Bhuvneshwar Kumar: ಬರೋಬ್ಬರಿ 10.75 ಕೋಟಿಗೆ RCB ತಂಡ ಸೇರಿದ ಟೀಮ್ ಇಂಡಿಯಾದ ಸ್ಟಾರ್ ವೇಗಿ!

2025ರ ಐಪಿಎಲ್ ಕ್ರಿಕೆಟ್ ಹಬ್ಬಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ತಂಡಗಳ ಹರಾಜು ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶಿಸಿದ ಆರ್ಸಿಬಿ ಭುವನೇಶ್ವರ್ ಕುಮಾರ್ರನ್ನು 10.75 ಕೋಟಿ ರೂ. ಖರೀದಿಸಿದೆ. ಆ ಮೂಲಕ ಇದು ಎರಡನೇ ದಿನದ ಹರಾಜು ಪ್ರಕ್ರಿಯೆಯ ದೊಡ್ಡ ಮೊತ್ತವಾಗಿದೆ.
2 ಕೋಟಿ ಮೂಲ ಬೆಲೆ ಹೊಂದಿದ್ದ ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸಲು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಭಾರೀ ಪೈಪೋಟಿ ನಡೆಸಿದವು. ಲಕ್ನೋ ಸೂಪರ್ ಜೈಂಟ್ಸ್ 10 ಕೋಟಿ ಬಿಡ್ ಸಲ್ಲಿಸಿತು.
ಅಂತಿಮವಾಗಿ RCB 10. 75 ಕೋಟಿ ಬಿಡ್ ಸಲ್ಲಿಸುವ ಮೂಲಕ ಭುವಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಐಪಿಎಲ್ನಲ್ಲಿ ಸಕ್ರಿಯರಾಗಿರುವ ಭುವಿಗೆ 2022 ರ ಟಿ20 ವಿಶ್ವಕಪ್ ಬಳಿಕ ಮತ್ತೆ ಟೀಂ ಇಂಡಿಯಾ ಕದ ತೆರೆದಿಲ್ಲ. ಆದಾಗ್ಯೂ ಭುವಿ ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಅಧಿಕ ವಿಕೆಟ್ ಪಡೆದ 3 ನೇ ಬೌಲರ್ ಎನಿಸಿಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






