ತುಮಕೂರಿನ ಲಾಡ್ಜ್’ನಲ್ಲಿಯೇ ಆತ್ಮಹತ್ಯೆಗೆ ಶರಣಾದ ದಾವಣಗೆರೆ PSI..! ಡೆತ್’ನೋಟ್’ನಲ್ಲಿದೆ ಅಸಲಿ ಕಾರಣ!

ಜುಲೈ 6, 2025 - 12:01
 0  30
ತುಮಕೂರಿನ ಲಾಡ್ಜ್’ನಲ್ಲಿಯೇ ಆತ್ಮಹತ್ಯೆಗೆ ಶರಣಾದ ದಾವಣಗೆರೆ  PSI..! ಡೆತ್’ನೋಟ್’ನಲ್ಲಿದೆ ಅಸಲಿ ಕಾರಣ!

ತುಮಕೂರಿನಲ್ಲಿ ಸಂಭವಿಸಿದ ಪಿಎಸ್ ಆತ್ಮಹತ್ಯೆ ಪ್ರಕರಣ ಪೊಲೀಸ್ ಇಲಾಖೆಯಲ್ಲೇ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ ನಾಗರಾಜು (59) ನೇಣಿಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ. ಅಪರಾಧ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಗರಾಜು, ಕಳೆದ ನಾಲ್ಕು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾಗಿದೆ.

ಅವರು ಬರೆದಿರುವ ಡೆತ್ನೋಟ್ನಲ್ಲಿ ಕೌಟುಂಬಿಕ ಕಲಹವೇ ತಮ್ಮ ನಿರ್ಣಯಕ್ಕೆ ಕಾರಣವಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.“ನನ್ನ ಮಗಳು ಮತ್ತು ಅಳಿಯ ತುಂಬಾ ಒಳ್ಳೆಯವರು. ಅಳಿಯ ನನ್ನ ಮಗನಷ್ಟೆ”, ಎಂದು ಭಾವುಕರಾಗಿ ಬರೆದಿದ್ದಾರೆ ನಾಗರಾಜು.

ಅದೇ ಡೆತ್ ನೋಟ್ನಲ್ಲಿ, "ನನ್ನ ಸಾವಿನ ಬಳಿಕ ನನ್ನ ಮಗನಿಗೆ ಕೆಲಸ ಕೊಡಿಸಿ" ಎಂಬ ಮನವಿಯೂ ಮಾಡಿದ್ದಾರೆ. ಇದು ಕುಟುಂಬದ ಭವಿಷ್ಯದ ಬಗ್ಗೆ ಪಿಎಸ್ಐಗೆ ಇದ್ದ ಗಂಭೀರ ಕಾಳಜಿಯನ್ನೇ ಪ್ರತಿಬಿಂಬಿಸುತ್ತದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಸಿಪಿಐ ಅವಿನಾಶ್ ನೇತೃತ್ವದಲ್ಲಿ ಪರಿಶೀಲನೆ ನಡೆದಿತ್ತು. ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಡೆತ್ ನೋಟ್ ಆಧಾರವಾಗಿ ಪ್ರಕರಣದ ತನಿಖೆ ಮುಂದುವರಿಸುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow