ವೈದ್ಯಲೋಕದಲ್ಲೇ ಅಚ್ಚರಿ: ಮಗುವಿನೊಳಗೊಂದು ಮಗು! ಇದು ಹೇಗೆ ಸಾದ್ಯ..?
ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅಪರೂಪದ ವೈದ್ಯಕೀಯ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಹಿಳೆಯೊಬ್ಬರು ಎರಡನೇ ಹೆರಿಗೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸೆಪ್ಟೆಂಬರ್ 23ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಆದರೆ, ಆ ಮಗುವಿನ ದೇಹದಲ್ಲಿ ಬದಲಾವಣೆಗಳು ಕಂಡುಬಂದ ಕಾರಣ ಆಲ್ಟ್ರಾಸೌಂಡ್ ಪರೀಕ್ಷೆ ನಡೆಸಿದಾಗ, ಹೊಟ್ಟೆಯೊಳಗೆ ಬೆನ್ನುಹುರಿಯುಳ್ಳ ಭ್ರೂಣ ಪತ್ತೆಯಾಗಿದೆ. ಬಳಿಕ ಎಂಆರ್‌ಐ ಸ್ಕ್ಯಾನ್ ಮೂಲಕ ಮತ್ತಷ್ಟು ಪರಿಶೀಲನೆ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ. ಅಂತಿಮ ವರದಿ ಬಂದ ನಂತರ ಮುಂದಿನ ಚಿಕಿತ್ಸೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ತಿಳಿಸಿದ್ದಾರೆ.
ವೈದ್ಯಕೀಯ ಭಾಷೆಯಲ್ಲಿ ಈ ಅಪರೂಪದ ಸ್ಥಿತಿಯನ್ನು “Fetus in fetu” ಎಂದು ಕರೆಯಲಾಗುತ್ತದೆ. ಇದರಲ್ಲಿ, ನವಜಾತ ಶಿಶುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣದಂತಹ ಅಸಹಜ ದ್ರವ್ಯ ಬೆಳವಣಿಗೆ ಆಗಿರುತ್ತದೆ. ಇಂತಹ ಘಟನೆಗಳು ಜಗತ್ತಿನಾದ್ಯಂತ ತುಂಬಾ ವಿರಳವಾಗಿದ್ದು, ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರ ದಾಖಲಾಗಿವೆ.
ನಿಮ್ಮ ಪ್ರತಿಕ್ರಿಯೆ ಏನು?