ಅಭಿಮಾನಿಗಳಿಗೆ ಭರ್ಜರಿ ನ್ಯೂಸ್ ಕೊಟ್ಟ ಬಾಸ್​ ಖ್ಯಾತಿಯ ದಿವ್ಯಾ ಸುರೇಶ್: ಏನದು ಸಮಾಚಾರ!?

ಫೆಬ್ರವರಿ 22, 2025 - 20:03
 0  13
ಅಭಿಮಾನಿಗಳಿಗೆ ಭರ್ಜರಿ ನ್ಯೂಸ್ ಕೊಟ್ಟ ಬಾಸ್​ ಖ್ಯಾತಿಯ ದಿವ್ಯಾ ಸುರೇಶ್: ಏನದು ಸಮಾಚಾರ!?

ತ್ರಿಪುರ ಸುಂದರಿ'ಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆದ ದಿವ್ಯಾ ಸುರೇಶ್ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. 'ತ್ರಿಪುರ ಸುಂದರಿ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ದಿವ್ಯಾ ಸುರೇಶ್ ಇದೀಗ ಹೊಚ್ಚ ಹೊಸ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು, ಬಿಗ್​ಬಾಸ್​ ಖ್ಯಾತಿಯ ದಿವ್ಯಾ ಸುರೇಶ್ ಅವರು, ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಶಾರದೆ ಎಂಬ ಟೈಟಲ್​ನೊಂದಿಗೆ ಸೀರಿಯಲ್​ ಬರ್ತಿದೆ. ಇದೊಂದು ರಿಮೇಕ್​ ಸ್ಟೋರಿ. ತಮಿಳಿನಲ್ಲಿ ಸೂಪರ್ ಹಿಟ್​ ಆಗಿರೋ ಚೆಲ್ಲಮ್ಮ ಎಂಬ ಸೀರಿಯಲ್​ನ ಕನ್ನಡದಲ್ಲಿ ಶಾರದೆ ರೂಪದಲ್ಲಿ ತರಲಾಗ್ತಿದೆ. ಅಮ್ಮ-ಮಗಳ ಬಾಂಧವ್ಯದ ಬೇಸುಗೆ ಸ್ಟೋರಿ ಹೈಲೈಟ್​. ಇನ್ನೂ, ಮಗುವಿನ ಪಾತ್ರದಲ್ಲಿ ಚುಕ್ಕಿತಾರೆ ಖ್ಯಾತಿಯ ಬಾಲ ನಟಿ ಸ್ಪೂರ್ತಿ ಸುನೀಲ್​ ಅಭಿನಯಿಸುತ್ತಿದ್ದಾಳೆ

ನಾಯಕಿ ಶಾರದಾ ಪಾತ್ರವನ್ನ ನಟಿ ಚೈತ್ರಾ ಸಕ್ಕರೆ ನಿರ್ವಹಿಸಲಿದ್ದಾರೆ. ಇವರು ಕನ್ನಡದವ್ರೇ ಅದರೂ ಹೆಚ್ಚು ತಮಿಳು, ತೆಲುಗಿನಲ್ಲಿ ಜನಪ್ರಿಯತೆ ಪಡೆದಿರೋ ನಟಿ. ಕನ್ನಡದಲ್ಲೂ ಅಭಿನಯಿಸಿದ್ದಾರೆ. ಈ ಹಿಂದೆ ದಿವ್ಯ ಸುರೇಶ್​ ಸೀರಿಯಲ್​ ಮಾಡೋಕೆ ಸಜ್ಜಾಗಿದ್ದಾರೆ ಎಂಬ ಮಾಹಿತಿ ನೀಡಿದ್ವಿ.

ಬಿಗ್​ಬಾಸ್​ ಬೆಡಗಿ ದಿವ್ಯಾ ಸುರೇಶ್​ ಅಭಿನಯಿಸ್ತಿರೋ ಧಾರಾವಾಹಿ ಇದೇ ಶಾರದೆ. ಇದರಲ್ಲಿ ಪ್ರಮುಖ ಪಾತ್ರವೊಂದಕ್ಕೆ ನಟಿ ದಿವ್ಯಾ ಸುರೇಶ್ ಬಣ್ಣ ಹಚ್ಚಿದ್ದಾರೆ ನಟಿ. ಇನ್ನೂ ಅಗ್ನಿಸಾಕ್ಷಿ ಖ್ಯಾತಿಯ ನಟ ರಾಜೇಶ್​ ಧ್ರುವ ಕೂಡ ಶಾರದೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಒಟ್ಟಿನಲ್ಲಿ ಹಲವು ಜನಪ್ರಿಯ ಕಲಾವಿದರ ತಂಡದ ಜೊತೆಗೆ ಶಾರದೆ ಬರ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow