`ಇದ್ರೆ ನೆಮ್ದಿಯಾಗ್ ಇರ್ಬೇಕ್’ ಸಾಂಗ್ ರಿಲೀಸ್: ಸಖತ್ ಸ್ಟೈಲಿಷ್ ಆಗಿ ಕಾಣಿಸ್ಕೊಂಡ ದರ್ಶನ್

ಆಗಸ್ಟ್ 24, 2025 - 10:53
 0  21
`ಇದ್ರೆ ನೆಮ್ದಿಯಾಗ್ ಇರ್ಬೇಕ್’ ಸಾಂಗ್ ರಿಲೀಸ್: ಸಖತ್ ಸ್ಟೈಲಿಷ್ ಆಗಿ ಕಾಣಿಸ್ಕೊಂಡ ದರ್ಶನ್

ಇದ್ರೆ ನೆಮ್ಮದಿಯಾಗ್ ಇರ್ಬೇಕು ಸಾಂಗ್ ಈಗಾಗಲೇ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದೇ ಬಿಡುಗಡೆಯಾಗಬೇಕಿತ್ತು. ಆದರೆ ಇದಕ್ಕಿಂತ ಒಂದು ದಿನ ಮೊದಲೇ ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದರಿಂದ ದರ್ಶನ್ ಅವರು ಜೈಲಿಗೆ ಹೋಗಬೇಕಾಯಿತು. ಹೀಗಾಗಿ ಇದ್ರೆ ನೆಮ್ಮದಿಯಾಗ್ ಇರ್ಬೇಕು ಸಾಂಗ್ ಬಿಡುಗಡೆಯ ದಿನಾಂಕ ಮುಂದೂಡಲಾಗಿತ್ತು. ಇದೀಗ ನಟ ದರ್ಶನ್ ಜೈಲಿನಲ್ಲಿದ್ದರೂ ಕೂಡಾ ಈ ಹಾಡು ಸದ್ಯ ರಿಲೀಸ್ ಆಗಿದೆ.

https://www.youtube.com/watch?v=LHC3zEeGsts&ab_channel=SaregamaKannada

ಶ್ರೀ ಜೈಮಾತಾ ಕಂಬೈನ್ಸ್, ಸರೆಗಮ ಮತ್ತು ಯೂಡ್ಲೀ ಫಿಲ್ಮ್ಸ್ ಸಹಯೋಗದೊಂದಿಗೆ, ಬಹುನಿರೀಕ್ಷಿತ ಚಿತ್ರ "ದಿ ಡೆವಿಲ್" ಅನ್ನು ಪ್ರಸ್ತುತಪಡಿಸುತ್ತಿದೆ. ಡೆವಿಲ್ ಫಸ್ಟ್ ಸಿಂಗಲ್ ಡ್ಯಾನ್ಸ್ ಬೀಟ್ನಂತೆ ಬಂದಿದ್ದು ಇದು ಫ್ಯಾನ್ಸ್ಗೆ ಪಕ್ಕಾ ಟ್ರೀಟ್ ಎನ್ನುವಂತೆಯೇ ಇದೆ. ಲಿರಿಕ್ಸ್, ಬೀಟ್ಸ್, ಮ್ಯೂಸಿಕ್ ಸಂಗೀತ ಪ್ರಿಯರಿಗೆ ವೈಬ್ ಮಾಡುವಂತೆಯೇ ಮೂಡಿ ಬಂದಿದೆ. ನಟ ದರ್ಶನ್ ಈ ಒಂದು ಹಾಡಿನಲ್ಲಿ ಸಖತ್ ಸ್ಟೈಲಿಷ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಸಿನಿಮಾದಲ್ಲಿ ಡೆವಿಲ್ ಮೂವಿ ಶೂಟಿಂಗ್ನ ಕೆಲವೊಂದು ಬಿಟಿಎಸ್ ದೃಶ್ಯಗಳನ್ನು ಕೂಡಾ ಆ್ಯಡ್ ಮಾಡಲಾಗಿದೆ.

ಬ್ಲ್ಯಾಕ್ ಟೀ ಶರ್ಟ್, ರೆಡ್ ಜಾಕೆಟ್ ಧರಿಸಿಕೊಂಡು, ಬ್ಲೂ ಜೀನ್ಸ್ ಧರಿಸಿ ಡೆವಿಲ್ ಆಗಿ ದರ್ಶನ್ ಮಸ್ತ್ ಆಗಿ ಕಾಣಿಸಿದ್ದಾರೆ. ಇದ್ರೆ ನೆಮ್ದಿಯಾಗ್ ಇರ್ಬೇಕ್ ಎನ್ನುವುದು ದರ್ಶನ್ ಅವರ ಒಂದು ಫೇಮಸ್ ಹೇಳಿಕೆ. ಇದನ್ನು ಈಗಾಗಲೇ ತುಂಬಾ ಕಡೆ ಟ್ರೋಲ್, ಮೀಮ್ಸ್ಗಳಲ್ಲಿ ಬಳಸಲಾಗಿದೆ. ಡೆವಿಲ್ ಸಿನಿಮಾ ತಂಡ ಇದನ್ನೇ ಹಾಡಾಗಿ ಮಾಡಿದ್ದಾರೆ. ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 57ನೇ ಸಿನಿಮಾವಾಗಿದ್ದು ಮೂವಿಯಲ್ಲಿ ರಚನಾ ರೈ ಹೀರೋಯಿನ್ ಆಗಿ ಅಭಿನಯ ಮಾಡಿದ್ದಾರೆ. ಈ ಸಿನಿಮಾಗೆ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ.  

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow