ಈ ವರ್ಷ ಭೀಕರ ಮಳೆ ಸಾಧ್ಯತೆ; ಸರಾಸರಿಗಿಂತ ಹೆಚ್ಚು ಹಿಂಗಾರು ಆಗಲಿದ್ಯಂತೆ!? ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?

ಅಕ್ಟೋಬರ್ 9, 2025 - 21:04
 0  10
ಈ ವರ್ಷ ಭೀಕರ ಮಳೆ ಸಾಧ್ಯತೆ; ಸರಾಸರಿಗಿಂತ ಹೆಚ್ಚು ಹಿಂಗಾರು  ಆಗಲಿದ್ಯಂತೆ!? ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?

ಬೆಂಗಳೂರು:- 2025ನೇ ಸಾಲಿನ ನೈಋತ್ಯ ಮುಂಗಾರು ಕೆಲ ದಿನಗಳಲ್ಲಿ ಮುಕ್ತಾಯವಾಗಲಿದ್ದು, ಹಿಂಗಾರು ಮಳೆ ಆರಂಭಗೊಳ್ಳುತ್ತಿದೆ. ಈ ಮುಂಗಾರು ಮಳೆ ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೂ ದಾಖಲೆಗಳ ಪ್ರಕಾರವಿತ್ತು. ಇದುವರೆಗೂ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆಯಾಗಿದೆ. 

ಈ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ 339 ಸೆಂಟಿ ಮೀಟರ್ ಮುಂಗಾರು ಮಳೆಯಾಗಿದ್ದು, ಸರಾಸರಿಗಿಂತ 14 ಸೆಂಟಿ ಮೀಟರ್ ಹೆಚ್ಚಿನ ಮಳೆಯಾಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಸಾಕಷ್ಟು ಮಳೆ ಅನಾಹುತಗಳು ಈ ವರ್ಷವಾಗಿವೆ.

ಕಳೆದ ವರ್ಷಕ್ಕಿಂತ ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿತ್ತು. ಇನ್ನೇನು ಕೆಲ ದಿನಗಳಲ್ಲಿ ಮುಂಗಾರು ಮುಗಿದು, ಹಿಂಗಾರು ಮಳೆ ಆರಂಭವಾಗಲಿದ್ದು, ಈ ವರ್ಷಾಂತ್ಯದವರೆಗೂ ಜನರಿಗೆ ಮಳೆಕಾಟ ತಪ್ಪಿದ್ದಲ್ಲ. ಇನ್ನೂ ಈ ವರ್ಷ ಮುಂಗಾರಿನಂತೆ ಹಿಂಗಾರು ಮಳೆಯೂ ವಾಡಿಕೆಗಿಂತ ಹೆಚ್ಚಾಗೋ ಸಾಧ್ಯತೆಯಿದೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೂ ಇರಲಿದ್ದು, ಜನರಿಗೆ ಮಳೆ ಕಾಟ ತಪ್ಪಿದ್ದಲ್ಲ ಎಂದು ಹವಾಮಾನ ಇಲಾಖೆ ತಜ್ಞರು ಹೇಳಿದ್ದಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow