ನಮ್ಮ ಸರ್ಕಾರ ಬಂದಾಗ ಯಾರನ್ನು ಎಲ್ಲಿ ಇಡಬೇಕೋ ಅಲ್ಲಿ ಇಡ್ತೀವಿ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ನಮ್ಮ ಸರ್ಕಾರ ಬಂದಾಗ ಯಾರನ್ನು ಎಲ್ಲಿ ಇಡಬೇಕು ಇಡ್ತೇವೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರು ಅಲ್ಲ ಎಂಬ ಡಿಕೆಶಿ ಹೇಳಿಕೆ ಕುರಿತು ಮಾತನಾಡಿ, ಜೈನರನ್ನೆಲ್ಲಾ ನೆಪ ಮಾಡಿಕೊಂಡಿದ್ದಾರೆ ಅವರು ಅಷ್ಟೇ. ಆದರೆ ಅವರ ಉದ್ದೇಶ ಕೇವಲ ಮುಸ್ಲಿಮರನ್ನು ಗಮನದಲ್ಲಿಟ್ಟುಕೊಂಡು ಮೀಸಲು ಕೊಡೋದಾಗಿದೆ. ತುಷ್ಟೀಕರಣದ ಭಾಗವಾಗಿ ಇದು ನಡೀತಿದೆ. ನಮ್ಮ ಸರ್ಕಾರ ಬಂದಾಗ ಯಾರನ್ನು ಎಲ್ಲಿ ಇಡಬೇಕು ಇಡ್ತೇವೆ ಎಂದು ಟಾಂಗ್ ಕೊಟ್ಟಿದ್ದಾರೆ.
ಬಿಡದಿಯಲ್ಲಿ ದೇಶ ವಿರೋಧ ಬರಹ ಪತ್ತೆ ಬಗ್ಗೆ ಪ್ರತಿಕ್ರಿಯಿಸಿ. ರಾಜ್ಯದಲ್ಲಿ ಇಂದು ಕಾನೂನು ಸುವ್ಯವಸ್ಥೆ ಕೆಟ್ಟಿದೆ. ತನ್ನದೇ ಆದ ಶಕ್ತಿ ಕೆಲವರಿಗೆ ಬಂದಿದೆ. ಈ ಸರ್ಕಾರ ಓಲೈಕೆ ಮಾಡಲು ಮುಂದಾಗಿದೆ. ಅದನ್ನ ಅವರು ಈ ರೀತಿ ದುರ್ಬಳಕೆ ಮಾಡಿಕೊಳ್ತಿದ್ದಾರೆ. ನಮ್ಮನ್ನ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಅಂತ ಅಂದುಕೊಂಡಿದ್ದಾರೆ. ಸರ್ಕಾರ ತನ್ನ ಕಾರ್ಯಕರ್ತರನ್ನ ಕಾಪಾಡಿಕೊಳ್ಳಬೇಕು. ಕಾರ್ಯಕರ್ತರ ಜೇಬು ತುಂಬಬೇಕು. ದೇಶ, ರಾಜ್ಯಕ್ಕಿಂತ ಕಾರ್ಯಕರ್ತರೇ ಹೆಚ್ಚು ಅಂತ ಹೊರಟಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






