ಒಂದೆಡೆ ವರದಕ್ಷಿಣೆ ಕಿರುಕುಳದಲ್ಲಿ 1st.. ಇತ್ತ ಆತ್ಮಹತ್ಯೆ ಪ್ರಕರಣಗಳಲ್ಲಿ 3ನೇ ಸ್ಥಾನ - ಏನಾಗ್ತಿದೆ ಬೆಂಗಳೂರು
ಬೆಂಗಳೂರು:- ಒಂದೆಡೆ ವರದಕ್ಷಿಣೆ ಕಿರುಕುಳದಲ್ಲಿ ಮೊದಲ ಸ್ಥಾನದಲ್ಲಿರುವ ಬೆಂಗಳೂರು, ಮತ್ತೊಂದು ಕಡೆ ಆಕಸ್ಮಿಕ ಸಾವು ಆತ್ಮಹತ್ಯೆ ಪ್ರಕರಣಗಳಲ್ಲಿ 3ನೇ ಸ್ಥಾನ ಪಡೆದಿದೆ.
ವರದಿಯ ಪ್ರಕಾರ ಸಾವಿನ ಸಂಖ್ಯೆಯಲ್ಲಿ ಬೆಂಗಳೂರು ರಾಷ್ಟ್ರದಲ್ಲೇ 3 ನೇ ಸ್ಥಾನಕ್ಕೇರಿದೆ. 2023ರಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ 4,414 ಸಾವುಗಳು ಸಂಭವಿಸಿದ್ದು, ಮುಂಬೈ ಮತ್ತು ಪುಣೆಯ ಬಳಿಕ ಬೆಂಗಳೂರು ಅತಿಹೆಚ್ಚು ಸಾವಿನ ಸಂಖ್ಯೆ ಹೊಂದಿದ ನಗರವಾಗಿದೆ ಎಂದು NCRB ವರದಿ ಮಾಡಿದೆ.
ಕಳೆದ ವರ್ಷ ಇಡೀ ಭಾರತದಲ್ಲಿ 65,897 ಆಕಸ್ಮಿಕ ಸಾವುಗಳು ಸಂಭವಿಸಿದ್ದು, ಮುಂಬೈನಲ್ಲಿ 8,974 ಪ್ರಕರಣ, ಪುಣೆಯಲ್ಲಿ 5,054 ಪ್ರಕರಣಗಳು ದಾಖಲಾಗಿದ್ದರೆ, ಬೆಂಗಳೂರಿನಲ್ಲಿ 4,414 ಆಕಸ್ಮಿಕ ಸಾವು ಸಂಭವಿಸಿದೆ. ಇದರಿಂದಾಗಿ ಸಾವಿನ ಸಂಖ್ಯೆಯಲ್ಲಿ ಮುಂಬೈ ಮತ್ತು ಪುಣೆಯ ನಂತರ ಬೆಂಗಳೂರು 3ನೇ ಸ್ಥಾನದಲ್ಲಿದೆ. ಈ ಎಲ್ಲಾ ಸಾವುಗಳು ರಸ್ತೆ ಅಪಘಾತ, ವಿದ್ಯುತ್ ಶಾಕ್ ಇನ್ನಿತರ ಕಾರಣಗಳಿಂದ ಸಂಭವಿಸಿವೆಯೆಂದು NCRB ವರದಿ ಮಾಡಿದೆ.
ನಿಮ್ಮ ಪ್ರತಿಕ್ರಿಯೆ ಏನು?