ಆಟದ ಉತ್ಸಾಹಕ್ಕೆ ಇದು ವಿರುದ್ದ ನಡೆ; ಟೀಮ್ ಇಂಡಿಯಾ ವಿರುದ್ಧ ಪಾಕ್ ದೂರು
ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ದೂರು ನೀಡಿದೆ. ಭಾನುವಾರ ನಡೆದ ಏಷ್ಯಾ ಕಪ್ 2025 ರ ಗ್ರೂಪ್ ಎ ಪಂದ್ಯದಲ್ಲಿ ಏಳು ವಿಕೆಟ್‌ಗಳ ಅಮೋಘ ಜಯಗಳಿಸಿದ ನಂತರ ಟೀಮ್ ಇಂಡಿಯಾ ಎದುರಾಳಿ ಪಾಕಿಸ್ತಾನ ತಂಡದೊಂದಿಗೆ ಕೈಕುಲುಕಲು ನಿರಾಕರಿಸಿಯಿ. ಇದಾದ ನಂತರ ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೀದ್ ಅಕ್ರಮ್ ಚೀಮಾ ಅವರು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್‌ಗೆ ಈ ಕುರಿತು ದೂರು ಸಲ್ಲಿಸಿದ್ದಾರೆ ಎಂದು ವರದಿ ಆಗಿದೆ.
ಭಾರತೀಯ ಆಟಗಾರರು ಕೈಕುಲುಕದೇ ವರ್ತಿಸಿದ್ದಕ್ಕೆ ತಂಡದ ವ್ಯವಸ್ಥಾಪಕ ನವೀದ್ ಚೀಮಾ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದನ್ನು ಅನುಚಿತ ಮತ್ತು ಆಟದ ಉತ್ಸಾಹಕ್ಕೆ ವಿರುದ್ಧವೆಂದು ಪರಿಗಣಿಸಲಾಗಿದೆ. ಇದನ್ನು ವಿರೋಧಿಸಿ, ನಾವು ನಮ್ಮ ನಾಯಕನನ್ನು ಪಂದ್ಯದ ನಂತರದ ಬಹುಮಾನ ವಿತರಣಾ ಸಮಾರಂಭಕ್ಕೆ ಕಳುಹಿಸಲಿಲ್ಲ ಎಂದಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ವಾಟ್ಸ್ಆ್ಯಪ್ ಮೂಲಕ ಹಂಚಿಕೊಂಡ ಅಧಿಕೃತ ಹೇಳಿಕೆಯು, ಟಾಸ್ ಸಮಯದಲ್ಲಿ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಕೈಕುಲುಕದಂತೆ ಮ್ಯಾಚ್ ರೆಫರಿ ಪೈಕ್ರಾಫ್ಟ್ ಸಲ್ಮಾನ್ ಆಘಾ ಅವರಿಗೆ ತಿಳಿಸಿರುವುದಾಗಿ ದೃಢಪಡಿಸಿದೆ. “ಭಾರತೀಯ ಕ್ರಿಕೆಟ್ ತಂಡದ ವರ್ತನೆ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ವ್ಯವಸ್ಥಾಪಕ ನವೀದ್ ಅಕ್ರಮ್ ಚೀಮಾ ಅಧಿಕೃತವಾಗಿ ಪ್ರತಿಭಟನೆ ದಾಖಲಿಸಿದ್ದಾರೆ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ವಾಸ್ತವವಾಗಿ, ಟಾಸ್ ಸಮಯದಲ್ಲಿ ಮತ್ತು ಪಂದ್ಯ ಗೆದ್ದ ನಂತರವೂ ಭಾರತ ತಂಡವು ಪಾಕಿಸ್ತಾನ ತಂಡದೊಂದಿಗೆ ಕೈಕುಲುಕಲಿಲ್ಲ. ಇದು ಸಲ್ಮಾನ್ ಅಲಿ ಅಘಾ ಅವರಿಗೆ ನೋವುಂಟು ಮಾಡಿತು. ಪಹಲ್ಗಾಮ್ ದಾಳಿಯನ್ನು ಪ್ರತಿಭಟಿಸಿ ಭಾರತ ತಂಡ ಈ ನಿರ್ಧಾರವನ್ನು ತೆಗೆದುಕೊಂಡಿತ್ತು
ನಿಮ್ಮ ಪ್ರತಿಕ್ರಿಯೆ ಏನು?