ನಿಮ್ಮದು SSLC, PUC ಪಾಸ್ ಆಗಿದ್ಯಾ!? ಹಾಗಿದ್ರೆ ಇಲ್ಲಿದೆ ಸರ್ಕಾರಿ ಕೆಲಸ!

ಜೂನ್ 2, 2025 - 08:07
 0  8
ನಿಮ್ಮದು SSLC, PUC ಪಾಸ್ ಆಗಿದ್ಯಾ!? ಹಾಗಿದ್ರೆ ಇಲ್ಲಿದೆ ಸರ್ಕಾರಿ ಕೆಲಸ!

ನಿಮ್ಮದು, SSLC, PUC ಆಗಿದ್ಯಾ!? ಹಾಗಿದ್ರೆ ನಿಮಗಿಲ್ಲಿದೆ ಗುಡ್ ನ್ಯೂಸ್. ನೀವು ಜಾಬ್ ಸರ್ಚ್ ಮಾಡ್ತಿದ್ರೆ ನಿಮಗಿಲ್ಲಿದೆ ಗುಡ್ ನ್ಯೂಸ್.. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿಯು ಅಧಿಕೃತ ಅಧಿಸೂಚನೆಯ ಮೂಲಕ ಕೀಟ ಸಂಗ್ರಾಹಕ, ಸ್ವಯಂಸೇವಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.  

ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪಾಸ್​​ ಆದವರು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಜೂನ್ 09 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು. 

DHFWS ಯಾದಗಿರಿ ಹುದ್ದೆಯ ಅಧಿಸೂಚನೆ:
ಸಂಸ್ಥೆಯ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿ
ಹುದ್ದೆಗಳ ಸಂಖ್ಯೆ: 21
ಉದ್ಯೋಗ ಸ್ಥಳ: ಯಾದಗಿರಿ – ಕರ್ನಾಟಕ
ಹುದ್ದೆ ಹೆಸರು: ಕೀಟ ಸಂಗ್ರಾಹಕ, ಸ್ವಯಂಸೇವಕರು
ಸಂಬಳ: ತಿಂಗಳಿಗೆ ರೂ.15114/-

ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ಸ್ಥಳದಲ್ಲಿ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣ, ಯಾದಗಿರಿ.

ಕೀಟ ಸಂಗ್ರಾಹಕ ಹುದ್ದೆಗಾಗಿ 100ದಿನಗಳ ಅವಧಿಗೆ ಸೂಕ್ತ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ನೇರ ಸಂದರ್ಶವನ್ನು ಕರೆಯಲಾಗಿದ್ದು ಆಸಕ್ತಿಉಳ್ಳವ ಅಭ್ಯರ್ಥಿಗಳು ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳ ಸಭಾಂಗಣದಲ್ಲಿ ದಿನಾಂಕ:04.06.2025ರ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 05:00 ರೊಳಗಾಗಿ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow