ಕಾಮಿಡಿ ಜೋಡಿ ಮಾಡುತ್ತೆ ಮೋಡಿ: ಟಾಯ್ಲೆಟ್ ಬಳಸುವುದು ಹೇಗೆ? ಹನುಮಂತನಿಗೆ ತೋರಿಸಿಕೊಟ್ಟ ಧನರಾಜ್!

ಲಾಯರ್ ಜಗದೀಶ್ ಎಕ್ಸಿಟ್ ಆದ ಮೇಲೆ ಎಲ್ಲರೂ ಅಂದುಕೊಂಡಂತೆ ಬಿಗ್ ಬಾಸ್ ಶೋದ ಗಮ್ಮತ್ತೇನೂ ಕಮ್ಮಿ ಆಗಿಲ್ಲ. ಒಂದು ಕಡೆ ಕುರಿಗಾಹಿ ಸಿಂಗರ್ ಹನುಮಂತ ದೊಡ್ಮನೆಗೆ ಎಂಟ್ರಿಯಾಗಿದ್ದಾನೆ. ಸರಿಗಮಪ 15 ಸಿಂಗಿಂಗ್ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದು, ನಂತರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲೂ ಭಾಗವಹಿಸಿದ್ದ ಹನುಮಂತ ಲಾಮಾಣಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು, ಬಂದ ದಿನವೇ ಕ್ಯಾಪ್ಟನ್ ಆಗಿ ಅಧಿಕಾರವನ್ನೂ ಕೂಡ ಪಡೆದುಕೊಂಡಿದ್ದರು.
ವೆಸ್ಟರ್ನ್ ಟಾಯ್ಲೆಟ್ ಹೇಗೆ ಬಳಸಬೇಕು? ಹೇಗೆ ಫ್ಲಶ್ ಮಾಡಬೇಕು ಎಂಬುದು ಹನುಮಂತನಿಗೆ ತಿಳಿದಿಲ್ಲ. ಹಾಗಾಗಿ ಅವರಿಗೆ ಧನರಾಜ್ ಪಾಠ ಮಾಡಿದ್ದಾರೆ. ಮಧ್ಯರಾತ್ರಿ ಎಲ್ಲರೂ ಮಲಗಿದ ನಂತರ ಈ ಪ್ರಸಂಗ ನಡೆದಿದೆ. ಇದು ಫ್ಲಶ್, ನೀರು ಬರೋದು, ಇದರ ಮೇಲೆ ಕೂರೋದು, ಇದನ್ನು ತೆಗೆದುಬಿಡಿ ಎನ್ನುತ್ತಾರೆ ಧನರಾಜ್. ಹನುಮಂತು ಅವರು ಇಲ್ಲಿ ಹೇಗೆ ಕುಳಿತಕೊಳ್ಳೋದು ಎಂದು ಕೇಳುತ್ತಾರೆ. ನಾನು ಹತ್ತಿ ಕೂರ್ತೀನಿ ಎನ್ನುತ್ತಾರೆ. ನಾನು ಕೂಡಾ ಹತ್ತಿ ಕೂತ್ಕೊಳುದು ಅಂತಾರೆ ಧನರಾಜ್. ಡೋರ್ ಲಾಕ್ ಮಾಡಿದ್ರೆ ಆಯ್ತು, ಮತ್ತೆ ನಮ್ಮಿಷ್ಟ ಎಂದು ಧನರಾಜ್ ಹೇಳುತ್ತಾರೆ. ಇದನ್ನು ಕೇಳಿ ಜನರು ನಗಾಡಿದ್ದಾರೆ.
ಇದ್ದೆಲ್ಲದರ ನಡುವೆ ಹನುಮಂತ ಮಾಡುತ್ತಿರುವ ಕೆಲವೊಂದು ವಿಷ್ಯಗಳು ವೀಕ್ಷಕರಲ್ಲಿ ಆಕ್ರೋಶದ ಜೊತೆಗೆ, ಸಂಶಯವನ್ನೂ ಮೂಡಿಸಿದೆ. ಕಳೆದ 5- 6 ವರ್ಷಗಳಿಂದ ನಿರಂತರವಾಗಿ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದ ಹನುಮಂತ ನಿಜವಾಗ್ಲೂ ಮುಗ್ದನೋ ಅಥವಾ ಜಾಣ ಪೆದ್ದ ನಂತೆ ನಟಿಸುತ್ತಿದ್ದಾನೋ ಎನ್ನುವ ಸಂಶಯ ಜನರಲ್ಲಿ ಕಾಡುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






