ತಪ್ಪಿಯೂ ಗೂಗಲ್ʼನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡ್ಬೇಡಿ! ಮಾಡಿದ್ರೆ ಪಕ್ಕ ಜೈಲುಪಾಲು

ಫೆಬ್ರವರಿ 6, 2025 - 09:28
 0  12
ತಪ್ಪಿಯೂ ಗೂಗಲ್ʼನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡ್ಬೇಡಿ! ಮಾಡಿದ್ರೆ ಪಕ್ಕ ಜೈಲುಪಾಲು

ವಿಶ್ವದಲ್ಲೇ ಅತ್ಯಂತ ಹೆಚ್ಚು ಹೆಸರುವಾಸಿಯಾದ ಸರ್ಚ್ ಎಂಜಿನ್ ಗೂಗಲ್. ನಮಗೆ ಏನೇ ಬೇಕಿದ್ದರೂ, ಯಾವುದೇ ವಿಷಯದ ಬಗ್ಗೆ ಗೊಂದಲವಿದ್ದರೂ ಥಟ್ ಅಂತ ಸರ್ಚ್​ ಮಾಡೋದು ಗೂಗಲ್​ನಲ್ಲಿ. ಕ್ರಿಕೆಟರ್ಸ್, ಹೀರೋ, ಹೀರೋಯಿನ್​​ಗಳ ಹೆಸರು ಹಾಕಿ ಗೂಗಲ್​ನಲ್ಲಿ ಸರ್ಚ್ ಮಾಡಿದರೆ ಕ್ಷಣಾರ್ಧದಲ್ಲಿ ಅವರ ಫೋಟೋ ಲೆಕ್ಕವಿಲ್ಲದಷ್ಟು ಬಂದು ಬೀಳುತ್ತದೆ. ಆದರೆ, ನಮ್ಮ ಮನಸ್ಸಿಗೆ ಬಂದ ಎಲ್ಲಾ ವಿಚಾರಗಳನ್ನು ಗೂಗಲ್ ನಲ್ಲಿ ಹುಡುಕುವಂತಿಲ್ಲ. ಕೆಲವೊಂದು ವಿಚಾರಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡುವುದು ಕಾನೂನುಬಾಹಿರ. ಇಂಥಹ ವಿಷಯಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಜೈಲು ಪಾಲಾಗುವ ಅಪಾಯವೂ ಎದುರಾಗುತ್ತದೆ. 

ಈ ವಿಷಯಗಳ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಲೇ ಬೇಡಿ : 
ಬಾಂಬ್ ತಯಾರಿಸುವುದು ಹೇಗೆ ? :
ಅನೇಕ ಬಾರಿ ಜನರು ಯಾವುದೇ ಅರ್ಥವಿಲ್ಲದ, ಅಗತ್ಯವಿಲ್ಲದ ವಿಷಯಗಳ ಬಗ್ಗೆ ಹುಡುಕುತ್ತಿರುತ್ತಾರೆ. ಕೇವಲ ಕುತೂಹಲಕ್ಕಾಗಿ ಈ ಹುಡುಕಾಟ ನಡೆಸಬಹುದು. ಆದರೆ, ಈ ಸರ್ಚ್ ಅವರನ್ನು ಜೈಲಿನ ಅತಿಥಿಯಾಗಿಸಬಹುದು. ಅಂಥಹ  ಸರ್ಚ್ ಗಳಲ್ಲಿ ಒಂದು ಬಾಂಬುಗಳನ್ನು ಹೇಗೆ ತಯಾರಿಸಬೇಕು ಎನ್ನುವುದು. ಕುತೂಹಲದ ಉದ್ದೇಶದಿಂದಲೂ ಈ ರೀತಿಯ ಸರ್ಚ್ ಮಾಡಲು ಹೋಗಬೇಡಿ. ಸೈಬರ್ ಸೆಲ್ ಈ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುತ್ತದೆ. ಭದ್ರತಾ ಏಜೆನ್ಸಿಗಳು ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ನೀವು ಜೈಲಿಗೆ ಹೋಗಬೇಕಾಗಬಹುದು. 

ಖಾಸಗಿ ಫೋಟೋ ಮತ್ತು ವೀಡಿಯೊ ಲೀಕ್ : 
ಸಾಮಾಜಿಕ ಮಾಧ್ಯಮ ಅಥವಾ ಗೂಗಲ್‌ನಲ್ಲಿ ಖಾಸಗಿ ಫೋಟೋಗಳು ಅಥವಾ ವೀಡಿಯೊಗಳನ್ನು ಲೀಕ್ ಮಾಡುವುದು ಸಹ ಗಂಭೀರ ಅಪರಾಧ. ಈ ಕೃತ್ಯಕ್ಕಾಗಿ ಕೂಡಾ ನೀವು ಜೈಲು ಸೇರಬಹುದು.  

ಗರ್ಭಪಾತ ಮಾಡುವುದು ಹೇಗೆ ? :
ಗರ್ಭಪಾತದ ಹುಡುಕಾಟ ವಿಧಾನಗಳು ಸಹ ಅಪರಾಧ ವಿಭಾಗದಲ್ಲಿ ಬರುತ್ತದೆ. ಹಾಗಾಗಿ ಈ ವಿಚಾರದ  ಬಗ್ಗೆ ಕೂಡಾ ಸರ್ಚ್ ಮಾಡಬೇಡಿ. ಭಾರತೀಯ ಕಾನೂನಿನ ಪ್ರಕಾರ ವೈದ್ಯರ ಸಲಹೆ ಇಲ್ಲದೆ ಗರ್ಭಪಾತ ಮಾಡುವಂತಿಲ್ಲ.

ಮಕ್ಕಳ ಅಶ್ಲೀಲತೆ :
ಮಕ್ಕಳ ಅಶ್ಲೀಲತೆಯ ಬಗ್ಗೆ ಭಾರತ ಸರ್ಕಾರವು ತುಂಬಾ ಕಟ್ಟುನಿಟ್ಟಾಗಿದೆ. Google ನಲ್ಲಿ ಮಕ್ಕಳ ಅಶ್ಲೀಲ ಫೋಟೋ ವಿಡಿಯೋಗಳನ್ನು ಹುಡುಕುವುದು, ನೋಡುವುದು ಅಥವಾ ಹಂಚಿಕೊಳ್ಳುವುದು ಅಪರಾಧವಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ಜೈಲು ಪಾಲಾಗಬಹುದು.

ಚಲನಚಿತ್ರ ಪೈರಸಿ :
ಸಿನಿಮಾ ಬಿಡುಗಡೆಗೂ ಮುನ್ನ ಆನ್‌ಲೈನ್‌ನಲ್ಲಿ ಲೀಕ್ ಆಗುವುದು ಅಪರಾಧದ ಅಡಿಯಲ್ಲಿ ಬರುತ್ತದೆ. ಆನ್‌ಲೈನ್‌ನಲ್ಲಿ ಸಿನಿಮಾವನ್ನು ಸೋರಿಕೆ ಮಾಡಿದರೆ ಅಥವಾ ಡೌನ್‌ಲೋಡ್ ಮಾಡಿದರೆ ಅದು ಅಪರಾಧ. ಭಾರತ ಸರ್ಕಾರದ ಈ ಕಾನೂನನ್ನು ಉಲ್ಲಂಘಿಸಿದರೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ.ದಂಡ ಪಾವತಿಸಬೇಕಾಗುತ್ತದೆ. 

 

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow