ಅಮೆರಿಕದಲ್ಲಿ ಉದ್ಯೋಗಾವಕಾಶ, ತೆರಿಗೆ ಪದ್ಧತಿ ಬಗ್ಗೆ ಕಮಲಾ - ಟ್ರಂಪ್ ಹೇಳಿದ್ದೇನು?

ಸೆಪ್ಟೆಂಬರ್ 11, 2024 - 10:58
 0  18
ಅಮೆರಿಕದಲ್ಲಿ ಉದ್ಯೋಗಾವಕಾಶ, ತೆರಿಗೆ ಪದ್ಧತಿ ಬಗ್ಗೆ ಕಮಲಾ - ಟ್ರಂಪ್ ಹೇಳಿದ್ದೇನು?
FOCUS KARNATAKA Donald Trump and Kamala Harris

ಅಮೆರಿಕದಲ್ಲಿ ಉದ್ಯೋಗಾವಕಾಶ, ತೆರಿಗೆ ಪದ್ಧತಿ ಬಗ್ಗೆ ಕಮಲಾ - ಟ್ರಂಪ್ ಹೇಳಿದ್ದೇನು?

ಪ್ರಪಂಚದಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದ, ಅಮೆರಿಕಾ ಅಧ್ಯಕ್ಷ ರೇಸ್ ನಲ್ಲಿನ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಚರ್ಚೆ ಅತ್ಯಂತ ಪರಿಣಾಮಕಾರಿಯಾಗಿತ್ತು ಎಂದರೆ ತಪ್ಪಾಗಲಾರದು. ಏಕೆಂದರೆ, ಅಲ್ಲಿ ನಡೆದಿದ್ದು ಕೇವಲ ವಿಶ್ಲೇಷಣೆ.

ಸಾಮಾನ್ಯವಾಗಿ, ಇಬ್ಬರು ರಾಜಕೀಯ ನಾಯಕರ ಸಂವಾದ ಎಂದರೆ ಆರೋಪ ಪ್ರತ್ಯಾರೋಪಗಳು ಸಹಜವೇ ಸರಿ. ಇಲ್ಲೂ ಅದೇ ಇತ್ತು. ಆದರೆ, ಅದಕ್ಕೂ ಮೀರಿದ ಒಂದು ಶಿಸ್ತುಬದ್ಧ ಚರ್ಚೆ ನಡೆದಿದ್ದು ಈ ಚರ್ಚಾ ಕೂಟವನ್ನು ಆಯೋಜಿಸಿದ್ದ ಅಮೆರಿಕದ ಪ್ರಮುಖ ಮಾಧ್ಯಮವೊಂದರ ಹೆಗ್ಗಳಿಕೆ.

ಇವರಿಬ್ಬರ ಚರ್ಚೆಯು ಗೂಗಲ್ ಟ್ರೆಂಡ್ಸ್ ನಲ್ಲಿ ಭಾರೀ ಹುಡುಕಾಟವಾಗಿತ್ತು. ಗೂಗಲ್ ಸರ್ಚ್ ಇಂಜಿನ್ ಬಳಸುವ ಹಲವಾರು ಓದುಗರು, ಈ ಚರ್ಚೆಯ ಬಗ್ಗೆ ಕುತೂಹಲಿಗಳಾಗಿದ್ದು ಇದರಿಂದ ತಿಳಿಯುತ್ತದೆ. ಶೇ. 100ಕ್ಕಿಂತ ಹೆಚ್ಚು ಗೂಗಲ್ ಬಳಕೆದಾರರು ಈ ಬಗ್ಗೆ ಹುಡುಕಾಟ ನಡೆಸಿದ್ದರಿಂದಾಗಿ ಇದು ಬ್ರೇಕ್ ಔಟ್ ಹಂತಕ್ಕೆ ಹೋಗಿತ್ತು. ಭಾರತದಲ್ಲಿ ನಾಗಾಲ್ಯಾಂಡ್ ನಲ್ಲಿ ಶೇ. 100ರಷ್ಟು ಮಂದಿ, ಮಿಜೋರಂನಲ್ಲಿ ಶೇ. 93 ಮಂದಿ, ಗೋವಾದಲ್ಲಿ ಶೇ. 80, ಕರ್ನಾಟಕದಲ್ಲಿ ಶೇ. 27, ಮಣಿಪುರದಲ್ಲಿ ಶೇ. 74 ಮಂದಿ ಈ ಚರ್ಚಾಕೂಟಕ್ಕಾಗಿ ಹುಡುಕಾಟ ನಡೆಸಿದ್ದರು.

ಈ ವೇದಿಕೆಯಲ್ಲಿ ಅಮೆರಿಕಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಸಂಗತಿಗಳು ಚರ್ಚೆಗೆ ಬಂದವು. ಅವುಗಳಲ್ಲಿ ಅಮೆರಿಕದಲ್ಲಿನ ನಿರುದ್ಯೋಗ ಸಮಸ್ಯೆ, ತೆರಿಗೆ ಸಮಸ್ಯೆಗಳು, ವೈದ್ಯಕೀಯ ಸೌಲಭ್ಯಗಳು, ಗಡಿ ರಕ್ಷಣೆ, ಆಂತರಿಕ ಭದ್ರತೆ, ವಿದೇಶಾಂಗ ನೀತಿಗಳೂ ಸೇರಿದಂತೆ ಇಸ್ರೇಲ್ ಹಮಾಸ್, ಉಕ್ರೇನ್ - ರಷ್ಯಾ ಯುದ್ಧದ ಬಗ್ಗೆ ಅಮೆರಿಕ ಹೊಂದಿರುವ ನಿಲುವುಗಳ ಬಗ್ಗೆಯೂ ಚರ್ಚೆಯಾಗಿದ್ದು ವಿಶೇಷ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow