ಈ ನರಹುಲಿ ಸಮಸ್ಯೆ ನಿಮಗೆ ಹೆಚ್ಚಾಗಿದೆಯಾ? ಹಾಗಿದ್ರೆ ಈ ಸರಳ ಮನೆಮದ್ದುಗಳು ಫಾಲೋ ಮಾಡಿ
ಕೆಲವರಿಗೆ ಚರ್ಮದ ಮೇಲೆ ಇದ್ದಕ್ಕಿದ್ದಂತೆ ಗುಳ್ಳೆಗಳ ರೀತಿ ಉಂಟಾಗಿ ಆನಂತರ ಅದು ಗಂಟುಗಳ ರೂಪಕ್ಕೆ ತಿರುಗುತ್ತದೆ. ಈ ಚರ್ಮದ ಗಂಟುಗಳಿಗೆ, ನರಹುಲಿ ಅಥವಾ ಇಂಗ್ಲೀಷ್ನಲ್ಲಿ ವಾರ್ಟ್ಸ್ ಎಂದೂ ಕರೆಯಲಾಗುತ್ತದೆ.
ಅನೇಕ ಮಂದಿಯ ದೇಹದಲ್ಲಿ ನರಹುಲಿಗಳಿವೆ. ಕೆಲವರು ಇದನ್ನು ನಿರ್ಲಕ್ಷಿಸುತ್ತಾರೆ. ಮತ್ತೆ ಕೆಲವರು ಈ ನರಹುಲಿಯನ್ನು ಬಯಸುವುದಿಲ್ಲ. ಆದ್ದರಿಂದ ಈ ಸಮಸ್ಯೆಯನ್ನು ಹೋಗಲಾಡಿಸಲು ಪ್ರಯತ್ನಿಸುತ್ತಾರೆ. ಹೀಗಿದ್ದರೂ ಎಷ್ಟೋ ಬಾರಿ ಈ ನರಹುಲಿಗಳು ಹೋಗುವುದಿಲ್ಲ. ಆದರೆ ನಾವಿಂದು ತಜ್ಞರು ಶಿಫಾರಸು ಮಾಡುವ ಕೆಲ ಮನೆಮದ್ದುಗಳನ್ನು ತಿಳಿಸುತ್ತೇವೆ. ಇದರ ಬಳಕೆಯು ನಿಮ್ಮ ದೇಹದ ಮೇಲಿನ ನರಹುಲಿಯನ್ನು ಮಾಯವಾಗಿಸುತ್ತದೆ
ಕೆಲವರಿಗೆ ಇದ್ದಕ್ಕಿದ್ದಂತೆ ದೇಹದ ಚರ್ಮದ ಮೇಲೆ, ಒಂದು ರೀತಿಯ ನೋವು ರಹಿತ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ! ಆದರೆ ಈ ಗುಳ್ಳೆಗಳು ಇಷ್ಟಕ್ಕೆ ನಿಲ್ಲದೆ, ತನ್ನ ಗಾತ್ರದಲ್ಲಿ ದೊಡ್ಡ ದಾಗುತ್ತಾ ಹೋಗುತ್ತದೆ ಹಾಗೂ, ಅಲ್ಲಿಗೆಯೇ ಅದು ಗಂಟುಗಳ ರೂಪಕ್ಕೆ ತಿರುಗಿಬಿಡುತ್ತದೆ ಈ ಸಮಸ್ಯೆಗಳಿಗೆ ಕನ್ನಡದಲ್ಲಿ ನರಹುಲಿ ಅಥವಾ ವಾರ್ಟ್ಸ್ ಎಂದೂ ಕರೆಯಲಾಗುತ್ತದೆ.
ನರಹುಲಿಗಳು ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಂಡರೆ, ಅವು ತುಂಬಾ ಅಸಹ್ಯಕರವಾಗಿರುತ್ತವೆ. ನರಹುಲಿಗಳು ಹೆಚ್ಚಾಗಿ ಕುತ್ತಿಗೆ, ತೋಳು ಗಳು, ಬೆನ್ನು ಮತ್ತು ಮಣಿಕಟ್ಟುಗಳ ಮೇಲೆ ಕಾಣಿಸಿಕೊಳ್ಳುತ್ತವೆ, ಆದರೆ ಕೆಲವೊಮ್ಮೆ ಅವು ಮುಖದ ಮೇಲೂ ಕಾಣಿಸಿಕೊಳ್ಳುತ್ತವೆ ಹಾಗೂ ಮುಖದ ಸೌಂದರ್ಯವನ್ನು ಹಾಳುಮಾಡುತ್ತವೆ. ಕೆಲವು ನರಹುಲಿಗಳು ಆನುವಂಶಿಕವಾಗಿದ್ದರೆ, ಇನ್ನು ಕೆಲವು ಅತಿಯಾದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳು ವುದರಿಂದ ಉಂಟಾಗುತ್ತವೆ. ಚರ್ಮದ ಮೇಲೆ ನರಹುಲಿಗಳು ಏಕೆ ಕಾಣಿಸಿಕೊಳ್ಳುತ್ತವೆ ಹಾಗೂ ಇದಕ್ಕೆ ಪರಿಹಾರಗಳು ಏನು ಎನ್ನುವುದನ್ನು ನೋಡುತ್ತಾ ಹೋಗೋಣ
