ಕ್ಯಾನ್ಸರ್ʼಗೆ ಕಾರಣವಾಗಬಹುದು ನೆಚ್ಚಿನ ಇಡ್ಲಿ: ಆಹಾರ ಇಲಾಖೆಯಿಂದ ಆಘಾತಕಾರಿ ವರದಿ

ಫೆಬ್ರವರಿ 27, 2025 - 12:02
 0  13
ಕ್ಯಾನ್ಸರ್ʼಗೆ ಕಾರಣವಾಗಬಹುದು ನೆಚ್ಚಿನ ಇಡ್ಲಿ: ಆಹಾರ ಇಲಾಖೆಯಿಂದ ಆಘಾತಕಾರಿ ವರದಿ

ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಹಲವಾರು ಅಂಶಗಳ ಪೈಕಿ, ಇಂದಿನ ಕಾಲದಲ್ಲಿ ಕಳಪೆ ಆಹಾರ ಮತ್ತು ಜಡ ಜೀವನಶೈಲಿ ಕೂಡ ಮುಖ್ಯ ಪಾತ್ರ ವಹಿಸುತ್ತವೆ. ವರ್ಷ ಕಳೆದಂತೆ ನಾವು ಹೆಚ್ಚು ನಿಷ್ಕ್ರಿಯವಾಗುತ್ತಿದ್ದಂತೆ ನಮ್ಮ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತಲೇ ಹೋಗುತ್ತದೆ ಎಮಬುವುದು ನಮಗೆ ಗೊತ್ತಿರುವ ವಿಚಾರ.

ಆದ್ರೆ ಇದೀಗ ಬೆಂಗಳೂರಿನ ಹಲವೆಡೆ ಇಡ್ಲಿ ತಯಾರಿಕೆಯಲ್ಲಿ ಹತ್ತಿ ಬಟ್ಟೆಯ ಬದಲು ಪ್ಲಾಸ್ಟಿಕ್ ಕವರ್‌ಗಳನ್ನು ಬಳಸುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ತಿಳಿದುಬಂದಿದೆ. ಇಡ್ಲಿ ಮಾಡುವಾಗ ಮಾತ್ರವಲ್ಲದೆ, ಆಹಾರವನ್ನು ಬಡಿಸುವಾಗ ಮತ್ತು ಪ್ಯಾಕ್ ಮಾಡುವಾಗಲೂ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿದೆ. ಈ ಪ್ಲಾಸ್ಟಿಕ್ ಹಾಳೆಗಳು ಶಾಖಕ್ಕೆ ಒಡ್ಡಿಕೊಂಡಾಗ ಕ್ಯಾನ್ಸರ್ ಕಾರಕವಾದ ಹಾನಿಕಾರಕ ವಸ್ತುಗಳನ್ನು ಹೊರಸೂಸುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚೆಗೆ ಬೆಂಗಳೂರಿನ ಹಲವೆಡೆ ಇಡ್ಲಿ ತಯಾರಿಕಾ ಘಟಕಗಳು ಮತ್ತು ತಿಂಡಿ ಅಂಗಡಿಗಳ ಮೇಲೆ ದಾಳಿ ನಡೆಸಿದ ಆಹಾರ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು, ಸುಮಾರು 500 ಇಡ್ಲಿ ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದರು. ಪರೀಕ್ಷೆಗೆ ಒಳಪಡಿಸಿದಾಗ, ಅವುಗಳಲ್ಲಿ 35ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್‌ಗಳು ಅತ್ಯಂತ ಅಪಾಯಕಾರಿ ಮತ್ತು ಆರೋಗ್ಯಕ್ಕೆ ಹಾನಿಕರ ಎಂದು ಕಂಡುಬಂದಿದೆ.

ಈಗಾಗಲೆ ಬಂದಿರುವ ಸ್ಯಾಂಪಲ್​ಗಳನ್ನು ಹೊರತುಪಡಿಸಿ ಉಳಿದ 100 ಸ್ಯಾಂಪಲ್‌ಗಳ ವರದಿಗಾಗಿ ಆಹಾರ ಇಲಾಖೆ ಕಾಯುತ್ತಿದೆ. ಸಂಪೂರ್ಣ ವರದಿ ಬಂದ ಬಳಿಕ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳಲು ಆಹಾರ ಇಲಾಖೆ ಪ್ಲ್ಯಾನ್ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow