ಟೀಕೆಗೆಳಿಗೆ ತಕ್ಕ ಉತ್ತರ ಕೊಟ್ಟರು’; ಇಂದಿರಾ ಗಾಂಧಿ ಬಗ್ಗೆ ಮೆಚ್ಚುಗೆ ಸೂಚಿಸಿದ ಕಂಗನಾ.!

ಆಗಸ್ಟ್ 24, 2024 - 10:11
ಆಗಸ್ಟ್ 24, 2024 - 10:53
 0  11
ಟೀಕೆಗೆಳಿಗೆ ತಕ್ಕ ಉತ್ತರ ಕೊಟ್ಟರು’; ಇಂದಿರಾ ಗಾಂಧಿ ಬಗ್ಗೆ ಮೆಚ್ಚುಗೆ ಸೂಚಿಸಿದ ಕಂಗನಾ.!
FOCUS KARNATAKA Kangana Ranaut

ಟೀಕೆಗೆಳಿಗೆ ತಕ್ಕ ಉತ್ತರ ಕೊಟ್ಟರು’; ಇಂದಿರಾ ಗಾಂಧಿ ಬಗ್ಗೆ ಮೆಚ್ಚುಗೆ ಸೂಚಿಸಿದ ಕಂಗನಾ.!


ಎಮರ್ಜೆನ್ಸಿ’ ಸಿನಿಮಾದಲ್ಲಿ ಇಂದಿರಾ ಗಾಂಧಿ ಅವರ ರಾಜಕೀಯದ ಆರಂಭಿಕ ದಿನಗಳಿಂದ ಹಿಡಿದು ಅವರ ಹತ್ಯೆವರೆಗೆ ಎಲ್ಲವನ್ನೂ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಅನುಪಮ್ ಖೇರ್, ಸತೀಶ್ ಶಾ, ಶ್ರೇಯಸ್ ತಲ್ಪಡೆ, ಮಹಿಮಾ ಚೌಧರಿ ನಟಿಸಿದ್ದಾರೆ. ಈಗ ಕಂಗನಾ ಅವರು ಇಂದಿರಾ ಗಾಂಧಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತು ನಟಿ, ಸಂಸದೆ ಕಂಗನಾ ರಣಾವತ್ ಅವರು ಸಿನಿಮಾ ಮಾಡಿದ್ದು, ಅದಕ್ಕೆ ‘ಎಮರ್ಜೆನ್ಸಿ’ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ಕುರಿತಾದ ವಿಚಾರಗಳನ್ನು ಹೇಳಲಾಗಿದೆ. ಈ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ಕಂಗನಾ ಅವರೇ ಮಾಡಿದ್ದಾರೆ. ಅವರು ಕಂಗನಾ ಅವರನ್ನು ಹೊಗಳಿದ್ದಾರೆ. ಕೆಲವು ವಿಚಾರಗಳಲ್ಲಿ ಅವರನ್ನು ತೆಗಳಿದ್ದಾರೆ.

ಇಂದಿರಾ ಗಾಂಧಿ ಅವರು ಸವಲತ್ತು ಪಡೆದಿದ್ದರು. ಅವರು ಅವರು ಪ್ರಧಾನಿಯ ಮಗಳು. ತಮ್ಮ ತಂದೆಯ ಅಧಿಕಾರದ ಅವಧಿಯಲ್ಲಿ ಅಧಿಕೃತ ಸ್ಥಾನಗಳನ್ನು ಹೊಂದಿದ್ದರು. ಇಷ್ಟೆಲ್ಲ ಸವಲತ್ತು ಇದ್ದರೂ ತಮ್ಮನ್ನು ತಾವು ಸಾಬೀತುಪಡಿಸಬೇಕು ಎಂಬ ಸಂಕಲ್ಪವನ್ನು ಹೊಂದಿದ್ದರು. ಇದು ನನಗೆ ಅವರಲ್ಲಿ ಇಷ್ಟವಾದ ಗುಣ. ಅವರು ಸಾಕಷ್ಟು ಸವಲತ್ತುಗಳನ್ನು ಪಡೆದಿರಬಹುದು. ಆದರೆ ಅವರನ್ನು ಟೀಕಿಸಿದಾಗಲೆಲ್ಲಾ ಅವರು ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಅವರು ನಿಜಕ್ಕೂ ವಿನ್ನರ್’ ಎಂದಿದ್ದಾರೆ ಕಂಗನಾ.

ಇಂದಿರಾ ಗಾಂಧಿ ಬಗ್ಗೆ ನೆಗೆಟಿವ್ ವಿಚಾರಗಳೂ ಇವೆ. ಅವರು ತಮ್ಮ ಜೀವನದಲ್ಲಿ ಯಾವುದೇ ಸ್ವಾಭಾವಿಕ ಹೋರಾಟವನ್ನು ಎದುರಿಸಲಿಲ್ಲ. ಯಾರೋ ಮಾಡಿದ ಹೋರಾಟವು ನಿಜವಾಗಿರಲು ಸಾಧ್ಯವಿಲ್ಲ. ನೀವು ಪಿಎಂ ಕುರ್ಚಿಯಲ್ಲಿದ್ದಾಗ, ನೀವು ನಿಸ್ವಾರ್ಥವಾಗಿರಬೇಕು. ನೀವು ಅಹಂಕಾರದಿಂದ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ’ ಎಂದು ಕಂಗನಾ ಹೇಳಿದ್ದಾರೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow