು. ಈ ಸಂಬಂಧ ರಹಸ್ಯ ಕಾರ್ಯಾಚರಣೆ ನಡೆಸಿದ ದೆಹಲಿ ವಿಶೇಷ ಕೋಶದ ಎಸಿಪಿ ಸಂಜಯ್ ದತ್ ಮತ್ತು ಇನ್ಸ್ಪೆಕ್ಟರ್ ಸಂದೀಪ್ ದಾಬಸ್ ನೇತೃತ್ವದ ತಂಡ ಲೇಡಿ ಡಾನ್ನನ್ನ ಡ್ರಗ್ಸ್ ಪ್ರಕರಣದಲ್ಲಿ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದೆ.
ಈಶಾನ್ಯ ದೆಹಲಿಯ ಸ್ವಾಗತ್ ಪ್ರದೇಶದಿಂದ ಡ್ರಗ್ಸ್ ಸರಬರಾಜು ಮಾಡುತ್ತಿದ್ದಾಗಲೇ ಆಕೆಯನ್ನ ಬಂಧಿಸಿದ್ದಾರೆ. ಈ ವೇಳೆ 1 ಕೋಟಿ ರೂ. ಮೌಲ್ಯದ ಹೆರಾಯಿನ್ ಜಪ್ತಿ ಮಾಡಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಅಲ್ಲದೇ ಗ್ಯಾಂಗ್ಸ್ಟರ್ ನಾದಿರ್ ಶಾ ಹತ್ಯೆ ಪ್ರಕರಣದಲ್ಲಿ ಶೂಟರ್ಗಳಿಗೆ ಆಶ್ರಯ ನೀಡುವಲ್ಲೂ ಜೋಯಾ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






