ತುಪ್ಪದ ಬೆಡಗಿಯ HOT ಅವತಾರ: ಮಲ್ಲಿಗೆಯಲ್ಲೇ ಮೈ ಮುಚ್ಚಿದ ರಾಗಿಣಿ!

ಮಾರ್ಚ್ 31, 2025 - 18:11
 0  12
ತುಪ್ಪದ ಬೆಡಗಿಯ HOT ಅವತಾರ: ಮಲ್ಲಿಗೆಯಲ್ಲೇ ಮೈ ಮುಚ್ಚಿದ ರಾಗಿಣಿ!

ರಾಗಿಣಿ ಅಂದ್ರೆನೆ HOT... ಪಡ್ಡೆ ಹುಡುಗರ ನಿದ್ದೆಗೆಡಿಸುವ ಈ ಬ್ಯೂಟಿ ಫೋಟೋ ಇದೀಗ ವೈರಲ್ ಆಗಿದೆ. ಯುಗಾದಿ ಹಬ್ಬಕ್ಕೆ ದುಂಡು ಮಲ್ಲಿಗೆ ಹೂವುಗಳ ಹಾರದ ಬ್ಲೌಸ್​ ತೊಟ್ಟು ಸ್ಪೆಷಲ್ ಲುಕ್ ಕೊಟ್ಟಿದ್ದಾರೆ.

ನಟಿ ರಾಗಿಣಿ ದ್ವಿವೇದಿ ಅವರು ಈ ಬಾರಿ ತುಂಬಾ ವಿಭಿನ್ನವಾಗಿ, ವಿಶೇಷವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಗೋಲ್ಡ್​ ಕಲರ್ ಸ್ಯಾರಿಯಲ್ಲಿ ಕಾಣಸಿರುವ ರಾಗಿಣಿ, ದುಂಡು ಮಲ್ಲಿಗೆ ಹೂವುಗಳ ಹಾರದಿಂದ ತಯಾರಿಸಿದ ರವಿಕೆ ಧರಿಸಿ ಮೋಹಕವಾಗಿ, ಮನಮೋಹಕವಾಗಿ ಪೋಸ್ ಕೊಟ್ಟಿದ್ದಾರೆ. ಒಂದೊಂದು ಫೋಟೋ ಕೂಡ ಯುವಕರ ಕಣ್ಮನ ಸೆಳೆಯುವಂತೆ ಸೊಗಸಾಗಿ ಇವೆ.

ಯುಗಾದಿ ಹಬ್ಬಕ್ಕೆ ತುಪ್ಪದ ಬೆಡಗಿಯ ವಿಭಿನ್ನವಾದ ಫೋಟೋಶೂಟ್‌ ಮಾಡಿಸಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಸುರಿಮಳೆ ಬರುತ್ತಿವೆ. ಹೊಸ ವರ್ಷ, ಹೊಸ ಚಾಪ್ಟರ್‌, ನಿರೀಕ್ಷೆಯೊಂದಿಗೆ ಪ್ರತಿ ಬೆಳಗಿನ ಜಾವವು ಹೊಸ ಅವಕಾಶ ನೀಡುತ್ತದೆ. ಅದನ್ನೇ ಅದ್ಭುತವಾಗಿ ರೂಪಿಸಿಕೊಳ್ಳಿ, ಬದುಕಿನಲ್ಲಿ ಯಶಸ್ಸು, ಸಮೃದ್ಧಿ ಸಿಗಲಿ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow