ಜಾಲಿ-ಜಾಲಿ, ದುಬೈಗೆ ಹಾರಿದ ಕನ್ನಡ ಕಿರುತೆರೆ ನಟಿಯರು!

ಕನ್ನಡ ಕಿರುತೆಯಲ್ಲಿ ತಮ್ಮ ಅಮೋಘ ನಟನೆ ಮೂಲಕ ಎಲ್ಲರ ಮನೆ ಮಾತಾಗಿರುವ ನಮ್ರತಾ, ದಿವ್ಯಾ ಉರುಡುಗ ಅವರು ಜಾಲಿ ಮೂಡ್ ನಲ್ಲಿದ್ದಾರೆ.
ನಮ್ರತಾ ಗೌಡ, ಖುಷಿ ರವಿ, ದಿವ್ಯಾ ಉರುಡುಗ ದುಬೈನಲ್ಲಿ ವೆಕೇಷನ್ ಮೂಡ್‌ನಲ್ಲಿದ್ದಾರೆ. ಸುಂದರ ಜಾಗಗಳಿಗೆ ಭೇಟಿ ಕೊಟ್ಟಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ದುಬೈನ ಮರುಳುಗಾಡಿನಲ್ಲಿ ಸೇರಿದಂತೆ ಹಲವು ಜಾಗಗಳಿಗೆ ಅವರು ಭೇಟಿ ಕೊಟ್ಟಿದ್ದಾರೆ. ಅದಷ್ಟೇ ಅಲ್ಲ, ವಿಭಿನ್ನ ಎನಿಸುವಂತಹ ತಿನಿಸುಗಳನ್ನು ಟೆಸ್ಟ್ ಮಾಡಿದ್ದಾರೆ.
ಅಂದಹಾಗೆ, ಕೆಲಸಕ್ಕೆ ಬ್ರೇಕ್ ನೀಡಿ ದುಬೈಗೆ ಹೋಗಿದ್ದಕ್ಕೆ ಕಾರಣವಿದೆ. ಅದವೇ ರಾಜ್ ಕಪ್ ಕ್ರಿಕೆಟ್ ಟೂರ್ನ್‌ಮೆಂಟ್‌ಗಾಗಿ ನಟಿಯರು ತೆರಳಿದ್ದಾರೆ. ಸದ್ಯ ದಿವ್ಯಾ ಉರುಡುಗ ‘ನಿನಗಾಗಿ’ ಸೀರಿಯಲ್ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ.
ನಮ್ರತಾ ಗೌಡ ಅವರು ‘ಬಿಗ್ ಬಾಸ್ ಕನ್ನಡ 10’ ಆದ್ಮೇಲೆ ಹಲವು ಶೋ ಮತ್ತು ಜಾಹೀರಾತುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾ ಮಾಡಲು ಉತ್ತಮ ಕಥೆಗಾಗಿ ಎದುರು ನೋಡ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






