Rituals: ಮಹಿಳೆಯರೇ ಕುಂಕುಮ ಇಡುವಾಗ ಈ ಬೆರಳುಗಳನ್ನು ಬಳಸಿದ್ರೆ ಮಾತ್ರವಷ್ಟೇ ಫಲ!

ಜನವರಿ 7, 2025 - 07:00
 0  16
Rituals: ಮಹಿಳೆಯರೇ ಕುಂಕುಮ ಇಡುವಾಗ ಈ ಬೆರಳುಗಳನ್ನು  ಬಳಸಿದ್ರೆ ಮಾತ್ರವಷ್ಟೇ ಫಲ!

ಹಿಂದೂ ಧರ್ಮದಲ್ಲಿ ಕುಂಕುಮವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಕುಂಕುಮವು ವಿವಾಹಿತ ಮಹಿಳೆಗೆ ಸುಮಂಗಲಿತ್ವದ ಸಂಕೇತವಾಗಿದೆ. ಹಣೆಗೆ ಕುಂಕುಮವನ್ನಿಟ್ಟುಕೊಳ್ಳುವ ಮಹಿಳೆಯರ ಸುಮಂಗಲಿತನ ಅಥವಾ ಸೌಭಾಗ್ಯ ದೀರ್ಘವಾಗಿರುತ್ತದೆ ಎನ್ನುವ ನಂಬಿಕೆಯಿದೆ. ನಂಬಿಕೆಯ ಪ್ರಕಾರ, ವಿವಾಹಿತ ಮಹಿಳೆ ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ, ಗಂಡನ ಆಯುಷ್ಯವು ದೀರ್ಘವಾಗಿರುತ್ತದೆ ಮತ್ತು ಅವನು ಯಾವಾಗಲೂ ಅದೃಷ್ಟವಂತನಾಗಿರುತ್ತಾನೆ

ಕುಂಕುಮ ಇಟ್ಟುಕೊಳ್ಳುವುದು ಹಿಂದೂ ಸಂಪ್ರದಾಯದಲ್ಲಿ ಒಂದು ಮುಖ್ಯವಾದ ಆಚಾರ ವಿಚಾರ. ಮಹಿಳೆಯರು ತಮ್ಮ ಗಂಡಂದಿರ ಕ್ಷೇಮಕ್ಕಾಗಿ, ಅವರು ಸೌಖ್ಯವಾಗಿ ಇರಬೇಕೆಂದು ಕುಂಕುಮ ಇಟ್ಟುಕೊಳ್ಳುತ್ತಾರೆ. ಇನ್ನು ಭಕ್ತರು ಪೂಜೆ ಮಾಡುವಾಗ ಕುಂಕುಮ ಇಟ್ಟುಕೊಳ್ಳುತ್ತಾರೆ. ದೇವಾಲಯದಲ್ಲಿ ದೇವರನ್ನು ದರ್ಶಿಸಿಕೊಳ್ಳುವಾಗ ತಿಲಕ ಇಟ್ಟುಕೊಳ್ಳುತ್ತಾರೆ. ಇನ್ನು ಶಿವಭಕ್ತರು ವಿಭೂತಿ ಧರಿಸಿದರೆ, ವಿಷ್ಣು ಭಕ್ತರು ನಾಮ ಧರಿಸುತ್ತಾರೆ. ಅದೇನೇ ಇರಲ್ಲಿ ಎಲ್ಲವೂ ತಿಲಕವಾಗಿಯೇ ಪರಿಗಣಿಸಲಾಗುತ್ತದೆ. 

ಹೆಂಗಸರು ಬೊಟ್ಟು ಧರಿಸುವ ವಿಧಾನದಲ್ಲಿ ಕೂಡ ಹಲವು ವಿಧಗಳಿವೆ. ಕೆಲವರು ಗೊತ್ತಿಲ್ಲದೆ ತಮಗೆ ಇಷ್ಟವಾದ ಬೆರಳಿನಿಂದ ಕುಂಕುಮ ಹಚ್ಚಿಕೊಳ್ಳುತ್ತಾರೆ. ಆದರೆ ನೀವು ಯಾವ ಬೆರಳಿನಿಂದ ಹಚ್ಚಿದರೆ ಯಾವ ರೀತಿಯ ಫಲಿತಾಂಶ ಸಿಗಲಿದೆ ಎಂಬುದು ಇಲ್ಲಿದೆ

ಹಣೆಗೆ ಕುಂಕುಮ ಹಚ್ಚುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಹಣೆಯನ್ನು ಬ್ರಹ್ಮನ ಸ್ಥಾನ ಎಂದು ಸಹ ಕರೆಯಲಾಗುತ್ತದೆ. ಹಾಗಾಗಿ ಹಣೆಬರಹವನ್ನು ಬರೆಯುವ ಬ್ರಹ್ಮನಿಗೂ ಹಣೆಯ ಬೊಟ್ಟಿಗೂ ಬಹಳ ಸಂಬಂಧವಿದೆ.

ಕೆಲವರು ಉಂಗುರದ ಬೆರಳಿನಿಂದ ಬೊಟ್ಟು ಹಚ್ಚುತ್ತಾರೆ. ಇದು ನಿಮ್ಮ ಜೀವನದಲ್ಲಿ ಶಾಂತಿಯನ್ನು ತರುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ, ಇದೇ ಬೆರಳಿನಿಂದಲೇ ಕುಂಕುಮ ಹಚ್ಚಿಕೊಳ್ಳಬೇಕು ಎನ್ನುತ್ತಾರೆ ಹಿರಿಯರು.

ಹಾಗೆಯೇ ಕುಂಕುಮವನ್ನು ಮಧ್ಯ ಬೆರಳಿನಿಂದ ಹಚ್ಚಿಕೊಂಡರೆ ಆಯುಷ್ಯ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕೆಲವೊಮ್ಮೆ ಈ ಬೆರಳಿನಿಂದ ಹಚ್ಚಿಕೊಂಡರೆ ಸಮಸ್ಯೆಗಳಾಗುತ್ತದೆ ಎನ್ನುವ ನಂಬಿಕೆ ಇದೆ

ಇದಲ್ಲದೇ ತೋರು ಬೆರಳಿನಿಂದ ಕುಂಕುಮ ಹಚ್ಚಿಕೊಳ್ಳುವುದರಿಂದ ಪಾಪಗಳಿಂದ ಮುಕ್ತಿ ಸಿಗುತ್ತದೆ. ಆದರೆ ಕೆಲ ನಂಬಿಕೆಗಳ ಪ್ರಕಾರ ಈ ಬೆರಳಿನಿಂದ ಸಹ ಕುಂಕುಮ ಹಚ್ಚಿಕೊಳ್ಳಬಾರದು. ಅದು ಆರ್ಥಿಕವಾಗಿ ಸಮಸ್ಯೆ ಮಾಡುತ್ತದೆ.

ಹಿಂದೂ ಸಂಪ್ರದಾಯದ ಪ್ರಕಾರ ಹೆಬ್ಬೆರಳಿನಿಂದ ಹಚ್ಚಿಕೊಂಡರೆ ಸಮೃದ್ಧಿ ಸಿಗುತ್ತದೆ ಎಂದು ಪುರಾಣಗಳು ಹೇಳುತ್ತವೆ. ಆದರೆ ಹೆಚ್ಚಾಗಿ ಉಂಗುರ ಬೆರಳಿನಿಂದ ಮಾತ್ರ ಕುಂಕುಮವನ್ನು ಹಚ್ಚಬೇಕು ಎನ್ನುತ್ತಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow