“ಕೂಲಿ' ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ರೊಮ್ಯಾನ್ಸ್ʼಗೆ ರೆಡಿಯಾದ ರಚಿತಾ ರಾಮ್..!

ಆಗಸ್ಟ್ 31, 2025 - 20:04
 0  18
“ಕೂಲಿ' ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ರೊಮ್ಯಾನ್ಸ್ʼಗೆ ರೆಡಿಯಾದ ರಚಿತಾ ರಾಮ್..!

ಕನ್ನಡದ ನಟಿ ರಚಿತಾ ರಾಮ್ ‘ಕೂಲಿ’ ಚಿತ್ರದಲ್ಲಿ ಕಲ್ಯಾಣಿ ಎಂಬ ಪಾತ್ರದಲ್ಲಿ ವಿಲನ್ ಶೇಡ್‌ನ ವಲಯದ ಪವರ್‌ಫುಲ್ ಪಾತ್ರ ಮಾಡಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು. ಇದೀಗ ಅವರು ತಮಿಳು ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ಹೊಸ ಸಿನಿಮಾ ಪ್ರಾಜೆಕ್ಟ್‌ನಲ್ಲಿ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಹರಡುತ್ತಿದೆ. ಲೋಕೇಶ್ ಈಗ ಹೀರೋ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಅರುಣ್ ಮಾತೇಶ್ವರನ್ ನಿರ್ದೇಶನದ ಈ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ಆಡಲಿದ್ದಾರೆ ಎಂಬ ಮಾಹಿತಿಯು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ವರದಿಗಳಂತೆ, ಲೋಕೇಶ್ ಈಗ ಥೈಲ್ಯಾಂಡ್‌ನಲ್ಲಿ ನಟನೆ ತರಬೇತಿಗಾಗಿ ಇರುವುದಾಗಿ ತಿಳಿದು ಬಂದಿದೆ. ಲೋಕೇಶ್ ಅವರು ಹೀರೋ ಆಗಲು ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವರದಿಗಳು ಹೇಳುವಂತೆ ಅವರು  ಥೈಲ್ಯಾಂಡ್​ಗೆ ತೆರಳಿದ್ದಾರೆ. ಅಲ್ಲಿ, ಅವರು ನಟನೆಗೆ ತರಬೇತಿ ಪಡೆಯುತ್ತಿದ್ದಾರೆ. ಹೀಗಿರುವಾಗಲೇ ರಚಿತಾ ರಾಮ್ ಅವರು ಈ ಚಿತ್ರಕ್ಕೆ ನಾಯಕಿ ಎನ್ನುವ ವಿಚಾರ ಹರಿದಾಡಿದೆ.

ಲೋಕೇಶ್ ಕನಗರಾಜ್ ಅವರೇ ‘ಕೂಲಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅವರು ರಚಿತಾಗೆ ಪವರ್​ಫುಲ್ ಪಾತ್ರವನ್ನೇ ನೀಡಿದ್ದಾರೆ. ಈ ಪಾತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಈಗ ಅವರು ಕಾಲಿವುಡ್​​ನಲ್ಲಿ ನಾಯಕಿ ಆಗಿ ಮಿಂಚಲು ರೆಡಿ ಆಗಿದ್ದಾರೆ ಎಂದು ವರದಿ ಆಗಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow