ನಾವು ಗಂಡಸಲ್ಲ, ಅವನೊಬ್ಬನೇ ಗಂಡ್ಸು; ನಪುಂಸಕ ಎಂದ ಹೆಚ್‌ಡಿಕೆ ವಿರುದ್ಧ ಡಿಕೆಶಿ ಏಕವಚನದಲ್ಲಿ ವಾಗ್ದಾಳಿ.!

ಆಗಸ್ಟ್ 10, 2024 - 15:56
 0  48
ನಾವು ಗಂಡಸಲ್ಲ, ಅವನೊಬ್ಬನೇ ಗಂಡ್ಸು; ನಪುಂಸಕ ಎಂದ ಹೆಚ್‌ಡಿಕೆ ವಿರುದ್ಧ ಡಿಕೆಶಿ ಏಕವಚನದಲ್ಲಿ ವಾಗ್ದಾಳಿ.!
Focus Karnataka DK Shivakumar on Kumarswamy's comment

ನಾವು ಗಂಡಸರಲ್ಲ, ಅವನೊಬ್ಬನೇ ಗಂಡಸು. ನಮ್ಮ ಮೇಲೆ ಸುಳ್ಳು ಕೇಸ್‌ ಹಾಕಿ ಮಿಲಿಟರಿಯವರು ಬಂದು ಕರ್ಕೊಂಡು ಹೋಗ್ತಾರೆ ಜೈಲಿಗೆ ಹಾಕ್ತಾರೆಂದು ಹೇಳಿದ್ರು. ಇವನ ತಮ್ಮನೇ ಇವನಿಗೆ ಬೇನಾಮಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಡಿಕೆ ಶಿವಕುಮಾರ ನಪುಂಸಕ' ಎಂಬ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಡಿಕೆ ಶಿವಕುಮಾರ ಅವರು,  ಇವನ ತಮ್ಮ ಇವನಿಗೆ ಬೇನಾಮಿ ಆಸ್ತಿ. ಎಲ್ಲ ಮರೆತು ಸಿಎಂ ಮಾಡಿದ್ದಕ್ಕೋ? ನಾನು ಇವತ್ತಿಗೂ ಯುಟರ್ನ್ ಮಾಡಿದವನಲ್ಲ. ನೇರಾನೇರ ಫೈಟ್ ಮಾಡುವವನು. ಅವನಂತೆ ನಾನು ಮೂರ್ಖ ಅಲ್ಲ. ಅವನ ಅಣ್ಣನ ಮಗನ ಪೆನ್‌ಡ್ರೈವ್ ನಾನು ಹಂಚಿದೆ ಎಂದು ಹೇಗೆ ಹೇಳ್ತಾನೆ? ಅಶ್ವಥ್ ನಾರಾಯಣ ಕೂಡ ಬಿಚ್ಚಿಡಲಿ ಎಂದು ಹೇಳಿದ್ದ. ಮೋದಿ ಬಗ್ಗೆ, ಅಮಿತ್ ಶಾ ಬಗ್ಗೆ ಹಿಂದೆ ಅವನು ಏನು ಮಾತಾಡಿದ್ದ? ಎಂದು ಹರಿಹಾಯ್ದರು. 

ದೆಹಲಿಯಲ್ಲಿ ಯಾರಿಗೆ ಪತ್ರ ಕೊಟ್ಟಿದ್ದಾರೆ? ನಿಮ್ಮ ತಂದೆ ಮಾಜಿ ಪ್ರಧಾನಿ ಏನು ಮಾಡುತ್ತಿದ್ದಾರೆ ಎಂದು ಗೊತ್ತಿದೆ. ಇವರ ಅಣ್ಣ ಒಬ್ಬ ಇದಾನೆ, ವಿಚಾರಗಳು ಇದೆ ಎಂದು ಹೇಳಿದೆ, ದಾಖಲೆ ಇದೆ ಎಂದು ಹೇಳಿಲ್ಲ. ವಿಜಯೇಂದ್ರ ನನ್ನ ಮೇಲೆ ಹೇಳಿದ್ದ ಭ್ರಷ್ಟಾಚಾರದ ಪಿತಾಮಹ ಎಂದು. ನನ್ನ ಮೇಲೆ ಏಕೆ ಕೇಸ್‌ ಹಾಕಿದ್ದು ಅಂತಾ ವಿಜಯೇಂದ್ರಗೆ ಏನು ಗೊತ್ತಿದೆ? ನನ್ನ ಮೇಲಿನ ಕೇಸ್ ಕ್ವಾಸ್ ಆಗಿದೆ. ಮೆಟಿರಲ್ ಇದ್ರೆ ತೆಗಿ, ಗೌಪ್ಯವಾಗಿ ಇಟ್ಕೊಬೇಡ. ಗನ್‌ ಪಾಯಿಂಟ್ ಬೆದರಿಸಿದ್ರೆ ಕಂಪ್ಲೆಂಟ್ ಕೊಡಿ ಎಫ್‌ಐಆರ್ ಹಾಕಿಸಿ, ಕೇಸ್ ರಿಜಿಸ್ಟರ್ ‌ಮಾಡಿಸಿ, ನನಗೆ ದೇವರು ಶಕ್ತಿ ಕೊಟ್ಟರೆ ಖರೀದಿ ಮಾಡ್ತಿನಿ. ಇರೋ ಆಸ್ತಿ ಅಲ್ಲಂ ವೀರಭದ್ರಪ್ಪ ಹತ್ರ ನನ್ನ ಮಗಳು ಖರೀದಿ ಮಾಡಿದ್ದು. ಮುಂದೆಯೂ ನಾನು ಆಸ್ತಿ ಖರೀದಿ ಮಾಡುವೆ ಎಂದು ಗುಡುಗಿದರು.

ಹತ್ತು ವರ್ಷ ಅಲ್ಲ, ಹತ್ತು ತಿಂಗಳ ಅಧಿಕಾರ ನಡೆಸಲು ನೋಡೋಣ ಹತ್ತು ತಿಂಗಳಲ್ಲೇ ಅಧಿಕಾರದಿಂದ ಇಳಿಸುತ್ತೇವೆ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ. ತೆಗೆಯಲಿ ನೋಡೋಣ ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಐದು ವರ್ಷ ಪೂರ್ತಿ ನಮ್ಮದೇ ಸರ್ಕಾರ ಇರುತ್ತೆ ಅನುಮಾನ ಬೇಡ. ಇವರ ಕುತಂತ್ರದ ವಿರುದ್ಧ ನಾವು ಹೋರಾಟ ಮಾಡಲು ರೆಡಿ ಇದ್ದೇವೆ ಎಂದು ಸವಾಲು ಹಾಕಿದರು.

ಬ್ಯುರೊ ರಿಪೋರ್ಟ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow