ಕಡಿಮೆ ಆಯ್ತಾ ಧೋನಿ ಕ್ರೇಜ್: 2025 ರ IPL ನಲ್ಲಿ ಕಡಿಮೆ ಮೊತ್ತ ಪಡೆಯಲಿರುವ ಕೂಲ್ ಕ್ಯಾಪ್ಟನ್!

ಸೆಪ್ಟೆಂಬರ್ 27, 2024 - 09:09
 0  13
ಕಡಿಮೆ ಆಯ್ತಾ ಧೋನಿ ಕ್ರೇಜ್: 2025 ರ IPL ನಲ್ಲಿ ಕಡಿಮೆ ಮೊತ್ತ ಪಡೆಯಲಿರುವ ಕೂಲ್ ಕ್ಯಾಪ್ಟನ್!

2025 ರ ಮೆಗಾ ಹರಾಜಿಗೂ ಮುನ್ನ ಕಡಿಮೆ ಮೊತ್ತಕ್ಕೆ ಧೋನಿ ಆಡಲಿದ್ದಾರೆ ಎನ್ನುವ ವಿಚಾರ ಕೇಳಿ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕಡೆಯಿಂದ ಧೋನಿ ಪ್ರಸ್ತುತ ಪಡೆಯುತ್ತಿರುವ ಮೊತ್ತ 12 ಕೋಟಿ ರೂ. 2022ರ ಹರಾಜಿನ ವೇಳೆ ಸಿಎಸ್​ಕೆ 2ನೇ ಆಟಗಾರನಾಗಿ ಧೋನಿಯನ್ನು ರಿಟೈನ್ ಮಾಡಿಕೊಂಡಿತ್ತು. ಅದರಂತೆ ಮೊದಲಿಗನಾಗಿ ರಿಟೈನ್ ಆಗಿದ್ದ ರವೀಂದ್ರ ಜಡೇಜಾ 16 ಕೋಟಿ ರೂ. ಪಡೆದರೆ, ಧೋನಿಗೆ 12 ಕೋಟಿ ರೂ. ನೀಡಲಾಗಿತ್ತು.

ಇದೀಗ ಐಪಿಎಲ್ 2025 ರಲ್ಲಿ ಧೋನಿ ಅತೀ ಕಡಿಮೆ ಮೊತ್ತಕ್ಕೆ ರಿಟೈನ್ ಆಗಲಿದ್ದಾರೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಇದಕ್ಕೆ ಮುಖ್ಯ ಕಾರಣ ಅವರನ್ನು ಅನ್​ಕ್ಯಾಪ್ಡ್​ ಆಟಗಾರರ ಪಟ್ಟಿಯಲ್ಲಿ ಉಳಿಸಿಕೊಳ್ಳುತ್ತಿರುವುದು. ಅಂದರೆ ಐಪಿಎಲ್​ನಲ್ಲಿ ರಿಟೇನ್ಷನ್ ಪಟ್ಟಿಯಲ್ಲಿ ಅನ್​ಕ್ಯಾಪ್ಡ್ ಆಟಗಾರನಾಗಿ ಆಯ್ಕೆಯಾಗುವ ಪ್ಲೇಯರ್​ಗೆ ಕಡಿಮೆ ಹಣ ನೀಡಲಾಗುತ್ತದೆ.

2022ರ ಹರಾಜಿನ ನಿಯಮದ ಪ್ರಕಾರ ಅನ್​ಕ್ಯಾಪ್ಡ್ ರಿಟೈನ್ ಆಟಗಾರನಿಗೆ ಕೇವಲ 4 ಕೋಟಿ ರೂ. ನಿಗದಿ ಮಾಡಲಾಗಿತ್ತು. ಈ ಬಾರಿ ಕೂಡ 4 ಕೋಟಿ ಅಥವಾ 5 ಕೋಟಿ ರೂ. ನಿಗದಿಪಡಿಸುವ ಸಾಧ್ಯತೆಯಿದೆ. ಇದರಿಂದಾಗಿ ಮಹೇಂದ್ರ ಸಿಂಗ್ ಧೋನಿ ಅವರ ಸಂಭಾವನೆ ಮೊತ್ತ ಕಡಿಮೆಯಾಗಲಿರುವುದು ಬಹುತೇಕ
ಖಚಿತ.

ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವತ್ತರಾಗಿ 5 ವರ್ಷ ಕಳೆದಿರುವ ಆಟಗಾರರನ್ನು ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಗೆ ಸೇರಿಸಿಕೊಳ್ಳಲು ಅವಕಾಶ ನೀಡಬೇಕೆಂದು ಬಿಸಿಸಿಐಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮನವಿ ಮಾಡಿದೆ.

ಅದರಂತೆ 2020 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿರುವ ಧೋನಿ ಈ ಬಾರಿ ಅನ್ ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

 ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow