ಇಂದು ಚಾಂಪಿಯನ್ಸ್ ಟ್ರೋಫಿ ಫೈನಲ್: ಈ ಬಾರಿ ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿ – ಭಾರೀ ಬದಲಾವಣೆ?

ಮಾರ್ಚ್ 9, 2025 - 09:17
 0  17
ಇಂದು ಚಾಂಪಿಯನ್ಸ್ ಟ್ರೋಫಿ ಫೈನಲ್: ಈ ಬಾರಿ ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿ –  ಭಾರೀ ಬದಲಾವಣೆ?

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವು ಅತ್ಯುತ್ತಮ ಪ್ರದರ್ಶನ ತೋರಿದ್ದು, ಅಜೇಯವಾಗಿ ಉಳಿದಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ವಿಚಾರವಾಗಿ ಮೊದಲಿನಿಂದಲೂ ಭಾರತದ ವಿರುದ್ಧ ಕಾಲು ಕೆರೆಯುತ್ತಿದ್ದ ಪಾಕಿಸ್ತಾನಕ್ಕೆ ತಕ್ಕಶಾಸ್ತಿಯಾಗಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿ ಫೈನಲ್ ನಲ್ಲಿ ಭಾರತ ತಂಡವನ್ನು ಗೆಲ್ಲಿಸುವ ಮೂಲಕ ರನ್ ಮೆಷಿನ್ ವಿರಾಟ್ ಕೊಹ್ಲಿ ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟಿದ್ದು, ಆಸ್ಟ್ರೇಲಿಯಾ ಸೋಲಿನೊಂದಿಗೆ ಟೂರ್ನಿಯ ಫೈನಲ್ ಪಂದ್ಯ ಇದೀಗ ದುಬೈಗೆ ಸ್ಥಳಾಂತರವಾಗಿದೆ.

ಬರೊಬ್ಬರಿ 2 ದಶಕಗಳ ಬಳಿಕ ತನ್ನ ದೇಶದಲ್ಲಿ ಐಸಿಸಿ ಟೂರ್ನಿ ಆಯೋಜಿಸಿತ್ತು. ಆದರೆ ಭಾರತ ಸರ್ಕಾರ ಮತ್ತು ಬಿಸಿಸಿಐ ನಿಲುವಿನಿಂದಾಗಿ ಪಾಕಿಸ್ತಾನದಲ್ಲಿ ಆಯೋಜಿಸಬೇಕಿದ್ದ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಹೈಬ್ರಿಡ್ ಮಾದರಿಗೆ ಬದಲಾಯಿತು.

ಅದರಂತೆ ದುಬೈ ಮತ್ತು ಪಾಕಿಸ್ತಾನದ ಕ್ರೀಡಾಂಗಣಗಳಲ್ಲಿ ಟೂರ್ನಿ ಆಯೋಜನೆಯಾಯಿತು. ಆದರೆ ಟೂರ್ನಿ ಆರಂಭವಾದ ಐದೇ ದಿನಗಳಲ್ಲಿ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬಿದಿತ್ತು. ಭಾರತದ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ಸೋತು ಟೂರ್ನಿಯಿಂದಲೇ ಹೊರಬಿತ್ತು. ಇದೀಗ ಆಸ್ಟ್ರೇಲಿಯಾದ ವಿರುದ್ಧ ಭಾರತ ಜಯ ಗಳಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿ ಟೂರ್ನಿಯೇ ಪಾಕಿಸ್ತಾನದಿಂದ ಹೊರಹೋಗುವಂತೆ ಮಾಡಿದೆ.

ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ನಾಡಿದ್ದ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಈ ಮಧ್ಯೆ ಟೀಂ ಇಂಡಿಯಾದ ಪ್ಲೇಯಿಂಗ್-11ನಲ್ಲಿ ಮಹತ್ವದ ಬದಲಾವಣೆ ಆಗುತ್ತಾ ಎಂಬ ಚರ್ಚೆ ಮುನ್ನಲೆಗೆ ಬಂದಿದೆ. ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಭಾರತ ತಂಡವು ಪ್ಲೇಯಿಂಗ್-XIರಲ್ಲಿ ಯಾವುದೇ ಬದಲಾವಣೆ ಮಾಡಬಾರದು ಮತ್ತು 4 ಸ್ಪಿನ್ನರ್‌ಗಳನ್ನು ಆಡಿಸುವ ಸೂತ್ರಕ್ಕೆ ಅಂಟಿಕೊಳ್ಳಬೇಕು ಎಂದು ಬಲವಾಗಿ ಒತ್ತಾಯಿಸಿದ್ದಾರೆ.

ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ಇಬ್ಬರನ್ನೂ ಸೇರಿಸಿಕೊಂಡಿರುವುದು ತಂಡದ ಬಲವನ್ನು ಹೆಚ್ಚಿಸಿದೆ. ಅವರಿಬ್ಬರ ಕಾಂಬಿನೇಷನ್​​ ಹಾಳು ಮಾಡಬಾರದು. ಫೈನಲ್ ಪಂದ್ಯದಲ್ಲಿ ನನ್ನ ಪ್ರಕಾರ, ನಾಲ್ವರು ಸ್ಪಿನ್ನರ್​​ ಇದ್ದೇ ಇರುತ್ತಾರೆ ಎನಿಸುತ್ತೆ. ಹಾಗೆಯೇ ಇರಬೇಕು. ಚಕ್ರವರ್ತಿ ಸೇರ್ಪಡೆ, ಕುಲ್‌ದೀಪ್ ಸೇರ್ಪಡೆ ಅವರು ಎಷ್ಟು ಪರಿಣಾಮಕಾರಿ ಅನ್ನೋದು ತಂಡಕ್ಕೆ ಗೊತ್ತಾಗಿದೆ. ಕೆಲವೊಮ್ಮೆ ವಿಕೆಟ್ ಬೀಳದಿದ್ದರೂ ಅವು ಅತ್ಯುತ್ತಮ ಡಾಡ್ ಬಾಲ್​ಗಳಾಗಿವೆ. ನನ್ನ ಪ್ರಕಾರ ತಂಡದಲ್ಲಿ ಯಾವುದೇ ಬದಲಾವಣೆ ಇರಬಾರದು ಎಂದು ಸುನಿಲ್ ಗವಾಸ್ಕರ್​ ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow