ಇಂದು RCB vs DC ಬಿಗ್ ಫೈಟ್: ಬೆಂಗಳೂರಿಗೆ ಮಾಜಿ ಆಟಗಾರರೇ ಸವಾಲು!?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಋತುವಿನಲ್ಲಿ ಅಕ್ಷರ್ ಪಾಟೇಲ್ ನೇತೃತ್ವದ ಡೆಲ್ಲಿ ತಂಡ ಆಡಿದ ಮೂರು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಮುಂದುವರೆದಿದೆ. ಆರ್‌ಸಿಬಿ ಕೂಡ ಉತ್ತಮ ಪ್ರದರ್ಶನ ತೋರುತ್ತಿದ್ದು ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಒಂದು ಪಂದ್ಯದಲ್ಲಿ ಮಾತ್ರ ಸೋಲನ್ನು ಕಂಡಿದೆ.
ಇಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಿಶ್ವದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರೆ ವಿರಾಟ್ ಟಿ20 ಸ್ವರೂಪದಲ್ಲಿ 100 ಅರ್ಧಶತಕ ಪೂರ್ಣಗೊಳಿಸಲಿದ್ದಾರೆ. ಹೀಗಾಗಿ, ಅವರು ಶಾರ್ಟ್-ಫಾರ್ಮ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ.
ಇನ್ನಿಂಗ್ಸ್ ವಿಚಾರದಲ್ಲಿ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ಟಿ20ಯಲ್ಲಿ 100 ಅರ್ಧಶತಕಗಳನ್ನು ಪೂರೈಸಿದ ಏಕೈಕ ಆಟಗಾರ ಡೇವಿಡ್ ವಾರ್ನರ್ ಆಗಿದ್ದಾರೆ. ಮುಂಬೈ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 13,000 ರನ್‌ಗಳ ಗಡಿ ತಲುಪಿದ್ದ ವಿರಾಟ್, ಇಂದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದರೆ ಇತಿಹಾಸ ರಚಿಸಲಿದ್ದಾರೆ.
ಅಂದ್ಹಾಗೆ ಇಂದು ನಡೆಯುವ ಕದನ ಕೇವಲ ಆರ್ಸಿಬಿ ಹಾಗೂ ಡೆಲ್ಲಿ ಕಾಳಗ ಮಾತ್ರವಲ್ಲ. ಆರ್ಸಿಬಿ ವರ್ಸಸ್ ಮಾಜಿ ಆರ್ಸಿಬಿಯನ್ಸ್ ನಡುವಿನ ಮಹಾ ಕಾಳಗ. ಕೆ.ಎಲ್.ರಾಹುಲ್, ಫಾಫ್ ಡುಪ್ಲೆಸಿ, ವೇಗಿ ಮಿಚೆಲ್ ಸ್ಟಾರ್ಕ್, ಕರುಣ್ ನಾಯರ್ ಇವರೆಲ್ಲರೂ ಆರ್ಸಿಬಿಯ ಮಾಜಿ ಪ್ಲೇಯರ್ಗಳೇ. ಡೆಲ್ಲಿ ತಂಡದ ಬಲವಾಗಿರೋ ಇವ್ರಿಗೆ ಚಿನ್ನಸ್ವಾಮಿ ಮೈದಾನದ ಪಿಚ್ ಹಾಗೂ ಇಲ್ಲಿನ ಪ್ಲೇಯಿಂಗ್ ಕಂಡಿಷನ್ಸ್ ಬಗ್ಗೆ ಚೆನ್ನಾಗಿ ಅರಿವಿದೆ. ಈ ತ್ರಿಮೂರ್ತಿಗಳ ಆಟಕ್ಕೆ ಕಡಿವಾಣ ಹಾಕಲು ಚಕ್ರವ್ಯೂಹ ರಚಿಸಬೇಕಿದೆ
ನಿಮ್ಮ ಪ್ರತಿಕ್ರಿಯೆ ಏನು?






