ಕಸಗುಡಿಸ್ತಿದ್ದವನ ಬಳಿ 100 ಕೋಟಿ ಆಸ್ತಿ: ದಿನಗೂಲಿ ಕುಬೇರನ ಆಸ್ತಿ ಕಂಡು ಶಾಕ್ ಆದ ಅಧಿಕಾರಿಗಳು!

ಕೊಪ್ಪಳ: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ನಲ್ಲಿ ಬೃಹತ್ ಅಕ್ರಮ ಬಯಲಾಗಿದ್ದು, ಸುಮಾರು ₹72 ಕೋಟಿ ರೂಪಾಯಿ ಮೌಲ್ಯದ ಅವ್ಯವಹಾರ ನಡೆದಿರುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಎ1 ಆರೋಪಿ ಝಡ್.ಎಂ ಚಿಂಚೋಳಿಕರ್ ಸೇರಿದಂತೆ ನಾಲ್ವರ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಪ್ಪಳ ಜಿಲ್ಲೆಯ ನೆಲಗೋಗಿಪುರದ ಕೆಆರ್‌ಐಡಿಎಲ್ ವಿಭಾಗದಲ್ಲಿ ನಡೆದ 108 ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದೆ. ಈ ಕುರಿತು ತನಿಖೆ ನಡೆಸಿದ ಅಧಿಕಾರಿಗಳಿಗೆ ಅನೇಕ ದಾಖಲೆಗಳು ಲಭಿಸಿದ್ದರೆಂದು ಮೂಲಗಳು ತಿಳಿಸಿವೆ.
ಅಕ್ರಮದ ಪ್ರಮುಖ ಆರೋಪಿ – ಚಿಂಚೋಳಿಕರ್
ಆರೋಪಿ ನಂ.1 ಝಡ್.ಎಂ ಚಿಂಚೋಳಿಕರ್ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾನೆ. ಕಿರಿಯ ಸಹಾಯಕ ಅಭಿಯಂತರರಿಂದ ಹಿಡಿದು ಅಧೀಕ್ಷಕ ಅಭಿಯಂತರ ತನಕ ಪ್ರಭುತ್ವ ವಹಿಸಿದ್ದಾನೆ. ಈವರೆಗೆ ನಿರ್ವಹಿಸಿದ ಎಲ್ಲಾ ಹುದ್ದೆಗಳಲ್ಲಿ ಅವ್ಯವಹಾರದ ಶಂಕೆ ವ್ಯಕ್ತವಾಗಿದೆ.
ಆರೋಪಿತರ ಪಟ್ಟಿ ಹೀಗಿದೆ:
- ಎ1: ಝಡ್.ಎಂ ಚಿಂಚೋಳಿಕರ್ – ಮಾಜಿ ಕಾರ್ಯಪಾಲಕ ಅಭಿಯಂತರ
- ಎ2: ಕಳಕಪ್ಪ ನೀಡಗುಂದಿ – ಸಹಾಯಕ ಅಭಿಯಂತರ
- ಎ3: ಕಾಮಗಾರಿಗೆ ಸಂಬಂಧಿಸಿದ ಗುತ್ತಿಗೆದಾರರು
- ಎ4: ಇತರ ಸಂಬಂಧಿತರು
ಲೋಕಾಯುಕ್ತ ದಾಳಿಯ ಸಾಧ್ಯತೆ
ಈ ಹಿನ್ನಲೆಯಲ್ಲಿ ಲೋಕಾಯುಕ್ತ ತನಿಖೆ ಮುಂದುವರಿದಿದ್ದು, ಯಾವುದೇ ಕ್ಷಣದಲ್ಲಾದರೂ ಆರೋಪಿ ಚಿಂಚೋಳಿಕರ್ ಹಾಗೂ ಗುತ್ತಿಗೆದಾರರ ಮನೆ, ಕಚೇರಿಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ. ಕೆಲ ದಾಖಲೆಗಳನ್ನು ಆಧಾರವಾಗಿಸಿಕೊಂಡು ಲೋಕಾಯುಕ್ತವು ಕ್ರಿಮಿನಲ್ ಪ್ರಕರಣ ದಾಖಲಿಸುವತ್ತ ಮುಂದಾಗಿದೆ ಎಂದು ತಿಳಿದುಬಂದಿದೆ.
ನಿಮ್ಮ ಪ್ರತಿಕ್ರಿಯೆ ಏನು?






