ಕಾಲ್ತುಳಿತ ಪ್ರಕರಣ: RCBಗೆ ಹೆಚ್ಚಿದ ಸಂಕಷ್ಟ - 3ನೇ FIR ದಾಖಲು

ಜೂನ್ 7, 2025 - 10:34
 0  9
ಕಾಲ್ತುಳಿತ ಪ್ರಕರಣ: RCBಗೆ ಹೆಚ್ಚಿದ ಸಂಕಷ್ಟ - 3ನೇ FIR ದಾಖಲು

ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣದಲ್ಲಿ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ವಿರುದ್ಧವೂ ದೂರು ದಾಖಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಹೋರಾಟಗಾರ ಹೆಚ್.ಎಂ.ವೆಂಕಟೇಶ್ ಅವರು ದೂರು ಸಲ್ಲಿಕೆ ಮಾಡಿದ್ದಾರೆ.

 ಇದರ ಬೆನ್ನಲ್ಲೇ ಪ್ರಕರಣ ಸಂಬಂಧ ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರ್​ಸಿಬಿ, ಕೆಎಸ್​ಸಿಎ, ಡಿಎನ್​ಎ ಕಂಪನಿ ವಿರುದ್ಧ ಮೂರನೇ ಎಫ್​ಐಆರ್​ ದಾಖಲಾಗಿದೆ. ಗಾಯಾಳು ಬಿಕಾಂ ವಿದ್ಯಾರ್ಥಿ ಸಿ.ವೇಣು ಅವರು ನೀಡಿದ ದೂರು ಆಧಾರಸಿ, ಎಫ್​ಐಆರ್​ ದಾಖಲಾಗಿದೆ.

 ಆರ್​ಸಿಬಿಯ ಉಚಿತ ಟಿಕೆಟ್‌ ಜಾಹೀರಾತು ನೋಡಿ ಕ್ರೀಡಾಂಗಣಕ್ಕೆ ಬಂದಿದ್ದೆ. ಕ್ರೀಡಾಂಗಣದ ಗೇಟ್ ನಂಬರ್ 6ರ ಬಳಿ ನೂಕುನುಗ್ಗಲು ಉಂಟಾಗಿತ್ತು. ನೂಕುನುಗ್ಗಲಿನಲ್ಲಿ ಬಲಗಾಲಿನ ಮೇಲೆ ಬ್ಯಾರಿಕೇಡ್‌ ಬಿದ್ದಿತ್ತು. ಇದರಿಂದ ಗಾಯಗೊಂಡು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow