ಅಮೆರಿಕದಲ್ಲಿ ಮತ್ತೊಂದು ಶೂಟೌಟ್! ಶಾಲೆಯಲ್ಲಿ ನಾಲ್ವರ ಹತ್ಯೆ: ಗುಂಡಿನ ದಾಳಿ ಹೆಚ್ಚಾಗ್ತಿರೋದು ಏಕೆ?

ಸೆಪ್ಟೆಂಬರ್ 5, 2024 - 15:22
 0  14
ಅಮೆರಿಕದಲ್ಲಿ ಮತ್ತೊಂದು ಶೂಟೌಟ್! ಶಾಲೆಯಲ್ಲಿ ನಾಲ್ವರ ಹತ್ಯೆ: ಗುಂಡಿನ ದಾಳಿ ಹೆಚ್ಚಾಗ್ತಿರೋದು ಏಕೆ?
FOCUS KARNATAKA School Shootings in America

ಅಮೆರಿಕದಲ್ಲಿ ಮತ್ತೊಂದು ಶೂಟೌಟ್! ಶಾಲೆಯಲ್ಲಿ ನಾಲ್ವರ ಹತ್ಯೆ: ಗುಂಡಿನ ದಾಳಿ ಹೆಚ್ಚಾಗ್ತಿರೋದು ಏಕೆ?

 ವಿಶ್ವದ ದೊಡ್ಡಣ್ಣ ಅಮೆರಿಕ ದೇಶದಲ್ಲಿ ಬಂದೂಕಿನ ಹಾವಳಿ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ‘ಮಾಸ್ ಶೂಟಿಂಗ್’ ಅನ್ನೋದು ಅಮೆರಿಕದಲ್ಲಿ ದೈನಂದಿನ ಸುದ್ದಿಯಾಗುತ್ತಿದೆ. ಅದರಲ್ಲೂ ಶಾಲೆಗಳಲ್ಲೇ ಶೂಟೌಟ್ ನಡೀತಿರೋದು ಆಘಾತಕಾರಿ ಸಂಗತಿಯಾಗಿದೆ. ಇದೀಗ ಅಮೆರಿಕ ದೇಶದ ಜಾರ್ಜಿಯಾ ರಾಜ್ಯದ ವಿಂಡರ್‌ ನಗರದಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಇಲ್ಲಿನ ಅಪಲಾಚಿ ಹೈಸ್ಕೂಲ್‌ನಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಮನಬಂದಂತೆ ತನ್ನ ಸಹಪಾಠಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ! ಭಾರತದ ಶಾಲೆಗಳಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಆಚರಿಸುತ್ತಿದ್ದರೆ, ಅಮೆರಿಕದ ಈ ಶಾಲೆಯಲ್ಲಿ ವಿದ್ಯಾರ್ಥಿ ತನಗೆ ಪಾಠ ಮಾಡುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಜೀವವನ್ನೇ ತೆಗೆದಿದ್ದಾನೆ!

ಈ ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ. ಇದಲ್ಲದೆ ಇನ್ನೂ 9 ವಿದ್ಯಾರ್ಥಿಗಳು ಮಾರಣಾಂತಿಕವಾಗಿ ಗಾಯಗೊಂಡಿದ್ದು, ಮೃತ ಇಬ್ಬರೂ ವಿದ್ಯಾರ್ಥಿಗಳು 14 ವರ್ಷ ವಯಸ್ಸಿನವರು ಎಂದು ತಿಳಿದು ಬಂದಿದೆ. ಇದೇ ವೇಳೆ ಗುಂಡು ಹಾರಿಸಿದ ಆರೋಪಿ ವಿದ್ಯಾರ್ಥಿ ಕೂಡಾ 14 ವರ್ಷ ವಯಸ್ಸಿನವನೇ! 2024ರಲ್ಲಿ ಈವರೆಗೆ ನಡೆದ 30ನೇ ಸಾಮೂಹಿಕ ಶೂಟೌಟ್ ಪ್ರಕರಣ ಇದು! ಇದೊಂದೇ ವರ್ಷ ಸಾಮೂಹಿಕ ಗುಂಡಿನ ದಾಳಿ ಪ್ರಕರಣಗಳಿಗೆ 131 ಮಂದಿ ಬಲಿಯಾಗಿದ್ದಾರೆ. ಇದು ವಿಶ್ವದ ದೊಡ್ಡಣ್ಣನಿಗೆ ನಿಜಕ್ಕೂ ತಲೆನೋವು ತಂದಿದೆ. ಇತ್ತೀಚಿನ ಕೆಲವು ಶೂಟೌಟ್ ಪ್ರಕರಣಗಳನ್ನ ನೆನಪಿಸಿಕೊಂಡರೆ ನಿಜಕ್ಕೂ ಎದೆ ಝಲ್ ಎನ್ನದೇ ಇರದು!

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow