ಕುಡಿತದ ಚಟ: ಎಣ್ಣೆಗಾಗಿ ಮಗುವನ್ನೇ ಮಾರಿದ ದಂಪತಿ!

ವಾಷಿಂಗ್ಟನ್:- ಅಮೆರಿಕದ ವಾಷಿಂಗ್ಟನ್ನಲ್ಲಿ ದಂಪತಿ ಒಬ್ಬರು ತಮ್ಮ ಮೂರು ತಿಂಗಳ ಮಗುವನ್ನೇ ಮಾರಾಟ ಮಾಡಿದ್ದಾರೆ. ಹತ್ಯೆಗೆ ಕಾರಣ ಕೇಳಿದ್ರೆ ನೀವೇ ಅಚ್ಚರಿ ಪಡ್ತೀರಾ! ಅಲ್ಲದೇ ಛೀ, ಥೂ ಎಂದು ಉಗಿತೀರಾ!?
ಎಸ್, ಅಮೆರಿಕದ ವಾಷಿಂಗ್ಟನ್ನಲ್ಲಿ ಬಿಯರ್‌ಗಾಗಿ ದಂಪತಿಯೊಂದು ತಮ್ಮ ಮೂರು ತಿಂಗಳ ಹಸುಗೂಸನ್ನೇ ಮಾರಾಟ ಮಾಡಿರುವ ಘಟನೆ ನಡೆದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ರೋಜರ್ಸ್‌ನ ಕ್ಯಾಂಪ್ಗ್ರೌಂಡ್ಗೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಪೋಷಕರಾದ ಡೇರಿಯನ್ ಅರ್ಬನ್ ಮತ್ತು ಶಲೇನ್ ಎಹ್ಲರ್ನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಸೆಪ್ಟೆಂಬರ್ 21 ರಂದು ಹಸುಗೂಸನ್ನು ಸುಮಾರು 83 ಸಾವಿರ ರೂ. ನಗದು ಹಣ ಮತ್ತು ಬಿಯರ್ ಗೆ ಮಾರಾಟ ಮಾಡಿದ್ದರು. ಈ ಬಗ್ಗೆ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು,ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ. ಆದರೆ ಅದಾಗಲೇ ಮಗುವಿನ ಪೋಷಕರು ಅಲ್ಲಿಂದ ಪರಾರಿಯಾಗಿದ್ದಾರೆ.
ಈ ದಂಪತಿ ಸಾವಿರ ಡಾಲರ್‌ಗಳಿಗೆ ಮಾರಾಟ ಮಾಡಲು ಒಪ್ಪಿದ ಪತ್ರ ವಾಸಿಸುತ್ತಿದ್ದ ಟೆಂಟ್‌ನಲ್ಲಿ ಪತ್ತೆಯಾಗಿವೆ. ಇದರಲ್ಲಿ ನಗದು ಜೊತೆಗೆ ಬಿಯರ್ ನೀಡಲು ಒಪ್ಪಂದ ಮಾಡಿಕೊಂಡಿರುವುದನ್ನು ಕಂಡು ಪೊಲೀಸರು ದಂಗಾಗಿ ಹೋಗಿದ್ದಾರೆ. ಇಬ್ಬರೂ ಪೋಷಕರು ಪತ್ರಕ್ಕೆ ಸಹಿ ಹಾಕಿರುವ ಸೆಲ್‌ಫೋನ್ ವಿಡಿಯೋವನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಇದೀಗ ಮಗುವಿನ ಪೋಷಕರಾದ ಡೇರಿಯನ್ ಅರ್ಬನ್ ಮತ್ತು ಶಲೇನ್ ಎಹ್ಲರ್ನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






