ದಿಢೀರ್ ಆಸ್ಪತ್ರೆಗೆ ದಾಖಲಾದ ಗೋಲ್ಡ್ ಸುರೇಶ್! ಅಂತದ್ದೇನಾಯ್ತು!

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿ ಎಲ್ಲರ ಗಮನ ಸೆಳೆದಿದ್ದ ಗೋಲ್ಡ್ ಸುರೇಶ್ ಅವರು ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗೋಲ್ಡ್ ಸುರೇಶ್ ಮೊನ್ನೆ ಮೊನ್ನೆ ಮುಕ್ತಾಯವಾದ ಬಿಗ್ ಬಾಸ್ ಕನ್ನಡದ ಹನ್ನೊಂದನೇ ಸೀಸನ್ನಲ್ಲಿತಮ್ಮ ಆಟದಿಂದ ಗಮನ ಸೆಳೆದಿದ್ದರು.
ಆದರೆ, ಆ ನಂತರ ವ್ಯೆಯಕ್ತಿಕ ಕಾರಣಗಳಿಂದ ಕಾರ್ಯಕ್ರಮದಿಂದ ಹೊರ ಬಂದರು. ನನ್ನನ್ನೇ ನಂಬಿ ಹಲವು ಕುಟುಂಬಗಳಿವೆ, ನಾನು ಬಿಗ್ ಬಾಸ್ ಮನೆಗೆ ಹೋದ ನಂತರ ನನ್ನ ಪತ್ನಿ ಒತ್ತಡಕ್ಕೊಳಗಾದರು, ಬಿಜಿನೆಸ್ ಮ್ಯಾನೇಜ್ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ, ಹೀಗಾಗಿ ಅನಿವಾರ್ಯವಾಗಿ ನಾನು ಮನೆಯಿಂದ ಹೊರ ಬರಬೇಕಾಯ್ತು ಎಂದು ಹೇಳಿದ್ದರು.
ಇನ್ನು, ಬಿಗ್ ಬಾಸ್ ಮನೆಯಲ್ಲಿದ್ದಾಗ ಸುದೀಪ್ ಅವರ ಈ ಗೋಲ್ಡ್ ಶೋಕಿಯ ಕುರಿತು ಅನೇಕ ಸಲ ಮಾತನಾಡಿದ್ದರು. ಚಿನ್ನ ಇಲ್ಲದೆಯೇ ನಿಮ್ಮನ್ನು ನೋಡಲು ಚೆನ್ನ ಎಂದು ಹೇಳುತ್ತಿದ್ದರು. ಗೋಲ್ಡ್ ಸುರೇಶ್ ಅವರ ಪತ್ನಿಯ ಮನದ ಆಸೆ ಕೂಡ ಇದೇ ಆಗಿತ್ತು. ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೆರಳಿದ ನಂತರ ಈ ವಿಚಾರ ಅರಿತ ಗೋಲ್ಡ್ ಸುರೇಶ್ ಸದ್ಯ ಸಿಂಪಲ್ ಆಗಿರಲು ನಿರ್ಧಾರ ಮಾಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿದ್ದಾಗ ಟಾಸ್ಕ್ ವೇಳೆ ಕಾಲಿಗೆ ಗಂಭೀರವಾಗಿ ಪೆಟ್ಟು ಮಾಡಿಕೊಂಡಿದ್ದರು ಗೋಲ್ಡ್ ಸುರೇಶ್. ಈ ಹಿನ್ನೆಲೆಯಲ್ಲಿ ಗೋಲ್ಡ್ ಸುರೇಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ, ಗೋಲ್ಡ್ ಸುರೇಶ್ ಅವರಿಗೆ ಆಪರೇಷನ್ ನಡೆಯಲಿದೆ ಎಂದು ತಿಳಿದು ಬಂದಿದೆ.
ಶೀಘ್ರವೇ ಗುಣಮುಖರಾಗಿ ಎಂದು ಗೋಲ್ಡ್ ಸುರೇಶ್ ಹಾರೈಸಿದರು.
ನಿಮ್ಮ ಪ್ರತಿಕ್ರಿಯೆ ಏನು?