ಮುಖ ಮತ್ತು ಕುತ್ತಿಗೆಯ ಮೇಲಿನ ನರಹುಲಿಗಳ ಸಮಸ್ಯೆಗೆ ಬೆಳ್ಳುಳ್ಳಿ ರಾಮ ಬಾಣದಂತೆ ಕಾರ್ಯ ನಿರ್ವಹಿಸುತ್ತದೆಯಂತೆ! ಮೊದಲು, ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಅದರ ಎಸಳುಗಳನ್ನು ತೆಗೆದುಹಾಕಿ. ನಂತರ, ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನರಹುಲಿ ಪ್ರದೇಶಕ್ಕೆ ಹಚ್ಚಿ, ನಂತರ ಬ್ಯಾಂಡೇಜ್‌ನಿಂದ ಮುಚ್ಚಿ.ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ಅದನ್ನು ಹಾಗೆಯೇ ಬಿಡಿ. ಮೂರರಿಂದ ನಾಲ್ಕು ದಿನಗಳವರೆಗೆ ಇದನ್ನು ಮಾಡುವುದರಿಂದ ನರಹುಲಿಗಳು, ನಿಧಾನಕ್ಕೆ ಕಡಿಮೆ ಆಗುತ್ತಾ ಬರುತ್ತದೆ
ಮುಖದ ಮೇಲಿನ ಮಚ್ಚೆಗಳು ಅಥವಾ ನರಹುಲಿಗಳನ್ನು ತೆಗೆದುಹಾಕಲು, ಬೆಳ್ಳುಳ್ಳಿ ಮತ್ತು ಈರುಳ್ಳಿಯ ಮಿಶ್ರಣವನ್ನು ಹಚ್ಚಬಹುದು. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಟ್ಟಿಗೆ ರುಬ್ಬಿಕೊಂಡು ಅದರ ರಸವನ್ನು ಹೊರತೆಗೆಯಿರಿ. ಈ ಈರುಳ್ಳಿ ಮತ್ತು ಬೆಳ್ಳುಳ್ಳಿ ರಸವನ್ನು ಹತ್ತಿ ಉಂಡೆಯನ್ನು ಬಳಸಿ ನರಹುಲಿ ಪ್ರದೇಶಕ್ಕೆ ಹಚ್ಚಿ 20 ರಿಂದ 25 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ, ನಿಮ್ಮ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ, ಕೆಲವು ದಿನಗಳಲ್ಲಿ ನರಹುಲಿಗಳು ನಿಧಾನಕ್ಕೆ ನಿವಾರಣೆಯಾಗುತ್ತಾ ಬರುತ್ತದೆ.
ಇನ್ನೂ ಅಗಸೆ ಬೀಜಗಳನ್ನು ನರಹುಲಿಗಳನ್ನು ತೊಡೆದುಹಾಕಲು ಸಹ ಬಳಸಬಹುದು. ನರಹುಲಿಗಳನ್ನು ತೆಗೆದುಹಾಕಲು, ಅಗಸೆ ಬೀಜಗಳನ್ನು ಪುಡಿಮಾಡಿ. ನಂತರ, ಮಿಶ್ರಣಕ್ಕೆ ಅಗಸೆಬೀಜದ ಎಣ್ಣೆ ಮತ್ತು ಸ್ವಲ್ಪ ಜೇನುತುಪ್ಪವನ್ನು ಸೇರಿಸಿ. ಈ ಪೇಸ್ಟ್ ಅನ್ನು ನರಹುಲಿಗಳಿಗೆ ನಾಲ್ಕರಿಂದ ಐದು ದಿನಗಳವರೆಗೆ ಹಚ್ಚಿ ಮತ್ತು ನರ ಹುಲಿಗಳು ತಾವಾಗಿಯೇ ಮಾಯವಾಗುತ್ತವೆ.
ಅಗಸೆ ಬೀಜಗಳನ್ನು ನರಹುಲಿಗಳನ್ನು ತೊಡೆದುಹಾಕಲು ಸಹ ಬಳಸಬಹುದು. ನರಹುಲಿಗಳನ್ನು ತೆಗೆದುಹಾಕಲು, ಅಗಸೆ ಬೀಜಗಳನ್ನು ಪುಡಿಮಾಡಿ. ನಂತರ, ಮಿಶ್ರಣಕ್ಕೆ ಅಗಸೆಬೀಜದ ಎಣ್ಣೆ ಮತ್ತು ಸ್ವಲ್ಪ ಜೇನುತುಪ್ಪವನ್ನು ಸೇರಿಸಿ. ಈ ಪೇಸ್ಟ್ ಅನ್ನು ನರಹುಲಿಗಳಿಗೆ ನಾಲ್ಕರಿಂದ ಐದು ದಿನಗಳವರೆಗೆ ಹಚ್ಚಿ ಮತ್ತು ನರ ಹುಲಿಗಳು ತಾವಾಗಿಯೇ ಮಾಯವಾಗುತ್ತವೆ.
ನರಹುಲಿಗಳಿಗೆ ಸುಣ್ಣ ಹಚ್ಚುವುದರಿಂದ ಅದರ ಬೇರನ್ನು ದುರ್ಬಲಗೊಳಿಸ ಬಹುದು. ಅದರಲ್ಲಿರುವ ಕ್ಷಾರೀಯ ಅಂಶಗಳು ನರಹುಲಿಯ ಚರ್ಮವನ್ನು ಸುಟ್ಟು ಒಣಗಿಸುತ್ತವೆ. ಆದಾಗ್ಯೂ, ಚರ್ಮಕ್ಕೆ ನೇರವಾಗಿ ಸುಣ್ಣವನ್ನು ಹಚ್ಚುವ ತಪ್ಪನ್ನು ಎಂದಿಗೂ ಮಾಡಬಾರದು. ಇದು ಸುತ್ತಮುತ್ತಲಿನ ಚರ್ಮಕ್ಕೆ ಹಾನಿ ಮಾಡುತ್ತದೆ
ನಿಮ್ಮ ಪ್ರತಿಕ್ರಿಯೆ ಏನು?