ಭಾರತದ ವಿರುದ್ಧ ವಿವಾದಾತ್ಮಕ ಟ್ವೀಟ್: ಪಾಕ್ ನ ಮೊಹ್ಸಿನ್ ನಖ್ವಿ ಎಕ್ಸ್ ಖಾತೆ ಬ್ಯಾನ್ -
ಏಷ್ಯಾಕಪ್ ಫೈನಲ್ ಮುಗಿದರೂ, ಹ್ಯಾಂಡ್‌ಶೇಕ್ ಮತ್ತು ಟ್ರೋಫಿ ಹಸ್ತಾಂತರ ವಿವಾದಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ, ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಎಕ್ಸ್ ಖಾತೆ ಭಾರತದಲ್ಲಿ ಬ್ಯಾನ್ ಮಾಡಿದೆ. ಟೀಮ್ ಇಂಡಿಯಾ ಏಷ್ಯಾಕಪ್ ಗೆದ್ದ ಬಳಿಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟ್‌ನಲ್ಲಿ ಭಾರತ ತಂಡವನ್ನು ಅಭಿನಂದಿಸಿದ್ದರು: “ಮೈದಾನದಲ್ಲೂ ಆಪರೇಷನ್ ಸಿಂಧೂರ್. ಫಲಿತಾಂಶ ಒಂದೇ – ಭಾರತ ಗೆದ್ದಿದೆ!”
"ಯುದ್ಧವು ನಿಮಗೆ ಹೆಮ್ಮೆಯಾಗಿದ್ದರೆ, ಪಾಕಿಸ್ತಾನದ ಕೈಯಲ್ಲಿ ನೀವು ಅವಮಾನಕರ ಸೋಲುಗಳನ್ನು ಹೊಂದಿದ್ದೀರಿ. ಯಾವುದೇ ಕ್ರಿಕೆಟ್ ಪಂದ್ಯವು ಆ ಸತ್ಯವನ್ನು ಪುನಃ ಬರೆಯಲು ಸಾಧ್ಯವಿಲ್ಲ. ಯುದ್ಧವನ್ನು ಕ್ರೀಡೆಗೆ ಎಳೆದು ತರುವುದು ಹತಾಶೆಯನ್ನು ಬಹಿರಂಗಪಡಿಸುತ್ತದೆ ಮತ್ತು ಆಟದ ಉತ್ಸಾಹವನ್ನೇ ಅವಮಾನಿಸುತ್ತದೆ. ಎಂದು ನಖ್ವಿ ಟ್ವೀಟ್ ಮಾಡಿದ್ದರು.
ಭಾರತದ ವಿರುದ್ಧದ ಈ ವಿವಾದಾತ್ಮಕ ಟ್ವೀಟ್ ಬೆನ್ನಲ್ಲೇ ಇದೀಗ ಮೊಹ್ಸಿನ್ ನಖ್ವಿ ಅವರ ಎಕ್ಸ್ ಖಾತೆಯನ್ನು ಭಾರತದಲ್ಲಿ ತಡೆಯಿಡಲಾಗಿದೆ. ಇದಕ್ಕೂ ಮುನ್ನ ನಖ್ವಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ಲೇನ್ ಸೆಲೆಬ್ರೇಷನ್ ಫೋಟೋ ಹಂಚಿಕೊಳ್ಳುವ ಮೂಲಕ ಭಾರತೀಯ ಜೆಟ್ ಉರುಳಿಸಿದ್ದೇವೆ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದರು.
ಟೀಮ್ ಇಂಡಿಯಾ ಆಟಗಾರರು ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದು, ನಖ್ವಿ ಟ್ರೋಫಿಯನ್ನು ಹೋಟೆಲ್‌ಗೆ ಕೊಂಡೊಯ್ಯುವಂತೆ ಸೂಚಿಸಿದ್ದರು. ಹೀಗಾಗಿ ಭಾರತ ತಂಡವು ಟ್ರೋಫಿ ಇಲ್ಲದೇ ಏಷ್ಯಾಕಪ್ ಟೂರ್ನಿಯಲ್ಲಿ ಸಂಭ್ರಮ ಮಾಡಬೇಕಾಯಿತು.
ನಿಮ್ಮ ಪ್ರತಿಕ್ರಿಯೆ ಏನು?