ವಾಯು ಪಡೆಯಿಂದ ಯುವಕ-ಯುವತಿಯರಿಗೆ ಸಿಕ್ತು ಗುಡ್ ನ್ಯೂಸ್: ಖಾಲಿ ಇರುವ ಅಗ್ನಿವೀರ್​ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ!

ಜನವರಿ 7, 2025 - 08:13
 0  18
ವಾಯು ಪಡೆಯಿಂದ ಯುವಕ-ಯುವತಿಯರಿಗೆ ಸಿಕ್ತು ಗುಡ್ ನ್ಯೂಸ್:  ಖಾಲಿ ಇರುವ ಅಗ್ನಿವೀರ್​ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ!

ವಾಯು ಪಡೆಯಿಂದ ಯುವಕ-ಯುವತಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಖಾಲಿ ಇರುವ ಅಗ್ನಿವೀರ್​ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 

ಭಾರತೀಯ ವಾಯುಪಡೆ ಯಲ್ಲಿ ಅಗ್ನಿವೀರ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಈ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು ಆಸಕ್ತರು ಅಪ್ಲೇ ಮಾಡಬಹುದು. 

ಭಾರತೀಯ ವಾಯುಪಡೆಯು ಈಗಾಗಲೇ ವಿವರವಾದ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಗ್ನಿವೀರ್ ಹುದ್ದೆಗಳಿಗೆ ಸೇರ್ಪಡೆ ಆಗಲು ಬಯಸುವ ಅಭ್ಯರ್ಥಿಗಳು ದೈಹಿಕ ಸಾಮರ್ಥ್ಯಕ್ಕೆ ಹೆಚ್ಚಿನ ಹೊತ್ತು ಕೊಡಬೇಕು. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಇದ್ದು ಇಬ್ಬರಿಗೂ ಹುದ್ದೆಗಳು ಮೀಸಲಿವೆ. ಈ ಕೆಲಸಗಳಿಗೆ ಆನ್​ಲೈನ್​ ಮೂಲಕ ಅಪ್ಲೇ ಮಾಡಬೇಕು

ಸಂಸ್ಥೆಯ https://agnipathvayu.cdac.in ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು. ನಾಳೆಯಿಂದಲೇ ಅರ್ಜಿಗಳು ಆರಂಭವಾಗುತ್ತಿವೆ. ಹೀಗಾಗಿ ಆಕಾಂಕ್ಷಿಗಳು ಇವುಗಳಿಗೆ ಪ್ರಯತ್ನಿಸಬಹುದು. 

ವಿದ್ಯಾರ್ಹತೆ ಏನು ಕೇಳಿದ್ದಾರೆ..?

ದ್ವಿತೀಯ ಪಿಯುಸಿ (ಗಣಿತ, ಭೌತಶಾಸ್ತ್ರ, ಇಂಗ್ಲಿಷ್)
ಅಥವಾ
ಡಿಪ್ಲೊಮಾದಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು

ವಯೋಮಿತಿ

01 ಜನವರಿ 2005 ರಿಂದ 01 ಜುಲೈ 2008ರ ನಡುವೆ ಜನಿಸಿರಬೇಕು.
21 ವರ್ಷಗಳು ಆಗಿರಬೇಕು.

ತಿಂಗಳ ಸಂಬಳ ಎಷ್ಟು?

1ನೇ ವರ್ಷ- ₹30,000
2ನೇ ವರ್ಷ- ₹33,000
3ನೇ ವರ್ಷ- ₹36,500
4ನೇ ವರ್ಷ- ₹40,000
4 ವರ್ಷದ ನಂತರ ಸೇವಾ ನಿಧಿ ಅಡಿ ಅಗ್ನಿವೀರ್​​ಗೆ ₹10.4 ಲಕ್ಷ ನೀಡಲಾಗುತ್ತದೆ

ಪರೀಕ್ಷಾ ಶುಲ್ಕ ಎಷ್ಟು..?

ಎಲ್ಲರಿಗೂ 550 ರೂಪಾಯಿಗಳು
ಆನ್​ಲೈನ್ ಮೂಲಕ ಪಾವತಿಸಬೇಕು

ಆಯ್ಕೆ ವಿಧಾನ ಹೇಗೆ?

ಆನ್​​ಲೈನ್ ಪರೀಕ್ಷೆ
ಈ ಪರೀಕ್ಷೆಯಲ್ಲಿ 4 ಪ್ರಶ್ನೆಗಳಿಗೆ ತಪ್ಪಾಗಿ ಉತ್ತರಿಸಿದರೆ 1 ಅಂಕ ಕಡಿತ

ಪಿಸಿಕಲ್ ಫಿಟ್ನೆಸ್ ಟೆಸ್ಟ್​ ಇರುತ್ತದೆ. ಇದರಲ್ಲಿ 7 ನಿಮಿಷದಲ್ಲಿ 1.6 ಕೀಲೋ ಮೀಟರ್ ದೂರ ರನ್ನಿಂಗ್ ಮಾಡಬೇಕು. ಮಹಿಳೆಯರಿಗೆ 8 ನಿಮಿಷ ಇರುತ್ತದೆ. ಇನ್ನು ಕೆಲ ಸ್ಪೋರ್ಟ್ಸ್​ಗಳಿರುತ್ತವೆ.

ಮುಖ್ಯವಾದ ದಿನಾಂಕಗಳು

ಅರ್ಜಿ ಆರಂಭದ ದಿನಾಂಕ- 7 ಜನವರಿ 2025
ಅರ್ಜಿ ಕೊನೆಯ ದಿನಾಂಕ- 27 ಜನವರಿ 2025

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow