ಜೀವಿತಾವಧಿ ಜೈಲು ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್‌‌ʼಗೆ ಮೇಲ್ಮನವಿ ಸಲ್ಲಿಸಿದ ಪ್ರಜ್ವಲ್ ರೇವಣ್ಣ!

ಸೆಪ್ಟೆಂಬರ್ 29, 2025 - 18:04
 0  19
ಜೀವಿತಾವಧಿ ಜೈಲು ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್‌‌ʼಗೆ ಮೇಲ್ಮನವಿ ಸಲ್ಲಿಸಿದ ಪ್ರಜ್ವಲ್ ರೇವಣ್ಣ!

ಬೆಂಗಳೂರು: ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ನೀಡಿರುವ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪ್ರಜ್ವಲ್ ಅವರು ತಮ್ಮ ಮೇಲಿನ ಶಿಕ್ಷೆಯನ್ನು ರದ್ದುಪಡಿಸಿ ಪ್ರಕರಣದಿಂದ ಖುಲಾಸೆ ಮಾಡಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ. ಹೈಕೋರ್ಟ್‌ನಲ್ಲಿ ವಿಚಾರಣೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಅರ್ಜಿಯ ಮುಖ್ಯ ಅಂಶಗಳು:

  • ದೂರಿನಲ್ಲಿ ಸಂತ್ರಸ್ತೆ ತೋಟದ ಮನೆಯಲ್ಲಿ ಇದ್ದಾಗ ಪೊಲೀಸರು ಬಂದು ಒತ್ತಡ ಹೇರಿ ದೂರು ದಾಖಲಿಸಿದ್ದಾರೆ ಎಂಬ ಆರೋಪ.

  • 2021 ಜನವರಿಯಿಂದ 2022 ಜನವರಿವರೆಗೆ ಬಸವನಗುಡಿಯ ಮನೆಯಲ್ಲಿ ಅತ್ಯಾಚಾರ ನಡೆದಿದೆ ಎಂದು ದೂರಿನಲ್ಲಿ ಹೇಳಿದ್ದರೂ, ಸಾಕ್ಷ್ಯ ಸಂಗ್ರಹದಲ್ಲಿ ಗಂಭೀರ ಲೋಪಗಳಿವೆ ಎಂದು ವಾದ.

  • ಮೂರು ವರ್ಷಗಳ ಕಾಲ ಹಾಸಿಗೆಯ ಬಟ್ಟೆಗಳನ್ನು ಬದಲಾಯಿಸದೆ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂಬುದು ನಂಬಲು ಅಸಾಧ್ಯ ಎಂದು ವಾದ.

  • 2022ರಲ್ಲಿ ಕೆಲಸ ಬಿಟ್ಟಿದ್ದರೂ, 2023ರಲ್ಲಿ ತೋಟದ ಮನೆಯಲ್ಲಿ ನಡೆದ ಗೃಹಪ್ರವೇಶದಲ್ಲಿ ಸಂತ್ರಸ್ತೆ ಭಾಗಿಯಾಗಿದ್ದರು ಎಂಬುದರಿಂದ ಅನುಮಾನ ಹುಟ್ಟಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪ್ರಜ್ವಲ್ ರೇವಣ್ಣ ಪರ ವಕೀಲರು, ತನಿಖಾಧಿಕಾರಿಗಳು ಸಾಕ್ಷ್ಯ ಸಂಗ್ರಹದಲ್ಲಿ ಅನೇಕ ಲೋಪ ಮಾಡಿರುವುದರಿಂದ ನ್ಯಾಯಾಲಯ ನೀಡಿದ ಶಿಕ್ಷೆ ನ್ಯಾಯಸಮ್ಮತವಲ್ಲ ಎಂದು ವಾದಿಸಿದ್ದಾರೆ.ಈ ಎಲ್ಲ ಅಂಶಗಳು ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಸೂಕ್ತವಾದ ಸಾಕ್ಷ್ಯಾಧಾರಗಳಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಿಲ್ಲ.

ಬದಲಾಗಿ ನಂಬಲರ್ಹವಲ್ಲದ, ಅಸ್ವಾಭಾವಿಕ ಮತ್ತು ವಿಶ್ವಾಸಾರ್ಹವಲ್ಲದ ಸಾಕ್ಷ್ಯಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ವಿಡಿಯೋ ತುಣುಕುಗಳಿಂದ ಪ್ರಭಾವಿತಕ್ಕೊಳಗಾಗಿ ಅರ್ಜಿದಾರರಿಗೆ ಶಿಕ್ಷೆ ವಿಧಿಸಿದೆ. ಆದ್ದರಿಂದ, ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಬಹುದಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow