ಕಳಪೆ ಬ್ಯಾಟಿಂಗ್: ಭಾರತೀಯ ಆಟಗಾರರನ್ನು ಅಣಕಿಸಿದ ನ್ಯೂಝಿಲೆಂಡ್ ಕ್ರಿಕೆಟಿಗ!

ಅಕ್ಟೋಬರ್ 27, 2024 - 09:15
 0  13
ಕಳಪೆ ಬ್ಯಾಟಿಂಗ್: ಭಾರತೀಯ ಆಟಗಾರರನ್ನು ಅಣಕಿಸಿದ ನ್ಯೂಝಿಲೆಂಡ್ ಕ್ರಿಕೆಟಿಗ!

ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟರ್​ಗಳು ಕಳಪೆ ಪ್ರದರ್ಶನ ನೀಡಿದ್ದಾರೆ. ಕಿವೀಸ್ ಸ್ಪಿನ್ನರ್​ ವಿರುದ್ಧ ಭಾರತೀಯ ಬ್ಯಾಟರ್​ಗಳು ರನ್​ಗಳಿಸುವುದಿರಲಿ, ಕ್ರೀಸ್ ಕಚ್ಚಿ ನಿಲ್ಲಲು ಕೂಡ ಪರದಾಡಿದರು.

ಟೀಮ್ ಇಂಡಿಯಾದ ಈ ಕಳಪೆ ಬ್ಯಾಟಿಂಗ್ ಬೆನ್ನಲ್ಲೇ ನ್ಯೂಝಿಲೆಂಡ್​ನ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಸೈಮನ್ ಡೌಲ್ ನೀಡಿದ ಹೇಳಿಕೆಯು ಇದೀಗ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಡೌಲ್ ಭಾರತೀಯ ಬ್ಯಾಟರ್​ಗಳ ಸ್ಪಿನ್ ಬ್ಯಾಟಿಂಗ್ ಸಾಮರ್ಥ್ಯವನ್ನೇ ಪ್ರಶ್ನಿಸಿದ್ದಾರೆ.

ಟೀಮ್ ಇಂಡಿಯಾ 156 ರನ್​ಗಳಿಗೆ ಆಲೌಟ್ ಆಗುತ್ತಿದ್ದಂತೆ ಮಾತನಾಡಿದ ಸೈಮನ್ ಡೌಲ್, ಭಾರತೀಯ ಬ್ಯಾಟರ್​ಗಳು ಉತ್ತಮ ಸ್ಪಿನ್ ಆಟಗಾರರು ಎಂಬುದು ತಪ್ಪು ಕಲ್ಪನೆ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಅಥವಾ ರಾಹುಲ್ ದ್ರಾವಿಡ್ ಯುಗ ಮುಗಿದು ಹೋಗಿದೆ. ಈಗ ಭಾರತೀಯ ಬ್ಯಾಟರ್​ಗಳು ಕೂಡ ಬೇರೆ ದೇಶಗಳ ಬ್ಯಾಟ್ಸ್‌ಮನ್‌ಗಳಂತೆಯೇ ಸ್ಪಿನ್ ಬೌಲಿಂಗ್ ಮುಂದೆ ತಡಕಾಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉತ್ತಮ ಸ್ಪಿನ್ನರ್‌ಗಳು ಬಂದ ತಕ್ಷಣ ಭಾರತೀಯ ಬ್ಯಾಟರ್​ಗಳಿಗೆ ಸಮಸ್ಯೆಗಳು ಶುರುವಾಗುತ್ತವೆ. ಐಪಿಎಲ್‌ನಲ್ಲೂ ಇದೇ ರೀತಿ ಕಂಡುಬಂದಿದೆ. ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಸ್ವಿಂಗ್ ಮತ್ತು ಸೀಮ್ ಅನ್ನು ಸಹ ಆಡಲು ಸಾಧ್ಯವಿಲ್ಲ. ಇದೀಗ ಸ್ಪಿನ್ನರ್​ಗಳ ವಿರುದ್ಧ ಕೂಡ ಆಡಲು ತಡಕಾಡುತ್ತಿದ್ದಾರೆ ಎಂದು ಸೈಮನ್ ಡೌಲ್ ವ್ಯಂಗ್ಯವಾಡಿದ್ದಾರೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow