ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಬೋರ್‌ʼವೆಲ್‌ ಕೊರೆಸಿ ಯಶಸ್ಸು ಕಂಡ ಅತ್ತೆ, ಸೊಸೆ!

ಡಿಸೆಂಬರ್ 14, 2024 - 16:01
 0  26
ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಬೋರ್‌ʼವೆಲ್‌ ಕೊರೆಸಿ ಯಶಸ್ಸು ಕಂಡ ಅತ್ತೆ, ಸೊಸೆ!

ಗದಗ: ಕಾಂಗ್ರೆಸ್​​ನ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಗಳನ್ನ ಹಾಕಲಾಗುತ್ತಿದೆ. ಈ ಹಣದಿಂದ ಎಷ್ಟೋ ಮಹಿಳೆಯರು ತಮ್ಮ ಚಿಕ್ಕ ಚಿಕ್ಕ ಆಸೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಸರ್ಕಾರ ಹಾಕುವ 2 ಸಾವಿರ ಹಣವನ್ನು ಕೂಡಿಟ್ಟು, ಫ್ರಿಡ್ಜ್, ವಾಷಿಂಗ್​ ಮಷಿನ್​​,

ಮಕ್ಕಳಿಗೆ ಬೈಕ್​ ಸೇರಿದಂತೆ ಹಲವು ಆಸೆಗಳನ್ನು ಈಡೇರಿಸಿಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಇದೀಗ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಹಾಗೂ ಸೊಸೆ ಕೊಳವೆ ಬಾವಿ ಕೊರೆಸಿದ್ದಾರೆ. ಬೋರ್‌ವೆಲ್‌ ಕೊರೆಸಿದ ನಂತರ ಉತ್ತಮ ನೀರು ಕೂಡ ಸಿಕ್ಕಿದೆ. ಇದರಿಂದ ಗೃಹಲಕ್ಷ್ಮಿ ಈ ಕುಟುಂಬ ಧನ್ಯವಾದಗಳನ್ನು ಅರ್ಪಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಅತ್ತೆ ಹಾಗೂ ಸೊಸೆ ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ ಬಂದಿದ್ದ 44000 ರೂಪಾಯಿ ಹಣ ಕೂಡಿಟ್ಟಿದ್ದರು ಎನ್ನಲಾಗಿದೆ. ಈ ಹಣವನ್ನು ಅವರು ಕೊಳವೆ ಬಾವಿ ಕೊರೆಸಲು ನೀಡಿದ್ದರು. ಒಟ್ಟಾರೆ ಬೋರ್‌ವೆಲ್‌ ಕೊರೆಸಲು 60000 ರೂಪಾಯಿವರೆಗೆ ಖರ್ಚಾಗಿದೆ. ಇದಕ್ಕೆ ಪ್ರಧಾನವಾಗಿ ಗೃಹಲಕ್ಷ್ಮಿ ಹಣವೇ ಬಳಕೆಯಾಗಿದ್ದು, ಬಾಕಿ ಹಣವನ್ನು ಪುತ್ರ ನೀಡಿರುವುದಾಗಿ ತಿಳಿಸಿದ್ದಾರೆ.


ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow