ಓಡಿಶಾ: ಮಹಿಳೆ ಮೇಲೆ ದರೋಡೆಕೋರರಿಂದ ಗ್ಯಾಂಗ್ ರೇಪ್!

ಅಕ್ಟೋಬರ್ 3, 2024 - 22:14
 0  9
ಓಡಿಶಾ: ಮಹಿಳೆ ಮೇಲೆ ದರೋಡೆಕೋರರಿಂದ ಗ್ಯಾಂಗ್ ರೇಪ್!

ಓಡಿಶಾ:-ಮಹಿಳೆ ಮೇಲೆ ದರೋಡೆಕೋರರ ಗುಂಪೊಂದು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಒಡಿಶಾದ ಭುವನೇಶ್ವರದಲ್ಲಿ ಜರುಗಿದೆ. 

ಅಪಾರ್ಟ್​ಮೆಂಟ್​ಗೆ ಬಂದಿದ್ದ ದರೋಡೆಕೋರರಿಂದ ಈ ಕೃತ್ಯ ನಡೆದಿದೆ. ಮೊದಲು ಅಪಾರ್ಟ್ಮೆಂಟ್ ಗೆ ನುಗ್ಗಿ ಚಾಕು ತೋರಿಸಿ ಆಭರಣಗಳನ್ನು ದೋಚಿದ್ದಾರೆ, ಬಳಿಕ 27 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಬೆಳಗಿನ ಜಾವ 2 ಗಂಟೆ ಸುಮಾರಿಗೆ ಅಪರಾಧ ನಡೆದಿದೆ, ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಕಳ್ಳರು ಮೊದಲು ಆಕೆಯ ಆಭರಣಗಳು ಮತ್ತು ಮೊಬೈಲ್​ ಫೋನ್​ ಅನ್ನು ಚಾಕು ತೋರಿಸಿ ದೋಚಿದ್ದಾರೆ ನಂತರ ಸಹಾಯಕ್ಕಾಗಿ ಕಿರುಚಿದರೆ ಎರಡು ವರ್ಷದ ಮಗಳನ್ನು ಕೊಲ್ಲುವುದಾಗಿ ಬೆದರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಮಹಿಳೆ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, 10 ದಿನಗಳ ಹಿಂದೆಯಷ್ಟೇ ಫ್ಲಾಟ್‌ಗೆ ಶಿಫ್ಟ್​ ಆಗಿದ್ದಳು. ಮನೆಯನ್ನು ತಲುಪಲು ಕಳ್ಳರು ಬಿದಿರಿನ ಏಣಿಯನ್ನು ಬಳಸಿ ಕಟ್ಟಡವನ್ನು ಪ್ರವೇಶಿಸಿರಬಹುದು ಎಂದು ಅವರು ಶಂಕಿಸಿದ್ದಾರೆ.

ಅಪರಾಧಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತ್ಯಾಚಾರ ಮತ್ತು ಲೂಟಿ ಪ್ರಕರಣ ದಾಖಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow