ಅಪಾಯದಲ್ಲಿದೆ ದೇಶದ ಷೇರುಪೇಟೆ! ಹಿಂಡನ್‌ಬರ್ಗ್‌ನ ಹೊಸ ರಿಪೋರ್ಟ್‌, ಸೆಬಿ ಮುಖ್ಯಸ್ಥರ ಕೈವಾಡ.!?

ಆಗಸ್ಟ್ 12, 2024 - 10:43
 0  12
ಅಪಾಯದಲ್ಲಿದೆ ದೇಶದ ಷೇರುಪೇಟೆ! ಹಿಂಡನ್‌ಬರ್ಗ್‌ನ ಹೊಸ ರಿಪೋರ್ಟ್‌, ಸೆಬಿ ಮುಖ್ಯಸ್ಥರ ಕೈವಾಡ.!?
Focus Karnataka stock market

ಅಮೆರಿಕದ 'ಹಿಂಡನ್‌ಬರ್ಗ್‌ ರಿಸರ್ಚ್‌' ಸಂಸ್ಥೆಯು ಸೆಬಿ ಮುಖ್ಯಸ್ಥರ ಮೇಲೆ ಮಾಡಿರುವ ಆರೋಪಗಳು ಭಾರತದ ಷೇರುಪೇಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಷೇರುಪೇಟೆಯ ವಿಶ್ವಾಸಾರ್ಹತೆಯ ಬಗ್ಗೆ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ದೇಶದ ರಿಟೇಲ್‌ ಹೂಡಿಕೆದಾರರ ಸಂಪತ್ತು ಅಪಾಯದಲ್ಲಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬಹಳ ಅಪಾಯವಿದೆ. ಷೇರು ಮಾರುಕಟ್ಟೆಯ ಮೇಲೆ ನಿಗಾವಹಿಸುವ ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿಯು (ಸೆಬಿ) ಹೊಂದಾಣಿಗೆ ಒಳಪಟ್ಟಿದೆ, ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ಇದನ್ನು ನಿಮ್ಮ ಗಮನಕ್ಕೆ ತರುವುದು ನನ್ನ ಕರ್ತವ್ಯವಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಸಾಗರೋತ್ತರ ಸಂಸ್ಥೆಗಳ ಹೂಡಿಕೆಗಳ ಮೂಲಕ ಷೇರು ಬೆಲೆಯ ವ್ಯತ್ಯಾಸಗಳಲ್ಲಿ ಕೈವಾಡ, ಕಾನೂನು ಬಾಹಿರವಾಗಿ ಷೇರು ಹೊಂದಿರುವ ಗಂಭೀರ ಆರೋಪಗಳು ಅದಾನಿ ಸಮೂಹದ ಮೇಲಿವೆ. ಆ ಫಂಡ್‌ಗಳಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಹಾಗೂ ಆಕೆಯ ಗಂಡನಿಗೆ ಸಂಬಂಧ ಇರುವ ಬಗ್ಗೆ ಈಗ ಆರೋಪಗಳು ಕೇಳಿ ಬಂದಿವೆ. ಇದು ಕ್ರಿಕೆಟ್‌ ಮ್ಯಾಚ್‌ನಲ್ಲಿ ಅಂಪೈರ್‌ ಹೊಂದಾಣಿಕೆ ಮಾಡಿಕೊಂಡಂತೆ ಆಗಿದೆ ಎಂದು ವಿವರಿಸಿರುವ ರಾಹುಲ್‌ ಗಾಂಧಿ, ಸರಕಾರದ ಮುಂದೆ 'ಪ್ರಾಮಾಣಿಕ ಹೂಡಿಕೆದಾರರ' ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಬ್ಯುರೊ ರಿಪೋರ್ಟ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow