‘ಕೂಲಿ’ ಅಡ್ವಾನ್ಸ್ ಬುಕ್ಕಿಂಗ್ ನಿಂದಲೇ ₹75 ಕೋಟಿ ಗಳಿಕೆ: ಟಿಕೆಟ್ ದರಕ್ಕೆ ಅಭಿಮಾನಿಗಳ ಆಕ್ರೋಶ
ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಬಿಡುಗಡೆಯ ಮುನ್ನವೇ ದಾಖಲೆ ಬರೆಹ ಆರಂಭಿಸಿದೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಚಿತ್ರಕ್ಕೆ ₹75 ಕೋಟಿಗೂ ಹೆಚ್ಚು ಹಣ ಹರಿದು ಬಂದಿದೆ. ಮೊದಲ ದಿನದ ಕಲೆಕ್ಷನ್ ಹಾಗೂ 100 ಕೋಟಿ ಕ್ಲಬ್ ಪ್ರವೇಶದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರವನ್ನು ಕಲಾನಿಧಿ ಮಾರನ್ ಭಾರೀ ಬಜೆಟ್‌ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ಚಿತ್ರದ ಹೈಪ್ ಹೆಚ್ಚಿದಂತೆ ಟಿಕೆಟ್ ದರದಲ್ಲೂ ಏರಿಕೆ ಕಂಡುಬಂದಿದೆ.
ಚೆನ್ನೈನ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಬೆಲೆ ₹183 ರಿಂದ ₹190 ನಡುವೆ ನಿಗದಿಯಾಗಿದೆ. ಆದರೆ, ಬೆಂಗಳೂರಿನ ಸಿಂಗಲ್ ಸ್ಕ್ರೀನ್‌ಗಳಲ್ಲಿ ದರ ₹250–₹300 ಆಗಿದ್ದು, ಮಲ್ಟಿಪ್ಲೆಕ್ಸ್‌ಗಳಲ್ಲಿ ₹400 ರಿಂದ ಆರಂಭವಾಗಿ ಕೆಲವು ಕಡೆಗಳಲ್ಲಿ ₹500–₹600 ದಾಟಿದೆ. ಸಾಮಾನ್ಯ ಪ್ರೇಕ್ಷಕರಿಗೆ ಈ ದರ ಎಟುಕದಂತಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?