ಮಹಿಳೆ ಮೇಲೆ ಹಲ್ಲೆ: ನಾ ಡ್ರೈವರ್, ನೀ ನನ್ನ ಲವ್ವರ್' ಹಾಡಿನ ಗಾಯಕನ ಮೇಲೆ ದಾಖಲಾಯ್ತು ದೂರು!

ನವೆಂಬರ್ 5, 2024 - 21:03
 0  17
ಮಹಿಳೆ ಮೇಲೆ ಹಲ್ಲೆ: ನಾ ಡ್ರೈವರ್, ನೀ ನನ್ನ ಲವ್ವರ್' ಹಾಡಿನ ಗಾಯಕನ ಮೇಲೆ ದಾಖಲಾಯ್ತು ದೂರು!

ಬೆಳಗಾವಿ:- ನಿಧಾನಕ್ಕೆ ಕಾರು ಚಲಾಯಿಸಿ” ಎಂದಿದ್ದಕ್ಕೆ ಯುವಕ ಹಾಗೂ ಅವನ ಸಹೋದರಿ ಮೇಲೆ ದೂರು ದಾಖಲಾಗಿದೆ.  ನಾ ಡ್ರೈವರ್, ನೀ ನನ್ನ ಲವ್ವರ್' ಹಾಡಿನ ಖ್ಯಾತಿಯ ಗಾಯಕ ಹಾಗೂ ಜಾನಪದ ಹಿನ್ನೆಲೆ‌ ಗಾಯಕ ಮಾಳು ನಿಪನಾಳ ಅವರು ಶೇಖರ್ ಹಕ್ಯಾಗೋಳ ಎಂಬಾತನ ಮೇಲೆ ಹಾಗೂ ಆತನ ಸಹೋದರಿ ಮೇಲೆ ಹಲ್ಲೆ ಮಾಡಿರುವ ಆರೋಪ ನಿಪನಾಳ ಗ್ರಾಮದ ಹೊರವಲಯದ ಬಳಿ ನಡೆದಿದೆ. 

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಮಾಳು ನಿಪನಾಳ ಮೇಲೆ ಹಲ್ಲೆ ಆರೋಪವನ್ನು ಶೇಖರ್ ಹಕ್ಯಾಗೋಳ ಮಾಡ್ತಿದ್ದಾರೆ

ಮಾಳು ನಿಪನಾಳ ಹಾಗೂ ಆತನ ಸಂಗಡಿಗರು ನಮ್ಮ‌ ಮೈಮೇಲೆ ಕಾರ್ ಹಾಕಿದ ಹಾಗೆ ಮಾಡಿದ್ರುಆವಾಗ ನಮ್ಮ ಅಕ್ಕ ಸಾವಧಾನವಾಗಿ ಕಾರ್ ಚಲಾಯಿಸು ಅಂತ ಹೇಳಿದ್ರು ಅಷ್ಟರೊಳಗೆ ನಮ್ಮ ಬೈಕ್ ಮುಂದುಗಡೆ ಕಾರ್ ಅಡ್ಡಗಟ್ಟಿ ನಿಲ್ಸಿದ್ರು ಬಳಿಕ ನಾನು ಕಾರ್ ಹೀಗೆ ಚಲಾಸ್ತಿನಿ ಅದನ್ನೆಲ್ಲಾ ಕೇಳೋಕೆ ನಿವ್ಯಾರು ಅಂತ ಮಾತಿಗೆ ಮಾತು ಬೆಳೆದು ಜಗಳ ಶುರುವಾಯ್ತು ನನ್ಮ ಮೇಲೆ ಹಾಗೂ ನಮ್ಮ ಅಕ್ಕನ ಮೇಲೆ ಮಾಳು ನಿಪನಾಳ ಹಾಗೂ ಸಂಗಂಡಿಗರು ಹಲ್ಲೆ ಮಾಡಿದ್ರು ಎಂದು  ಶೇಖರ್ ಹಕ್ಯಾಗೋಳ ಹಲ್ಲೆ ಆರೋಪ ಮಾಡಿದ ಅವರು  ನನ್ನ ತಲೆ ಹಾಗೂ ಎದೆ ಭಾಗಕ್ಕೂ ಹಲ್ಲೆ ಮಾಡಿದ್ದಾರೆ.

ನಮ್ಮ ಅಕ್ಕನ ಮೈಮೇಲೆ‌ ಇದ್ದ ಒಡವೆಗಳನ್ನು ಹರಿದು ಹಾಕ್ಕಿದ್ದಾರೆಂದು ಆರೋಪ ಮಾಡಿದ್ದಾರೆಹಲ್ಲೆಗೊಳಗಾದವರು ಚಿಕ್ಕೋಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ  ಘಟನೆ ನಡೆದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow