ಜಿಯೋ ಬಳಕೆದಾರರೇ ಈ ನಂಬರ್ ನಿಂದ ಕರೆ ಬಂದ್ರೆ ಹುಷಾರ್ರಪ್ಪೋ! ರಿಸೀವ್ ಮಾಡೋಕೂ ಮುನ್ನ ಎಚ್ಚರ!

ಜನವರಿ 16, 2025 - 08:03
 0  10
ಜಿಯೋ ಬಳಕೆದಾರರೇ ಈ ನಂಬರ್ ನಿಂದ ಕರೆ ಬಂದ್ರೆ ಹುಷಾರ್ರಪ್ಪೋ! ರಿಸೀವ್ ಮಾಡೋಕೂ ಮುನ್ನ ಎಚ್ಚರ!

ರಿಲಯನ್ಸ್ ಜಿಯೋ ಹೊಸ ರೀತಿಯ ವಂಚನೆಯ ಬಗ್ಗೆ ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಈ ವಂಚನೆ ಜಾಲದಲ್ಲಿ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಮಿಸ್ಡ್ ಕಾಲ್‌ಗಳು ಬರುತ್ತವೆ. ಈ ಸಂಖ್ಯೆಗಳಿಗೆ ನೀವು ಮತ್ತೆ ಕರೆ ಮಾಡಿದರೆ ನೀವು ಭಾರೀ ಫೋನ್ ಬಿಲ್ ತೆರಬೇಕಾಗುತ್ತದೆ. 

ಇತ್ತೀಚೆಗೆ ಅಂತಾರಾಷ್ಟ್ರೀಯ ನಂಬರ್​​ಗಳಿಂದ ಮಿಸ್ಡ್ ಕಾಲ್ ಕೊಟ್ಟು ವಂಚಿಸಿದ ಘಟನೆಗಳು ಹೆಚ್ಚಿವೆ. ಕೆಲವು ನಂಬರ್​​ಗಳಿಂದ ಬರುವ ಕರೆಗಳನ್ನು ಸ್ವೀಕರಿಸಬೇಡಿ ಎಂದು ಸೂಚನೆ ನೀಡಿದೆ.

ವಂಚಕರು ಅಪರಿಚಿತ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಮಿಸ್ಡ್ ಕಾಲ್‌ ಮಾಡ್ತಾರೆ. ಬಳಕೆದಾರರು ಈ ಸಂಖ್ಯೆಗಳಿಗೆ ವಾಪಸ್ ಕರೆ ಮಾಡಿದಾಗ ವಂಚಕರು ‘ಪ್ರೀಮಿಯಂ ದರ ಸೇವೆ’ಗೆ  ಕನೆಕ್ಟ್​ ಮಾಡುತ್ತಾರೆ. ಇದೊಂದು ಸ್ಕ್ಯಾಮ್ ಆಗಿದ್ದು, ಈ ಸೇವೆಗಳಿಗೆ ಕರೆ ಮಾಡಲು ಪ್ರತಿ ನಿಮಿಷಕ್ಕೆ ಭಾರೀ ಶುಲ್ಕ ವಿಧಿಸಲಾಗುತ್ತದೆ. ಇಂತಹ ಕರೆಗಳು ಬಳಕೆದಾರರಿಗೆ ಭಾರೀ ಆರ್ಥಿಕ ನಷ್ಟವನ್ನು ಉಂಟು ಮಾಡುತ್ತದೆ.

ವಂಚಕರು ಅಪರಿಚಿತ ಮತ್ತು ವಿಚಿತ್ರ ಕೋಡ್​​ಗಳನ್ನು ಬಳಸಿ ಮಿಸ್ಡ್​ಕಾಲ್ ನೀಡುತ್ತಾರೆ. ಅವು ವಾಪಸ್ ಕರೆ ಮಾಡುವಂತೆ ನಿಮ್ಮನ್ನು ಪ್ರಚೋದಿಸುತ್ತವೆ. ಅದಕ್ಕೆ ‘+91’ ಹೊರತುಪಡಿಸಿ ಯಾವುದೇ ಕೋಡ್‌ನಿಂದ ಕರೆ ಬಂದರೂ ತೆಗೆಯದಿರೋದು ಒಳ್ಳೆಯದು. ಒಮ್ಮೆ ಕರೆ ಸ್ವೀಕರಿಸುವಾಗ ಮತ್ತು ವಾಪಸ್ ಮಾಡುವಾಗ ಜಾಗರೂಕರಾಗಿರಿ. ಅಂತಹ ನಂಬರ್​ಗಳನ್ನು ಬ್ಲಾಕ್ ಮಾಡಿ ಎಂದು ಜಿಯೋ ಮನವಿ ಮಾಡಿಕೊಂಡಿದೆ.

ಅಪರಿಚಿತ ಅಥವಾ ಅನುಮಾನಾಸ್ಪದ ಕರೆಗಳನ್ನು ನಿರ್ಲಕ್ಷಿಸಿ. ಅಂತಹ ವಂಚನೆಯಿಂದ ದೂರ ಇರಲು ನಿಮ್ಮ ಹತ್ತಿರದವರನ್ನೂ ಎಚ್ಚರಿಸಿ. ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಎಚ್ಚರದಿಂದಿರಿ.

ನಿಮಗೆ ಕರೆ ಮಾಡುವವರು ಯಾರು ಎನ್ನುವುದು ತಿಳಿದಿಲ್ಲದಿದ್ದರೆ '+91' ಹೊರತುಪಡಿಸಿ ಬೇರೆ ಯಾವುದೇ ಕೋಡ್‌ನಿಂದ ಕರೆ ಬಂದರೂ ಆ ನಂಬರ್ ಗೆ ಮರಳಿ ಕರೆ ಮಾಡಬೇಡಿ. ಅನುಮಾನಾಸ್ಪದ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಪುನರಾವರ್ತಿತ ಕರೆಗಳು ಬಾರದಂತೆ ತಡೆಯಲಿ ನಿಮ್ಮ ಫೋನ್ ನಲ್ಲಿ ಕಾಲ್ ಬ್ಲಾಕ್  ಆಯ್ಕೆಯನ್ನು ಬಳಸಿ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow