ಸರ್ಕಾರಿ ಕೆಲಸ ಹುಡುಕ್ತಿದ್ದೀರಾ!? ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿದೆ ಹಲವು ಹುದ್ದೆ, ಕೈತುಂಬಾ ಸಂಬಳ!

ಅಕ್ಟೋಬರ್ 2, 2024 - 08:15
 0  18
ಸರ್ಕಾರಿ ಕೆಲಸ ಹುಡುಕ್ತಿದ್ದೀರಾ!? ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿದೆ ಹಲವು ಹುದ್ದೆ, ಕೈತುಂಬಾ ಸಂಬಳ!

ಸರ್ಕಾರಿ ಉದ್ಯೋಗಗಳಿಗೆ ಕಾಯ್ದು ಕುಳಿತಿರುವಂತಹ ಅಭ್ಯರ್ಥಿಗಳು ಈ ಸುದ್ದಿ ನೋಡಲೇಬೇಕು. ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ರಾಜ್ಯದ ಲೋಕೋಪಯೋಗಿ ಇಲಾಖೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. 

ಇಲಾಖೆ ಅರ್ಜಿಗಳು ಇನ್ನು ಪ್ರಾರಂಭವಾಗಬೇಕಿದೆ. ಹೀಗಾಗಿ ವಿದ್ಯಾರ್ಥಿಗಳು ಹುದ್ದೆಗೆ ಸಲ್ಲಿಕೆ ಮಾಡಬೇಕಾದ ದಾಖಲೆಗಳು ಇಲ್ಲದಿದ್ದಲ್ಲಿ ಅವುಗಳನ್ನು ಮಾಡಿಕೊಳ್ಳಬೇಕು.

ಕರ್ನಾಟಕ ಲೋಕೋಪಯೋಗಿ ಇಲಾಖೆ ಯು ಹೊಸ ನೇಮಕಾತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಹುದ್ದೆಗೆ ಸಂಬಂಧಿಸಿದ ಇತರೆ ಎಲ್ಲ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಎಲ್ಲವನ್ನು ಸರಿಯಾಗಿ ತಿಳಿದುಕೊಂಡು ನಿಮ್ಮ ಗುರಿ ಕಡೆ ಗಮನಗೊಡಬೇಕು. ಇನ್ನು ಹುದ್ದೆಗಳಿಗೆ ಆನ್​​ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಸ್ಯಾಲರಿ-
₹83,700 ರಿಂದ ₹1,55,200

ಅರ್ಜಿ ಶುಲ್ಕ-

ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 300 ರೂ.ಗಳು
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು- 600 ರೂ.ಗಳು
ಮಾಜಿ ಸೈನಿಕರಿಗೆ -50 ರೂಪಾಯಿಗಳು
ಎಸ್​​ಸಿ, ಎಸ್​ಟಿ, ವಿಶೇಷ ಚೇತನರಿಗೆ- ವಿನಾಯಿತಿ ಇದೆ.

ಶೈಕ್ಷಣಿಕ ವಿದ್ಯಾರ್ಹತೆ-


ಇಂಜಿನಿಯರ್​ ಪದವಿಯಲ್ಲಿ ಸಿವಿಲ್ ಅಥವಾ ಕನ್​ಸ್ಟ್ರಕ್ಷನ್ ಟೆಕ್ನಾಲಜಿ ಮತ್ತು ಮ್ಯಾನೇಜ್​ಮೆಂಟ್ ಅಥವಾ ಬಿಲ್ಡಿಂಗ್ ಮತ್ತು ಕನ್​ಸ್ಟ್ರಕ್ಷನ್ ಟೆಕ್ನಾಲಜಿ ಅಭ್ಯಾಸ ಮಾಡಿರಬೇಕು. ಡಿಪ್ಲೋಮಾದಲ್ಲಿ ಡಿಗ್ರಿ ಪಡೆದಿರಬೇಕು

ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತದೆ..?

ಸ್ಪರ್ಧಾತ್ಮಕ ಪರೀಕ್ಷೆ
ವ್ಯಕ್ತತ್ವ ಪರೀಕ್ಷೆ
ವಯೋಮಿತಿ/ ಸಡಿಲಿಕೆ

ಕನಿಷ್ಠ 21 ವರ್ಷದಿಂದ ಗರಿಷ್ಠ 40 ವರ್ಷಗಳು
ಸಾಮಾನ್ಯ ಅಭ್ಯರ್ಥಿಗಳಿ- 35 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 38 ವರ್ಷ
ಎಸ್​​ಸಿ, ಎಸ್​ಟಿ, ವಿಶೇಷ ಚೇತನರಿಗೆ- 40 ವರ್ಷ

ಪ್ರಮುಖ ದಿನಾಂಕ-
ಅರ್ಜಿ ಸಲ್ಲಿಸಲು ಆರಂಭ ದಿನಾಂಕ- 03 ಅಕ್ಟೋಬರ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 04 ನವೆಂಬರ್ 2024

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow