ಧರ್ಮಸ್ಥಳ ಬುರುಡೆ ಕೇಸ್́ಗೆ ಟ್ವಿಸ್ಟ್: ದೂರುದಾರನ ಮಂಪರು ಪರೀಕ್ಷೆಗೆ SIT ಚಿಂತನೆ
ಮಂಗಳೂರು: ಧರ್ಮಸ್ಥಳದಲ್ಲಿ ಕೆಲವರು ನಾಪತ್ತೆ ಆರೋಪದ ಪ್ರಕರಣ ದಿನೇ ದಿನೇ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ.ದೂರುದಾರ 13 ನೇ ಸ್ಥಳದ ಬಗ್ಗೆ ಬಹಳ ನಂಬಿಕೆ ಹೊಂದಿದ್ದ. ಅಲ್ಲದೆ ಜಿಪಿಆರ್ ಬಳಕೆಗೂ ಒತ್ತಾಯ ಮಾಡಿದ್ದರು. ಎಲ್ಲಾ ಆಧುನಿಕ ತಂತ್ರಜ್ಞಾನಗಳ ಬಳಕೆ ಮಾಡಿದ್ದರೂ, ಶವ ಹೂತ ಕುರುಹು ಸಿಕ್ಕಿಲ್ಲ.
ಮಂಗಳವಾರವೂ ಬರೋಬ್ಬರಿ 9 ಗಂಟೆಯವರೆಗೆ ಶೋಧ ನಡೆಸಿದ ಜಾಗವನ್ನು ಮುಚ್ಚಲು ಸಮಯ ತೆಗೆದುಕೊಂಡಿತ್ತು. ಇಂದು ಕೂಡಾ 13 ನೇ ಸ್ಥಳದಲ್ಲಿ ಬದ್ರತೆ ಮುಂದುವರಿಸಲಾಗಿದೆ. ಇನ್ನೂ 30 ಜಾಗಗಳಲ್ಲಿ 300 ಶವ ಹೂತಿರುವುದಾಗಿ ದೂರು ಕೊಟ್ಟಿದ್ದಾನೆ. ಈಗಾಗಲೇ ಎಲ್ಲೆಡೆಯಿಂದ ದೂರುದಾರನ ಬ್ರೈನ್ ಮ್ಯಾಪಿಂಗ್ ನಡೆಸಲು ಕೂಡಾ ಹಲವರು ಒತ್ತಾಯಪಡಿಸಿದ್ದಾರೆ.
ಉತ್ಖನನ ವೈಫಲ್ಯದ ಜೊತೆ ಇತರೆ ತನಿಖೆಗಳ ಆಧಾರದಲ್ಲಿ ಅರ್ಜಿ ಸಲ್ಲಿಕೆಗೆ ಚಿಂತನೆ ನಡೆದಿದೆ. ದೂರುದಾರನ ಪ್ರಾರಂಭಿಕ ಹೇಳಿಕೆ ಹಾಗೂ ನಂತರ ನೀಡಿದ ಹೇಳಿಕೆಗಳಲ್ಲಿ ಗೊಂದಲವಿದೆಯಾ ಎಂದು ಪರಿಶೀಲನೆಗೆ ಮುಂದಾಗಿದೆ.ಜಾಗಗಳ ಸ್ಥಳ ವಿವರಣೆಗಳಲ್ಲಿ ಸಮಯ, ದಿನಾಂಕ ಮತ್ತು ಭಾಗವಹಿಸಿದವರ ಹೆಸರುಗಳಲ್ಲಿ ಗೊಂದಲವಿದೆಯಾ ಎಂದು ಪರಿಶೀಲಿಸಲಿದೆ.
ತನಿಖೆಯಲ್ಲಿ ದೊರೆತ ತಾಂತ್ರಿಕ ಮಾಹಿತಿ, ದಾಖಲೆಗಳು, ದೂರುದಾರ ನೀಡಿದ ಮೌಖಿಕ ಹೇಳಿಕೆಗಳ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಅರ್ಜಿ ಸಲ್ಲಿಸಲಿದೆ. ಗೊಂದಲವಿದ್ದರೆ ತನಿಖೆಗೆ ಅಗತ್ಯವಾದ ನಿಖರ ಮಾಹಿತಿಯನ್ನು ಪಡೆಯಲು ಮಂಪರು ಪರೀಕ್ಷೆಗೆ ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ.
ನಿಮ್ಮ ಪ್ರತಿಕ್ರಿಯೆ ಏನು?