Lakshmi Devi Puja: ಶುಕ್ರವಾರ ಲಕ್ಷ್ಮಿ ಪೂಜೆಯನ್ನ ಹೀಗೆ ಮಾಡಿದ್ರೆ ಸಂಪತ್ತು ಹೆಚ್ಚಾಗುತ್ತೆ..!

ಫೆಬ್ರವರಿ 28, 2025 - 07:01
 0  10
Lakshmi Devi Puja: ಶುಕ್ರವಾರ ಲಕ್ಷ್ಮಿ ಪೂಜೆಯನ್ನ ಹೀಗೆ ಮಾಡಿದ್ರೆ ಸಂಪತ್ತು ಹೆಚ್ಚಾಗುತ್ತೆ..!

ಹಿಂದೂ ಧರ್ಮದಲ್ಲಿ, ಪ್ರತಿ ದಿನವನ್ನು ಕೆಲವು ದೇವತೆಗಳಿಗೆ ಅರ್ಪಿಸಲಾಗುತ್ತೆ. ಶುಕ್ರವಾರ ಲಕ್ಷ್ಮಿ ದೇವಿಗೆ ಅರ್ಪಿತ. ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಎಲ್ಲರೂ ಪೂಜಿಸುತ್ತಾರೆ. ಲಕ್ಷ್ಮಿ ದೇವಿಯು ಸಂಪತ್ತು, ಖ್ಯಾತಿ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಮಾತಾ ಲಕ್ಷ್ಮಿಯ ಆಶೀರ್ವಾದದಿಂದ ಮನೆ ಮತ್ತು ವ್ಯಾಪಾರದ ಬೊಕ್ಕಸವು ತುಂಬಿರುತ್ತದೆ. ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದೂ ಕರೆಯುತ್ತಾರೆ, ಆದ್ದರಿಂದ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಬಿಕ್ಕಟ್ಟು ದೂರವಾಗುವುದಲ್ಲದೆ ಸಂಪತ್ತು ಕೂಡ ಬರುತ್ತದೆ.

  1. ಆರ್ಥಿಕ ಸಮಸ್ಯೆಯಿಂದ ಹೈರಾಣಾಗಿದ್ದರೆ ಶುಕ್ರವಾರ ಉಪವಾಸ ಮಾಡಿ ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ಇದರಿಂದ ಮನೆಯಲ್ಲಿನ ಎಲ್ಲಾ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದರ ಜೊತೆಗೆ ಸಂಪತ್ತು ಹಾಗೂ ಸಂತೋಷ ಸಹ ಹೆಚ್ಚಾಗುತ್ತದೆ.
  2. ಶುಕ್ರವಾರ ಈಶಾನ್ಯ ದಿಕ್ಕಿನಲ್ಲಿ ದೇವಿಯ ಪೂಜೆ ಮಾಡಬೇಕು. ಸಾಧ್ಯವಾದರೆ ನಿಮ್ಮ ದೇವರ ಕೋಣೆ ಈಶಾನ್ಯ ದಿಕ್ಕಿನಲ್ಲಿ ಇರಬೇಕು. ಹಾಗೆಯೇ, ಅದರ ಸುತ್ತ ಅಡುಗೆ ಕೋಣೆ ಅಥವಾ ಶೌಚಾಲಯ ಇರದಂತೆ ವಿಶೇಷ ಕಾಳಜಿ ವಹಿಸಬೇಕು.
  3. ಮುಖ್ಯವಾಗಿ ಶುಕ್ರವಾರ ತಪ್ಪದೇ ತಲೆಸ್ನಾನ ಮಾಡಿ, ಮಡಿ ಬಟ್ಟೆಯನ್ನ ಧರಿಸಿ ಪೂಜೆಮಾಡಬೇಕು ಎನ್ನಲಾಗುತ್ತದೆ. ಇನ್ನು ಈ ದಿನ ಪೂಜೆ ಮಾಡುವಾಗ ದೇವಿಯ ಫೋಟೋದ ಜೊತೆಗೆ ಶ್ರೀಯಂತ್ರವನ್ನ ಸಹ ಇಟ್ಟು ಪೂಜೆ ಮಾಡಬೇಕು.
  4. ಈ ಪೂಜೆಯ ವಿಚಾರಕ್ಕೆ ಬಂದರೆ ಮತ್ತೊಂದು ವಿಚಾರ ನೆನಪಿನಲ್ಲಿರಬೇಕು, ಅದು ಸ್ವಚ್ಛತೆ. ನಮ್ಮ ಮನೆ ಸ್ವಚ್ಛವಾಗಿದ್ದರೆ ಮಾತ್ರ ದೇವರ ಆಶೀರ್ವಾದ ಸಿಗುತ್ತದೆ. ಅದರಲ್ಲೂ ಶುಕ್ರವಾರ ಮನೆಯನ್ನ ಬಹಳ ಸ್ವಚ್ಛವಾಗಿ ಇಟ್ಟರೆ ಸಂಪತ್ತು ಹೆಚ್ಚಾಗುತ್ತದೆ.
  5. ಈ ದಿನ ನೀವು ಕ್ರೀಂ ಬಣ್ಣದ ಬಟ್ಟೆಯನ್ನ ಧರಿಸಬೇಕು. ಈ ದಿನ ಯಾವುದೇ ಕಾರಣಕ್ಕೂ ಮಾಂಸಹಾರ ಸೇವನೆ ಮಾಡಬಾರದು. ಹಾಗೆಯೇ, ತಪ್ಪದೇ ಶ್ರೀ ಸೂಕ್ತಂ ಪಠಣೆ ಮಾಡಿದರೆ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇಂದು ಮಹಿಳೆಯರಿಗೆ ಅರಿಶಿನ ಕುಂಕುಮ ಸಹ ದಾನ ಮಾಡಿ.         
  6. ಲಕ್ಷ್ಮಿ ದೇವಿಯನ್ನು ಆರಾಧಿಸಲು ಈ ದಿನ ತಪ್ಪದೇ ಕಮಲದ ಹೂವು ಹಾಗೂ ಗುಲಾಬಿಯನ್ನು ಅರ್ಪಣೆ ಮಾಡಬೇಕು. ಮುಖ್ಯವಾಗಿ ಕೆಂಪು ಬಣ್ಣದ ಗುಲಾಬಿ ಹೂವನ್ನ ಅರ್ಪಿಸಿದರೆ ನಿಮ್ಮ ಜೀವನದಲ್ಲಿ ಎಂದಿಗೂ ಹಣದ ಸಮಸ್ಯೆ ಬರುವುದಿಲ್ಲ.



ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow