ಇಂದು ಆರ್ ಸಿಬಿ Vs ಪಂಜಾಬ್ ಫೈನಲ್ ಫೈಟ್: ಈ ಬಾರಿ ಐಪಿಎಲ್‌ನಲ್ಲಿ ಹೊಸ ಚಾಂಪಿಯನ್ ಯಾರಾಗ್ತಾರೆ!?

2025ರ ಐಪಿಎಲ್ ಕೊನೆ ಹಂತ ತಲುಪಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಈಗಾಗಲೇ ಫೈನಲ್ ಪಂದ್ಯ ಮುಗಿಯಬೇಕಾಗಿತ್ತು. ಆದ್ರೆ ಆಪರೇಷನ್ ಸಿಂಧೂರ ಕಾರ್ಯಚರಣೆಯಿಂದ ಐಪಿಎಲ್ ಪಂದ್ಯಗಳನ್ನ ಸ್ವಲ್ಪ ದಿನ ಮುಂದೂಡಲಾಗಿತ್ತು.
ಇದೀಗ ಪ್ಲೇ ಆಫ್, ಕ್ವಾಲಿಫೈಯರ್ 1,2 ಎಲ್ಲಾ ಪಂದ್ಯಗಳು ಮುಗಿದು ಫೈನಲ್ ಫೈಟ್ ಇಂದು ಏರ್ಪಟ್ಟಿದೆ. ಅದು ಪಂಜಾಬ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ. ಈ ಪಂದ್ಯ ಅಹಮ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆಯಲಿದೆ. ವಿಶೇಷ ಅಂದ್ರೆ ಈ ಬಾರಿ ಐಪಿಎಲ್‌ನಲ್ಲಿ ಹೊಸ ಚಾಂಪಿಯನ್ ತಂಡದ ಉದಯವಾಗಲಿದೆ. ಅಷ್ಟೇ ಅಲ್ಲದೇ ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ 4 ಬಾರಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ವಿಶೇಷ.
ಕಳೆದ 18 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಟ್ರೋಫಿ ಗೆದ್ದುಕೊಂಡಿಲ್ಲ. ಆರ್‌ಸಿಬಿ ಈ ಮೊದಲು 3 ಬಾರಿ ಫೈನಲ್ ಪ್ರವೇಶಿಸಿದ್ದರೆ ಪಂಜಾಬ್ ಒಂದು ಬಾರಿ ಫೈನಲ್ ಆಡಿ ಸೋಲನುಭವಿಸಿತ್ತು. 2014 ರಲ್ಲಿ ಕೋಲ್ಕತ್ತಾ ವಿರುದ್ಧ ಪಂಜಾಬ್ ಕಿಂಗ್ಸ್ ಸೋತಿತ್ತು. ಇದೇ ಮೊದಲ ಬಾರಿಗೆ ಎರಡು ತಂಡಗಳು ಫೈನಲಿನಲ್ಲಿ ಮುಖಾಮುಖಿಯಾಗುತ್ತಿವೆ.
ಲೀಗ್ ಹಂತದಲ್ಲಿ ಎರಡು ತಂಡಗಳು ಒಂದೊಂದು ಪಂದ್ಯವನ್ನು ಗೆದ್ದುಕೊಂಡಿದ್ದವು. ಆದರೆ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ತಂಡವನ್ನು ಸೋಲಿಸಿ ಆರ್‌ಸಿಬಿ ಫೈನಲ್ ಪ್ರವೇಶಿಸಿತ್ತು. ಹೀಗಾಗಿ ಎರಡು ತಂಡಗಳ ಮಧ್ಯೆ ಸಮಬಲದ ಹೋರಾಟ ನಡೆಯಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






