ಆಘಾತಕಾರಿ ಘಟನೆ: ಬೀಚ್’ಗೆ ಔಟಿಂಗ್ ಹೋಗಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್!

ಭುವನೇಶ್ವರ್:- ಒಡಿಶಾದ ಗಂಜಾಂನಲ್ಲಿ ಆಘಾತಕಾರಿ ಘಟನೆ ಜರುಗಿದೆ. ಬೀಚ್ಗೆ ಔಟಿಂಗ್ ಹೋಗಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಜರುಗಿದೆ. ಆಕೆಯ ಸ್ನೇಹಿತನನ್ನು ಕಟ್ಟಿಹಾಕಿ, ಆತನ ಎದುರೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ
ಸಂತ್ರಸ್ತ ಯುವತಿ, ಸ್ನೇಹಿತನೊಂದಿಗೆ ಗೋಪಾಲಪುರ ಸಮುದ್ರ ತೀರಕ್ಕೆ ಹೋಗಿದ್ದರು. ಒಂದು ಸ್ಥಳದಲ್ಲಿ ಏಕಾಂತವಾಗಿ ಕುಳಿತಿದ್ದಾಗ, 10 ಜನ ಪುರುಷರ ಗುಂಪು ಮೂರು ಬೈಕ್ಗಳಲ್ಲಿ ಬಂದಿತ್ತು. ಆ ಗುಂಪು ಇಬ್ಬರ ಫೋಟೊಗಳನ್ನು ತೆಗೆಯಲು ಪ್ರಾರಂಭಿಸಿದ್ದರು. ಬಳಿಕ ಆ ಫೋಟೊಗಳನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ನಂತರ ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ, ಆತನ ಕೈಗಳನ್ನು ಕಟ್ಟಿ, ಯುವತಿಯನ್ನು ನಿರ್ಜನ ಪ್ರದೇಶದಲ್ಲಿರುವ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.
ಆ ಗುಂಪು ಇಬ್ಬರ ಫೋಟೊಗಳನ್ನು ತೆಗೆಯಲು ಪ್ರಾರಂಭಿಸಿದ್ದರು. ಬಳಿಕ ಆ ಫೋಟೊಗಳನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ನಂತರ ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ, ಆತನ ಕೈಗಳನ್ನು ಕಟ್ಟಿ, ಯುವತಿಯನ್ನು ನಿರ್ಜನ ಪ್ರದೇಶದಲ್ಲಿರುವ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಎಂಟು ಜನರನ್ನು ಬಂಧಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






