ಅಂಬರೀಶ್‌ ಮನೆಗೆ ಜೂನಿಯರ್ ಅಂಬಿ ಆಗಮನ! ಗಂಡು ಮಗುವಿಗೆ ಜನ್ಮ ನೀಡಿದ ಅಭಿಷೇಕ್ ಪತ್ನಿ ಅವಿವಾ

ನವೆಂಬರ್ 12, 2024 - 10:39
 0  18
ಅಂಬರೀಶ್‌ ಮನೆಗೆ ಜೂನಿಯರ್ ಅಂಬಿ ಆಗಮನ! ಗಂಡು ಮಗುವಿಗೆ ಜನ್ಮ ನೀಡಿದ ಅಭಿಷೇಕ್ ಪತ್ನಿ ಅವಿವಾ

ಬೆಂಗಳೂರು: ರೆಬೆಲೆ ಸ್ಟಾರ್ ಅಂಬರೀಷ್ ಮನೆಯಲ್ಲಿ ಈಗ ಖುಷಿ ಮನೆ ಮಾಡಿದೆಹೌದು ಅಭಿಷೇಕ್ ಪತ್ನಿ ಅವಿವಾ ಇಂದು 8.30ರ ಸುಮಾರಿಗೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು. ತಾಯಿ ಮಗು ಇಬ್ಬರೂ ಕೂಡ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಭಿಷೇಕ್ ಮತ್ತು ಅವಿವಾರ ಮದುವೆಯು ಕಳೆದ ವರ್ಷ ಜೂನ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಅವಿವಾ ಬಿದ್ದಪ್ಪ, ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಅವಿವಾ ತಂದೆ ಕೂಡ ದೊಡ್ಡ ಬ್ಯುಸಿನೆಸ್ ಮ್ಯಾನ್. ಇದೀಗ ಎರಡೂ ಕುಟುಂಬದಲ್ಲೂ ಸಂಭ್ರಮ ಮನೆ ಮಾಡಿದೆ.

ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೀಮಂತ ಕಾರ್ಯವನ್ನು ಮಾಡಿಸಿಕೊಂಡಿದ್ದ ಆವಿವಾ ಅಭಿಷೇಕ್ ಸದ್ಯದಲ್ಲಿಯೇ ಹೊಸ ಅತಿಥಿ ಬರಲಿದ್ದಾನೆ ಎಂಬ ಸಿಹಿ ಸುದ್ದಿಯನ್ನು ನೀಡಿದ್ದರು. ಇಂದು ಅವಿವಾ ಗಂಡು ಮಗುವಿಗೆ ಜನ್ಮ ನೀಡಿದ್ದು. ಕನ್ನಡದ ಧೀಮಂತ ನಟ, ಮಂಡ್ಯದ ಗಂಡು ಅಂಬರೀಶ್ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow