ಕಾಂತಾರ ಚಾಪ್ಟರ್ 1ಕ್ಕೆ ಪ್ರೇಕ್ಷಕರ ಫುಲ್ ಮಾರ್ಕ್ಸ್: ಗಂಡ ರಿಷಬ್ ತಬ್ಬಿ ಭಾವುಕರಾದ ಪತ್ನಿ
ರಿಷಬ್ ಶೆಟ್ಟಿಯವರ ಕನಸಿನ ಕೂಸು ಮತ್ತು ಹೊಂಬಾಳೆ ಫಿಲಂಸ್ ಅವರ ಮಹತ್ವಾಕಾಂಕ್ಷೆಯ ಕಾಂತಾರ ಚಾಪ್ಟರ್ 1 ದೇಶಾದ್ಯಂತ ಬಿಡುಗಡೆಯಾಗಿದೆ. ವಿಜಯದಶಮಿಯ ದಿನ ಬಿಡುಗಡೆಯಾಗಬೇಕಿದ್ದ ಸಿನಿಮಾ ಒಂದು ದಿನ ಮುಂಚಿತವಾಗಿಯೇ, ನೂರಾರು ಸ್ಕ್ರೀನ್ ನಲ್ಲಿ ಪ್ರದರ್ಶನಗೊಂಡಿದೆ.
ಕಾಂತರ ಚಿತ್ರದ ಭಾರೀ ಯಶಸ್ಸಿನಿಂದಾಗಿ, ಈ ಚಾಪ್ಟರ್ ಒನ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯನ್ನು ಪ್ರೇಕ್ಷಕರು ಇಟ್ಟುಕೊಂಡಿದ್ದರು. ಬಿಡುಗಡೆಗೆ ಮುನ್ನವೇ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಕ್ಕಿದ್ದರಿಂದ, ಮೂಲ ಕನ್ನಡ ಸಿನಿಮಾವೊಂದು ಎಂದೆಂದೂ ಪಡೆಯದ ಸ್ಕೀನ್ ಗಳು ಈ ಚಿತ್ರಕ್ಕೆ ಸಿಕ್ಕಿದ್ದವು. ಚಿತ್ರ ನೋಡಿದವರು, ಓ ಗಾಡ್, ವಾಟ್ ಎ ಮೇಕಿಂಗ್ ಎಂದು ಚಿತ್ರತಂಡದ ಬೆನ್ನು ತಟ್ಟಿದ್ದಾರೆ.
ಇನ್ನೂ ಸಿನಿಮಾ ಮೂಡಿಬಂದ ರೀತಿ ಹಾಗೂ ಅದಕ್ಕೆ ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ಬಾರಿ ಮೆಚ್ಚುಗೆ ಕಂಡು ರಿಷಬ್ ಶೆಟ್ಟಿ ಪತ್ನಿ ಭಾವುಕರಾದರು. ಸಿನಿಮಾ ಪ್ರದರ್ಶನದ ಸಮಯದಲ್ಲಿ ರಿಷಬ್ ಶೆಟ್ಟಿ ಅವರ ಪತ್ನಿ, ನಟ-ವಿನ್ಯಾಸಕಿ ಪ್ರಗತಿ ಶೆಟ್ಟಿ, ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನೋಡಿ ಕಣ್ಣೀರು ಹಾಕಿದರು.
ಆಗ ಪತ್ನಿಯನ್ನು ಅಪ್ಪಿಕೊಂಡು ರಿಷಬ್ ಸಮಾಧಾನಪಡಿಸಿದ ದೃಶ್ಯ ಕಂಡುಬಂತು. ನಿಜಕ್ಕೂ ಇದು ಹೃದಯಸ್ಪರ್ಶಿ ಕ್ಷಣವಾಗಿದೆ. ವಿಜಯದಶಮಿ ದಿನವೇ ವಿಶ್ವದಾದ್ಯಂತ ಕಾಂತಾರ ಚಾಪ್ಟರ್ 1 ಸಿನಿಮಾ ರಿಲೀಸ್ ಆಗಿದೆ. ಎಲ್ಲೆಡೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾವನ್ನು ಪ್ರೇಕ್ಷಕರು ಎಂಜಾಯ್ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?